ನವದೆಹಲಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರದಂದು ತರಾಟೆಗೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತೀಯರು ಸಿಲುಕಿರುವಾಗ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ.


ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಅವರು ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು."ಇದೀಗ ಏನಾಗುತ್ತಿದೆ ನೋಡಿ.ಉಕ್ರೇನ್‌ನಲ್ಲಿ (Russia Ukraine War) ಯುದ್ಧ ನಡೆಯುತ್ತಿದೆ ಮತ್ತು ಮೋದಿ ಇಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ.ಇಲ್ಲಿ ಯಾವುದು ಮುಖ್ಯವಾಗಬೇಕು ಹೇಳಿ ? ನಮ್ಮ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುವುದು ಮುಖ್ಯವಲ್ಲವೇ?" ಎಂದು ದೀದಿ ಪ್ರಶ್ನಿಸಿದರು.


ಇದನ್ನೂ ಓದಿ: ವಾರಣಾಸಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ


"ನೀವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಮತ್ತು ಯುದ್ಧವು ಪ್ರಾರಂಭವಾಗಲಿದೆ ಎಂದು ಮೂರು ತಿಂಗಳ ಮೊದಲೇ ತಿಳಿದಿದ್ದರೆ, ನೀವು ಭಾರತೀಯರನ್ನು ಉಕ್ರೇನ್‌ನಿಂದ ಏಕೆ ಮರಳಿ ಕರೆತರಲಿಲ್ಲ?" ಎಂದು ಅವರು ಪ್ರಶ್ನಿಸಿದರು.


ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ಅವರು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು, ಇದು ಕಲಹದಿಂದ ಪೀಡಿತ ರಾಷ್ಟ್ರದಲ್ಲಿರುವ ಭಾರತೀಯರನ್ನು ತಾವಾಗಿಯೇ ಹಿಂತಿರುಗುವಂತೆ ಕೇಳುತ್ತಿದೆ ಎಂದು ಹೇಳಿದರು.


"ಯಾರೋ ಬಂಕರ್‌ಗಳಲ್ಲಿ ಮಲಗಿದ್ದಾರೆ, ಇತರರು ಆಹಾರ ಮತ್ತು ನೀರಿಲ್ಲದೆ ಬದುಕುತ್ತಿದ್ದಾರೆ ಮತ್ತು ಮೋದಿ ಜೀ, ನಿಮ್ಮ ಸರ್ಕಾರವು ತಾವಾಗಿಯೇ ಹಿಂತಿರುಗಲು ಅವರಿಗೆ ಸೂಚಿಸುತ್ತಿದೆ. ಆದರೆ ಇದಾಗಬಾರದಾಗಿತ್ತು  ಎಂದು ಅವರು ಹೇಳಿದರು.


ಇದನ್ನೂ ಓದಿ: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ ರಷ್ಯಾ


ಏತನ್ಮಧ್ಯೆ, ರೊಮೇನಿಯನ್ ರಾಜಧಾನಿ ಬುಕಾರೆಸ್ಟ್, ಹಂಗೇರಿಯ ಬುಡಾಪೆಸ್ಟ್ ಮತ್ತು ಪೋಲಿಷ್ ನಗರ ರ್ಜೆಸ್ಜೋವ್‌ನಿಂದ 798 ಭಾರತೀಯರೊಂದಿಗೆ ನಾಲ್ಕು ಸ್ಥಳಾಂತರಿಸುವ ವಿಮಾನಗಳು ಗುರುವಾರ ಮುಂಜಾನೆ ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದವು, ಭಾರತ ಈಗ ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಶನ್ ಗಂಗಾ ಕಾರ್ಯಕ್ರಮದ ಮೂಲಕ ಕರೆತರುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.