Congress: 10 ವರ್ಷಗಳ ನಂತರ ಲೋಕಸಭೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಾಗ ಕಾಂಗ್ರೆಸ್ ಪುನರಾಗಮನ ಮಾಡುತ್ತಿದೆ, 'ಮೋದಿ ಮ್ಯಾಜಿಕ್' ಮರೆಯಾಗುತ್ತಿದೆ ಎನ್ನಲಾಗಿತ್ತು. ಆದರೆ ಅದರ ನಂತರ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿ ಆರು ತಿಂಗಳು ಕಳೆದಿರಲಿಲ್ಲ. ಫಲಿತಾಂಶಕ್ಕೂ ಮುನ್ನ ನಡೆದಿದ್ದ ಗ್ರೌಂಡ್ ರಿಪೋರ್ಟ್‌ಗಳು ಅಲ್ಲಿ ಕಾಂಗ್ರೆಸ್‌ಗೆ ಲಾಭವಾಗಬಹುದು ಎಂದಿತ್ತು. ಆದರೆ ಫಲಿತಾಂಶಗಳು ಉಲ್ಟಾ ಹೊಡೆದಿತ್ತು. ಇನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಜಾರ್ಖಂಡ್‌ನಲ್ಲಿಯೂ, ಸ್ಥಾನಗಳ ವಿಷಯದಲ್ಲಿ, ಪಕ್ಷವು ಕಳೆದ ಬಾರಿ ಇದ್ದಂತೆಯೇ ಇತ್ತು. ಹಾಗಾದರೆ ವಿಧಾನಸಭಾ ಚುನಾವಣೆ ವಿಚಾರಕ್ಕೆ ಬಂದಾಗ ಕಾಂಗ್ರೆಸ್‌ ಏಕೆ ಮಂಕಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 3 ವರ್ಷಗಳ ಪ್ರೀತಿ.. ಮದುವೆಯಾದ 16 ದಿನದಲ್ಲಿ ಮನಸ್ತಾಪ.. 6 ತಿಂಗಳಲ್ಲೇ ವಿಚ್ಛೇದನ ಪಡೆದ ಸ್ಟಾರ್‌ ನಟಿ ಈಕೆ!


ಮಹಾರಾಷ್ಟ್ರ ಮತ್ತು ಹರಿಯಾಣ:
ಮಹಾ ವಿಕಾಸ್ ಅಘಾಡಿಯ ಭಾಗವಾಗಿರುವ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತಮ ಯಶಸ್ಸನ್ನು ಕಂಡಿತು. ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಯಲ್ಪಡುವ ವಿದರ್ಭದಲ್ಲಿ ಎಂವಿಎ 10 ಸ್ಥಾನಗಳಲ್ಲಿ ಏಳನ್ನು ಗೆದ್ದುಕೊಂಡಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 16 ಸ್ಥಾನಗಳನ್ನು ಗಳಿಸಿತು. ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ತನ್ನ ಕಾರ್ಯಕರ್ತರು, ಸಂಘಟನೆ ಮತ್ತು ಆರೆಸ್ಸೆಸ್ ನಿರ್ವಹಣೆಯ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಇದರ ತೀವ್ರ ಕೊರತೆಯಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಎರಡರಲ್ಲೂ ಬಿಜೆಪಿ ವಿರುದ್ಧ ಕೋಪವಿತ್ತು ಆದರೆ ಅದರ ದೌರ್ಬಲ್ಯದಿಂದಾಗಿ ಕಾಂಗ್ರೆಸ್‌ಗೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಆ ಅಸಮಾಧಾನ ಆ ಪಕ್ಷದ ಪರವಾಗಿ ತಿರುಗಲು ಸಾಧ್ಯವಾಗಲಿಲ್ಲ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಸಂಘಟನೆಗಿಂತ ತಂತ್ರಜ್ಞರು ಹೆಚ್ಚು ಪ್ರಬಲರಾಗಿದ್ದಾರೆ.


ಈ ತಂತ್ರಗಾರರು ಚುನಾವಣಾ ತಂತ್ರಗಳನ್ನು ರೂಪಿಸುತ್ತಾರೆ ಆದರೆ ಟಿಕೆಟ್ ಹಂಚಿಕೆ ಹೇಗೆ ಮುಂತಾದ ಪ್ರಮುಖ ಸ್ಥಳಗಳಲ್ಲಿ ಕಾಂಗ್ರೆಸ್‌ನ  ಸಂಘಟನಾ ರಚನೆಯ ದೌರ್ಬಲ್ಯ ಹೇಗೆ ಸರಿಪಡಿಸುವುದು ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸುವುದಿಲ್ಲ. ಇದರ ಪರಿಣಾಮ ಪ್ರಾದೇಶಿಕ ಸಕರ್ಾರಗಳು ಪ್ರಾಬಲ್ಯ ಮೆರೆದಿದ್ದು, ಹಲವು ಬಾರಿ ಟಿಕೆಟ್ ಹಂಚಿಕೆಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ. ಇದು ಹರಿಯಾಣದಲ್ಲಿಯೂ ಕಂಡುಬಂದಿದೆ. ಸಂಘಟನೆಯಲ್ಲಿನ ದೌರ್ಬಲ್ಯ ಮತ್ತು ಪ್ರಾದೇಶಿಕ ಸತ್ರಗಳ ನಡುವಿನ ಪರಸ್ಪರ ಜಗಳದಿಂದಾಗಿ, ಕಾಂಗ್ರೆಸ್ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.


ಕುಮಾರಿ ಸೆಲ್ಜಾ ಅವರ ಅಸಮಾಧಾನದ ಸುದ್ದಿ ಹರಿಯಾಣ ಚುನಾವಣೆಯ ಉದ್ದಕ್ಕೂ ಚಾಲ್ತಿಯಲ್ಲಿತ್ತು. ಬಿಜೆಪಿ ದಲಿತರ ಕಾರ್ಡ್‌ ಬಳಸುವ ಮೂಲಕ ಈ ವಿಷಯವನ್ನು ಬಂಡವಾಳ ಮಾಡಿಕೊಂಡಿತು ಆದರೆ ಕಾಂಗ್ರೆಸ್‌ಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ವಿನೇಶ್ ಫೋಗಟ್ ಅವರನ್ನು ಪಕ್ಷಕ್ಕೆ ಕರೆತಂದು ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಕೇವಲ ಜಾಟ್ಗಳ ಪಕ್ಷವಾಗಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಸೋಶಿಯಲ್ ಇಂಜಿನಿಯರಿಂಗ್, ಸೀಟುವಾರು ಅಭ್ಯರ್ಥಿ ಆಯ್ಕೆ ಮತ್ತು ಬಲಿಷ್ಠ ಸಂಘಟನೆಯ ಆಧಾರದ ಮೇಲೆ ಬಿಜೆಪಿ ಸೋತಂತೆ ತೋರುತ್ತಿದ್ದ ಆಟವನ್ನು ಅದ್ಭುತವಾಗಿ ಉರುಳಿಸಿ ತನ್ನತ್ತ ಮಾಡಿಕೊಂಡಿತ್ತು.


ಕಾಂಗ್ರೆಸ್ಸಿನ ಪ್ರಮುಖ ಕೊರತೆಯೆಂದರೆ, ಎಲ್ಲಾದರೂ ಗೆಲ್ಲುವ ಭರವಸೆ ಇದೆ ಎಂದು ತೋರಿದರೆ ಅಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಗಮನವನ್ನು ಕಳೆದುಕೊಳ್ಳುತ್ತದೆ. ಈ ಹಿಂದೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಇದೇ ರೀತಿ ಕಂಡುಬಂದಿತ್ತು. ಎಂಪಿಯಲ್ಲಿ, ಕಮಲ್ ನಾಥ್ ಮರಳುತ್ತಾರೆ ಮತ್ತು ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಸರ್ಕಾರ ಪುನರಾವರ್ತನೆಯಾಗುತ್ತದೆ ಎಂದು ಕಾಂಗ್ರೆಸ್ ಭಾವಿಸಲು ಪ್ರಾರಂಭಿಸಿತು. ಆದ್ದರಿಂದ, ಅಧಿಕಾರಗಳನ್ನು ಸಂಪೂರ್ಣವಾಗಿ ಈ ನಾಯಕರಿಗೆ ಹಸ್ತಾಂತರಿಸ,ಲ ಸಂಘಟನೆಯನ್ನು ನಿರ್ಲಕ್ಷಿಸಲಾಯಿತು... ಇದರ ಫಲಿತಾಂಶ ಮುಂದೇನಾಯಿತು ಎಂಬುದು ನಿಮಗೇ ತಿಳಿದಿದೆ.


ಬಿಜೆಪಿ ಕೂಡ ತಂತ್ರಗಾರರನ್ನು ನಂಬುತ್ತದೆ. ಆದರೆ ಸಂಘಟನೆ ಮತ್ತು ಪಕ್ಷದ ಹಿತಾಸಕ್ತಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಅವರಿಗೆ ಅವಕಾಶ ನೀಡುವುದಿಲ್ಲ. ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜನರ ಅಸಮಾಧಾನವನ್ನು ಗ್ರಹಿಸಿ, ಅಗತ್ಯವಿರುವಲ್ಲೆಲ್ಲಾ ಒಂದು ಹೆಜ್ಜೆ ಹಿಂದಕ್ಕೆ ಇಡುತ್ತದೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಸೇರಿದಂತೆ ಹಲವು ಸಮಸ್ಯೆಗಳಿದ್ದವು. ಆದರೆ ಬಿಜೆಪಿ ತನ್ನ ಹಿಂದುತ್ವ ಕಾರ್ಡ್‌ನೊಂದಿಗೆ ಹೆಣ್ಣಿಗೆ ಬೇಕಾದ ಸವಲತ್ತು, ರೈತರಿಗೆ ಬೇಕಾದ ಸೌಲಭ್ಯಗಳನ್ನು ನೀಡುವ ಘೋಷಣೆ ಹೊರಡಿಸಿ ಯಶಸ್ವಿಯಾಯಿತು.


ಇದರ ವಿರುದ್ಧ ಕಾಂಗ್ರೆಸ್ ಏನು ಮಾಡಿದೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರೊಂದಿಗೆ ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತಲೇ ಇದ್ದರು. ಆದರೆ ಎಂವಿಎ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಬದಲಾಗಿ ನಾನಾ ಪಟೋಲೆಯಂತಹ ನಾಯಕರು ಈಗಾಗಲೇ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಹೇಳುತ್ತಲೇ ಇದ್ದಾರೆ. ಶರದ್ ಪವಾರ್ ಕೂಡ ಗರಿಷ್ಠ ಸ್ಥಾನ ಪಡೆದ ಪಕ್ಷ ಸಿಎಂ ಆಗಲಿದೆ ಎಂದು ಹೇಳುತ್ತಲೇ ಇದ್ದರು.


ಇವೆಲ್ಲವನ್ನೂ ತುಲನಾತ್ಮಕವಾಗಿ ನೋಡಿದರೆ, ಒಂದೆಡೆ ಬಿಜೆಪಿ ಕಡೆಯಿಂದ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ ಅವರಂತಹ ಮುಖಗಳಿದ್ದರೆ, ಮತ್ತೊಂದೆಡೆ ಎಂವಿಎ ಕಡೆಯಿಂದ ಮುಂದೆ ಬಂದು ಇವರಿಗೆ ಪೈಪೋಟಿ ನೀಡುವ ಮುಖವೇ ಇರಲಿಲ್ಲ. ಈ ಕೊರತೆಯನ್ನು ಉದ್ಧವ್ ಠಾಕ್ರೆ ರೂಪದಲ್ಲಿ ತುಂಬಬಹುದಿತ್ತು ಆದರೆ ಎಲ್ಲಾ ಘಟಕ ಪಕ್ಷಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಲೇ ಇದ್ದವು.


ಒಂದೆಡೆ, ಬಿಜೆಪಿ ಲಡ್ಕಿ ಬಹಿನ್ ಮತ್ತು ಏಕ್ ಹೈ ತೋ ಸೇಫ್ ಹೈ ಎಂಬ ಘೋಷಣೆಗಳನ್ನು ಆಡುತ್ತಿದ್ದರೆ, ಎಂವಿಎಗೆ ಭರವಸೆಗಳನ್ನು ನೀಡುವುದನ್ನು ಹೊರತುಪಡಿಸಿ ಹೇಳಲು ಏನೂ ಇರಲಿಲ್ಲ. ಕಾಂಗ್ರೆಸ್ ಜಾತಿ ಗಣತಿ, ಮೀಸಲಾತಿ ಉಳಿಸಿ, ಅಂಬಾನಿ-ಅದಾನಿ ಹೆಸರುಗಳ ಬಗ್ಗೆ ಗಲಾಟೆ ಮಾಡುತ್ತಲೇ ಇತ್ತು ಆದರೆ ಸ್ಥಳೀಯ ಸಮಸ್ಯೆಗಳ ಹೆಸರಿನಲ್ಲಿ ಮಹಾರಾಷ್ಟ್ರಕ್ಕೆ ಏನೂ ನೀಡಲು ಮುಂದಾಗಿರಲಿಲ್ಲ. ಹೀಗಾಗಿ ಸೋಲನ್ನು ಎದುರಿಸಬೇಕಾಯಿತು.


ಉದ್ಧವ್ ಠಾಕ್ರೆ-ಶರದ್ ಪವಾರ್-ಕಾಂಗ್ರೆಸ್ ನೇತೃತ್ವದ ಎಂವಿಎಯಲ್ಲಿ ಯಾವುದೇ ಸೈದ್ಧಾಂತಿಕ ಸಾಮ್ಯತೆ ಇಲ್ಲ ಎಂದು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕಾಗಿತ್ತು, ಆದ್ದರಿಂದ ಕನಿಷ್ಠ ಯಾರಾದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಿಎಂ ಮುಖದೊಂದಿಗೆ ಬರಬೇಕಿತ್ತು ಆದರೆ ಅದು ಆಗಲಿಲ್ಲ. ಉದ್ಧವ್ ಸೇನಾ ತನ್ನದೇ ಆದ ಪ್ರಣಾಳಿಕೆಯನ್ನು ಪ್ರಸ್ತುತಪಡಿಸುತ್ತಿರುವುದು ಕಂಡುಬಂದರೆ, MVA ವಿಭಿನ್ನ ಕಾರ್ಯಸೂಚಿಯನ್ನು ಪ್ರಸ್ತುತಪಡಿಸುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ: ವಿರಾಟ್ ಕೊಹ್ಲಿ ಅಲ್ಲದಿದ್ರೆ ಯಾರಾಗ್ತಾರೆ 'ಆರ್‌ಸಿ‌ಬಿ' ಕ್ಯಾಪ್ಟನ್?


ಕಾಶ್ಮೀರ ಮತ್ತು ಜಾರ್ಖಂಡ್
ಕೆಲ ಸಮಯದ ಹಿಂದೆ ಕಾಶ್ಮೀರದಲ್ಲಿ ಚುನಾವಣೆ ನಡೆದಾಗ ಅಲ್ಲಿನ 90 ಸೀಟುಗಳ ಪೈಕಿ 6 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು. ಒಮರ್ ಅಬ್ದುಲ್ಲಾ ಅವರ ಜೂನಿಯರ್ ಪಾಲುದಾರನಾಗಿ ತೃಪ್ತಿಪಡಬೇಕಾಗಿತ್ತು. ಕಾಂಗ್ರೆಸ್ ಅಲ್ಲಿ ಯಾವುದೇ ಪವಾಡ ತೋರಿಸಲು ಸಾಧ್ಯವಾಗಲಿಲ್ಲ. ಅದರಿಂದ ಏನೇ ಲಾಭವಾದರೂ ಒಮರ್ ಅಬ್ದುಲ್ಲಾ ಪಕ್ಷದ ನ್ಯಾಷನಲ್ ಕಾನ್ಫರೆನ್ಸ್ ಸಿಕ್ಕಿತು. ಅದೇ ರೀತಿ, ಜಾರ್ಖಂಡ್ ಚುನಾವಣೆಯನ್ನು ನೋಡಿದರೆ, ಕಾಂಗ್ರೆಸ್ ತನ್ನ ಹಿಂದಿನ ಪ್ರದರ್ಶನವನ್ನೇ ಪುನರಾವರ್ತಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೇವಲ 16 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಇದಕ್ಕೆ ಕಾರಣ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸ್ಥಳೀಯ ನಾಯಕತ್ವವನ್ನು ಬಹಳ ದಿನಗಳಿಂದ ಬೆಳೆಸಲು ಸಾಧ್ಯವಾಗಿಲ್ಲ. ಜಾರ್ಖಂಡ್‌ನಲ್ಲಿ, ಬಿಜೆಪಿ ಇಬ್ಬರು ಬುಡಕಟ್ಟು ಸಿಎಂಗಳನ್ನು ನೀಡಿತ್ತು, ಜೆಎಂಎಂ ಈ ಬಾರಿ ಬುಡಕಟ್ಟು ಮತ್ತು ಹೊರಗಿನವರ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡಿತ್ತು. ಕಾಂಗ್ರೆಸ್ ಇನ್ನೂ ತನ್ನ ಹಳೆಯ ಹಾದಿಯನ್ನು ಅನುಸರಿಸುತ್ತಿದೆ. ಈ ಕಾರಣಗಳಿಂದಾಗಿ ರಾಜ್ಯಗಳಲ್ಲಿ ಇತರ ಪಕ್ಷಗಳ ಊರುಗೋಲಿನ ನೆರವನ್ನು ಕಾಂಗ್ರೆಸ್ ಪಡೆಯಬೇಕಾಗಿದ್ದು, ಸ್ವಂತ ಬಲವನ್ನು ಕಾಣಲು ಸಾಧ್ಯವಾಗುತ್ತಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ