ನವದೆಹಲಿ: ಈಗ ಭಾರತದಲ್ಲಿ ರಫೇಲ್ ಹಗರಣ ವಿಚಾರ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ನೀಡಿದ ಹೇಳಿಕೆಯಿಂದ ಭಾರಿ ಸುದ್ದಿ ಮಾಡಿದೆ. ಮಿಡಿಯಾ ಪಾರ್ಟ್ ಗೆ ಅವರು ನೀಡಿದ ಸಂದರ್ಶನದಲ್ಲಿ ಪ್ರಸಕ್ತ ಮೋದಿ ಸರ್ಕಾರವು ಅನಿಲ್ ಅಂಬಾನಿ ರಿಲಯನ್ಸ್ ಕಂಪನಿಯನ್ನು ದಸಾಲ್ಟ್ ಗೆ ರಫೇಲ್ ಯುದ್ದ ವಿಮಾನ ಉತ್ಪಾದನೆಯಲ್ಲಿ ಭಾರತದ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿತ್ತು. ಇದರಿಂದ ಫ್ರಾನ್ಸ್ ಸರ್ಕಾರಕ್ಕೆ ಯಾವುದೇ ಆಯ್ಕೆ ಇಲ್ಲದೆ ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಹೊಲಾಂಡ್ ಅವರ ಹೇಳಿಕೆ ನಂತರ ದೇಶದ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ಹಿಗ್ಗಾಮುಗ್ಗಾ ಟಿಕಿಸಿದವು. ಆದರೆ ಈಗ ರಫೇಲ್ ನಲ್ಲಿ ಮುಖ್ಯ ಪಾಲುದಾರರಾಗಿರುವ ಡಸ್ಸಾಲ್ಟ್ ಕಂಪನಿ ಈಗ ಈ ವಿವಾದ ಕುರುತಾಗಿ ಮೌನವನ್ನು ಮುರಿದಿದೆ.ವಿಶ್ವದಲ್ಲೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಹೆಸರು ಮಾಡಿದಂತಹ ಸಂಸ್ಥೆ. ಅಂತಹ ಸಂಸ್ಥೆ ಈಗ ತಾವೇಕೆ ಭಾರತದಲ್ಲಿ ಅನಿಲ್ ಅಂಬಾನಿ ಕಂಪನಿ ರಿಲಯನ್ಸ್ ಸಾಲದಲಿದ್ದರು ಕೂಡ ಪಾಲುದಾರರನ್ನಾಗಿ ಮಾಡಿಕೊಂಡಿದ್ದೇಕೆ ಎನ್ನುವುದರ ಕುರಿತಾಗಿ ಬಾಯಿ ಬಿಟ್ಟಿದೆ.


ಎನ್ಡಿಟಿವಿ ತಿಳಿಸಿರುವ ಈ ಫ್ರೆಂಚ್ ಕಂಪನಿ ಡಸಾಲ್ಟ್ ಭಾರತದಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಿದ್ದೇಕೆ ಎಂದರೆ ಅದು ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯಾಗಿದೆ ಮತ್ತು ನಾಗಪುರದಲ್ಲಿ ಯುದ್ದ ವಿಮಾನಗಳ ಪರೀಕ್ಷೆಗಾಗಿ ರನ್ ವೆಯನ್ನು ಹೊಂದಿದೆ ಎಂದು ತಿಳಿಸಿದೆ. ಆದರೆ ಈ ಸಮರ್ಥನೆಯನ್ನು ವಿರೋಧ ಪಕ್ಷಗಳು ಮಾತ್ರ ಒಪ್ಪುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಫ್ರಾನ್ಸ್ ನಿಂದ ಖರೀದಿ ಮಾಡಿರುವ 8.6 ಶತಕೋಟಿ ಡಾಲರ್ ಮೊತ್ತದ 36 ಯುದ್ದ ವಿಮಾನಗಳ ವ್ಯಾಪಾರದಿಂದ ಅನಿಲ್ ಅಂಬಾನಿ ಕಂಪನಿ ಲಾಭ ಪಡೆದಿದೆ ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ನೇರವಾಗಿ ರಿಲಯನ್ಸ್ ಪರ ವ್ಯವಹಾರ ಕುದುರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.