Why Bihar is burning reveals Prashant Kishor : ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿವೆ. ಈ ಮಧ್ಯ ಸರ್ಕಾರವು ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಹಾಗಾಗಿ ಸೇನೆ ಮತ್ತು ವಾಯುಪಡೆಯ ಅಧಿಕಾರಿಗಳು ನೇಮಕಾತಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಈ ಬಗ್ಗೆ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದು ಹೀಗೆ


ಈ ಅಗ್ನಿವೀರ್‌ಗಳಿಗೆ, ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಚಿವಾಲಯಗಳ ನೇಮಕಾತಿಗಳಲ್ಲಿ ಸರ್ಕಾರವು 10% ಮೀಸಲಾತಿಯನ್ನು ಘೋಷಿಸಿದೆ ಮತ್ತು ಇತರ ಇಲಾಖೆಗಳಲ್ಲಿ ಹಲವಾರು ಪ್ರೋತ್ಸಾಹ ಮತ್ತು ನೇಮಕಾತಿಗೆ ಭರವಸೆ ನೀಡಿದ. ಆದ್ರೆ, ಈ ಯೋಜನೆ ವಿರೋಧಿಸಿ ಕಳೆದ 4 ದಿನಗಳಿಂದ ಬಿಹಾರದಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದು ಅದು ಹಿಂಸಾತ್ಮಕ ಘಟನೆಗಳಿಗೆ ತಿರುಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಬೆಂಕಿ ಅವಘಡಗಳು, ವಿಧ್ವಂಸಕ ಕೃತ್ಯಗಳ ಜತೆಗೆ ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಬಿಹಾರದಲ್ಲಿ ಈ ಘಟನೆಗಳು ನಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಉತ್ತರ ನೀಡಿದ್ದಾರೆ.


ಇದನ್ನೂ ಓದಿ : Viral Video: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಭರ್ಜರಿ ಡ್ಯಾನ್ಸ್..!


'ಜೆಡಿಯು-ಬಿಜೆಪಿ ಜಟಾಪಟಿಯಲ್ಲಿ ಬಿಹಾರ ಹೊತ್ತಿ ಉರಿದಿದೆ' 


ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಈ ಯೋಜನೆಯನ್ನು ವಿರೋಧಿಸುವವರು, ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಯುವಜನರಲ್ಲಿ ಮನವಿ ಮಾಡಿದ್ದಾರೆ.


ಬಿಜೆಪಿ ನಡುವಿನ ಪರಸ್ಪರ ಕಚ್ಚಾಟದ ಪರಿಣಾಮ ಬಿಹಾರದ ಜನರ ಮೇಲಾಗುತ್ತಿದೆ. ಇಡೀ ಬಿಹಾರ ಹೊತ್ತಿ ಉರಿಯುತ್ತಿದ್ದು, ಎರಡೂ ಪಕ್ಷಗಳ ನಾಯಕರು ವಿಷಯವನ್ನು ಬಗೆಹರಿಸುವ ಬದಲು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ ಎಂದು ಗುಡುಗಿದ್ದಾರೆ. 


ಇದನ್ನೂ ಓದಿ : Father’s Day 2022: ಅಪ್ಪನೆಂಬ ಅಪ್ಪುಗೆ ಸಾಕು ಈ ಜೀವಕೆ.. ಮಕ್ಕಳ ಮೊದಲ ಹೀರೋ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.