ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬಿಲ್ ಗೇಟ್ಸ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರದಂದು ಪಾಟ್ನಾದಲ್ಲಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಹವಾಮಾನ ಬದಲಾವಣೆಯು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯೆಂದು ಒಪ್ಪಿಕೊಂಡಿದ್ದಕ್ಕಾಗಿ ಮತ್ತು ಹವಾಮಾನ ವೈಪರೀತ್ಯದಿಂದ ತಂದ ಸಂಕೀರ್ಣ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಕೃಷಿ ಕ್ಷೇತ್ರದ ಬಗೆಗಿನ ಅವರ ಕಾಳಜಿ ಬಗ್ಗೆ ಬಿಲ್ ಗೇಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


'ಕಳೆದ 10 ವರ್ಷಗಳಿಂದ ನಾನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನೋಡಿದ್ದೇನೆ. ಅವರು ನಮ್ಮ ಪ್ರತಿಷ್ಠಾನದೊಂದಿಗೆ ಬಿಹಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಅವರೊಂದಿಗೆ ಐದುಗಳ ನಂತರ ನಡೆಸಿದ ಮೊದಲ ಸಭೆ ಇದು. ಅವರು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ ' ಎಂದು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ ಮಾಲೀಕ ಬಿಲ್ ಗೇಟ್ಸ್ ಭಾನುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.


'ನಾನು ಸಿಯಾಟಲ್ ಅಥವಾ ವಾಷಿಂಗ್ಟನ್ ಡಿಸಿ ಅಥವಾ ಲಂಡನ್ ಅಥವಾ ಪ್ಯಾರಿಸ್ನಲ್ಲಿದ್ದಾಗ, ಹವಾಮಾನ ಬದಲಾವಣೆ ಒಂದು ದೊಡ್ಡ ವಿಷಯವಾಗಿದೆ. ಆದರೆ ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರು 'ನಮಗೆ ಹವಾಮಾನ ಬದಲಾವಣೆಯ ಸಮಸ್ಯೆ ಇದೆ' ಎಂದು ಹೇಳಿದಾಗ ನಾನು ಪ್ರಭಾವಿತನಾಗಿದ್ದೆ ಮತ್ತು ಶುದ್ಧ ನೀರು ಸರಬರಾಜನ್ನು ಸುಧಾರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವ ಅಗತ್ಯದ ಮಾತನಾಡಿರುವ ನಿತೀಶ್ ಕುಮಾರ್ ಬಗ್ಗೆ ಬಿಲ್ ಗೇಟ್ಸ್ ಹೇಳಿದರು. ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.