ನವದೆಹಲಿ: ಭಾರತದಲ್ಲಿ, ಕೊರೊನಾ ವೈರಸ್ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ನಿತ್ಯ ಹೊಸ ಹೊಸ ಕ್ಷೇತ್ರಗಳಿಗೆ ತನ್ನ ಪಾದ ಪಸರಿಸುತ್ತಿರುವ ಈ ಮಹಾಮಾರಿಯನ್ನು (ಕೋವಿಡ್ -19 ಸಾಂಕ್ರಾಮಿಕ) ತಡೆಗಟ್ಟಲು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಈಗ ದೇಶಾದ್ಯಂತ ಮೇ 3 ರವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರೆಯಲಿದ್ದು ನಿಯಮಗಳು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್ 20 ರವರೆಗೆ, ಪ್ರತಿ ಪಟ್ಟಣ, ಪ್ರತಿ ಪೊಲೀಸ್ ಠಾಣೆ, ಪ್ರತಿ ಜಿಲ್ಲೆ, ಪ್ರತಿ ರಾಜ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಯಾವುದೇ ಸಂದರ್ಭದಲ್ಲಿಯೂ ಕೂಡ ಕೊರೊನಾ ವೈರಸ್ ಅನ್ನು ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯಬೇಕಾಗಿದೆ. ಹೀಗಾಗಿ ಮುಂದಿನ 19 ದಿನಗಳ ಅವಧಿಗೆ ಲಾಕ್‌ಡೌನ್ ಅನ್ನು ವಿಸ್ತರಿಸಲಾಗಿದೆ. ಆದರೆ, ಪ್ರಶ್ನೆಯೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಮುಂಚಿತವಾಗಿ, ಅನೇಕ ರಾಜ್ಯಗಳು ಲಾಕ್‌ಡೌನ್ ಅನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಿದ್ದವು, ಆದರೆ ಕೇಂದ್ರ ಸರ್ಕಾರ ಈ ಅವಧಿಯನ್ನು ಮೇ.03ರವರೆಗೆ ವಿಸ್ತರಿಸಿದ್ದಾದರು ಯಾಕೆ?


COMMERCIAL BREAK
SCROLL TO CONTINUE READING

ಮೇ 03ರವರೆಗೆ ಲಾಕ್ ಡೌನ್ ವಿಸ್ತರಿಸಲು ಇಲ್ಲಿದೆ ಕಾರಣ 
ವಾಸ್ತವಿಕವಾಗಿ ಹೇಳುವುದಾದರೆ, ಏಪ್ರಿಲ್ 30 ಮತ್ತು ಮೇ 3 ರ ನಡುವೆ ಕೇವಲ ಮೂರು ದಿನಗಳ ಅಂತರವಿದೆ. ಆದರೆ, ಈ ವ್ಯತ್ಯಾಸದ ಹಿಂದಿನ ಕಾರಣವೇನು? ಎಂಬುದು ಸದ್ಯದ ಪ್ರಶ್ನೆ. ಮೇ 1 ರಂದು ಸಾರ್ವಜನಿಕ ರಜಾದಿನವಿದೆ. ಈ ದಿನ, ಅನೇಕ ರಾಜ್ಯಗಳಲ್ಲಿ ಮೇ ದಿನ ಆಚರಿಸಲಾಗುತ್ತದೆ. ಅಲ್ಲದೆ, ಈ ದಿನವೂ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯೂ ಆಚರಿಸಲಾಗುತ್ತದೆ. ಇನ್ನು ಮೇ 2 ರಂದು ಶನಿವಾರ ಮತ್ತು ಮೇ 3 ರಂದು ಭಾನುವಾರ. ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ಕಾರಣ ಇದು. ಆದರೆ, ಆದರೆ, ಇದಕ್ಕೂ ಮೊದಲು ಲಾಕ್ ಡೌನ್ ಅನ್ನು  ಏಪ್ರಿಲ್ 30 ರವರೆಗೆ ಮಾತ್ರ ವಿಸ್ತರಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಆದರೆ, ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಇದನ್ನು ಮೇ 3 ರವರೆಗೆ ವಿಸ್ತರಿಸಿದೆ.


ಈ ಮೂರು ದಿನಗಳು ತುಂಬಾ ಮಹತ್ವ ಪಡೆದುಕೊಂಡಿವೆ
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸರ್ಕಾರವು 3 ದಿನಗಳವರೆಗೆ ಲಾಕ್‌ಡೌನ್ ಹೆಚ್ಚಿಸಲು ಮತ್ತೊಂದು ಕಾರಣವಿದೆ. ವಾಸ್ತವವಾಗಿ, ಮೇ 1, 2 ಮತ್ತು 3 ರಜಾ ದಿನಗಳಾಗಿವೆ. ಏಪ್ರಿಲ್ 30 ರಂದು ಲಾಕ್‌ಡೌನ್ ಕೊನೆಗೊಂಡರೆ, ರಜಾದಿನಗಳ ಕಾರಣದಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಂದ ಹೊರಹೋಗುತ್ತಾರೆ. ಸಾಮಾಜಿಕ ಅಂತರ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ಮತ್ತೊಮ್ಮೆ ಭಾರತದಲ್ಲಿ ಹರಡುವ ಸಾಧ್ಯತೆ ಇದೆ . ಅಂದರೆ ಕೊರೊನಾ ವೈರಸ್ ಸರಪಳಿ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಲಾಕ್ ಡೌನ್ ನಿಂದ ಸಡಿಲಿಕೆ ನೀಡುವಲ್ಲಿ ಕಾಳಜಿ ವಹಿಸಲಾಗುತ್ತಿದ್ದು, ಮುಂದಿನ ಮೂರೂ ದಿನಗಳು ಕೂಡ ಲಾಕ್ ಡೌನ್ ಮುಂದುವರೆಸಲು ನಿರ್ಧರಿಸಲಾಗಿದೆ.


ಯಾವ ರಾಜ್ಯಗಳಲ್ಲಿ ಎಲ್ಲಿಯವರೆಗೆ ಲಾಕ್ ಡೌನ್ ಮುಂದುವರೆಸಲಾಗಿದೆ 


  • ಓಡಿಷಾ - 30 ಏಪ್ರಿಲ್,

  • ಪಂಜಾಬ್ - 01 ಮೇ,

  • ಮಹಾರಾಷ್ಟ್ರ - 30 ಏಪ್ರಿಲ್,

  • ತೆಲಂಗಾಣ - 30 ಏಪ್ರಿಲ್,

  • ರಾಜಸ್ಥಾನ್ - 30 ಏಪ್ರಿಲ್,

  • ಕರ್ನಾಟಕ - ಎರಡು ವಾರಗಳ ಕಾಲ

  • ಪಶ್ಚಿಮ ಬಂಗಾಳ - 30 ಏಪ್ರಿಲ್,

  • ತಮಿಳುನಾಡು - 30 ಏಪ್ರಿಲ್ 

  • ಅರುಣಾಚಲ ಪ್ರದೇಶ, ಮೀಝೋರಾಂ ಹಾಗೂ ಮೇಘಾಲಯಗಳಲ್ಲಿಯೂ ಕೂಡ 30 ಏಪ್ರಿಲ್ ವರೆಗೆ ಲಾಕ್ ಡೌನ್ ಮುಂದುವರೆಸಲಾಗಿದೆ .