ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಈಗ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.ಅ ಮೂಲಕ ಸಿನಿಮಾಲೋಕಕ್ಕೆ ವಿದಾಯ ಹೇಳುವ ಆಲೋಚನೆಯಲ್ಲಿರುವ ಅವರು,ಈಗ ರಾಜಕಾರಣದ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿರುವ ರಜನಿಕಾಂತ್ ಈಗ ಹಿಮಾಲಯಕ್ಕೆ ತೆರಳುತ್ತಿರುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿರುವ ರಜನಿ ತಮ್ಮ ಪ್ರಯಾಣದ ವಿವರನ್ನು ಬಹಿರಂಗ ಪಡಿಸಲು ನಿರಾಕರಿಸಿದರು ಎನ್ನಲಾಗಿದೆ.


ಕಳೆದ 10 ವರ್ಷಗಳಿಂದ ಅವಕಾಶ ಸಿಕ್ಕಾಗಲೆಲ್ಲಾ ಹಿಮಾಲಯಕ್ಕೆ ತೆರಳುವ ರಜನಿ,ಈ ಬಾರಿ ಉತ್ತರಖಂಡದ ದುಣಗಿರಿ ಬೆಟ್ಟದ ಗುಹೆಗಳಿಗೆ ತೆರಳಲಿದ್ದಾರೆ, ಅಲ್ಲಿಗೆ ಧ್ಯಾನ ಮತ್ತು ಸಂತರ ಜೊತೆ ತಮ್ಮ ಜೀವನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ.


 ಈ ಹಿಂದಿನ ಹಲವು ಭೇಟಿಗಳು ಸಹಿತ ಅವರ ಜೀವನದ ಪ್ರಮುಖ ಘಟ್ಟಗಳಿಗೆ ಸಂಬಂಧಪಟ್ಟವುಗಳಾಗಿವೆ. ಈ ಬಾರಿ ರಾಜಕೀಯ ಪ್ರವೇಶಿಸಿರುವುದರಿಂದ ಅದರಲ್ಲಿ ಯಶಸ್ವಿ ಕಾಣಲು ಈ ಹಿಮಾಲಯದ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.