ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾದ ನಂತರ ಮೊದಲ ಬಾರಿಗೆ ಸೋನಿಯಾ ಗಾಂಧಿ ಕರೆದಿದ್ದ ಸಭೆಗೆ ರಾಹುಲ್ ಗಾಂಧಿ ಗೈರುಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.


COMMERCIAL BREAK
SCROLL TO CONTINUE READING

ಗುರುವಾರದಂದು ಸೋನಿಯಾ ಗಾಂಧಿ ಕರೆದ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಮುಖ್ಯಸ್ಥರು ಮತ್ತು ರಾಜ್ಯ ವಿಧಾನಸಭಾ ಮುಖಂಡರು ಭಾಗವಹಿಸಿದ್ದರು. ಈ ಯಾವುದೇ ಹುದ್ದೆಗಳಿಲ್ಲದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ, ಪಕ್ಷದ ಸದಸ್ಯತ್ವ ಚಾಲನೆ ಮತ್ತು ಕೇಡರ್ ತರಬೇತಿ ಕಾರ್ಯಕ್ರಮದ ಕುರಿತು ಚರ್ಚಿಸಲು ಕರೆದ ಸಭೆಯಲ್ಲಿ ಹಾಜರಿದ್ದರು.ಆರ್ಥಿಕ ಸ್ಥಿತಿ ಕುರಿತಾಗಿ ನಾಯಕರೆಲ್ಲರಿಗೆ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ಪಕ್ಷ ತಿಳಿಸಿದೆ. 


ಆದರೆ ಈಗ ರಾಹುಲ್ ಗಾಂಧಿಯುವರ ಅನುಪಸ್ಥಿತಿ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ' ಸೋನಿಯಾ ಗಾಂಧಿ ಅವರು ಕರೆದ ಸಭೆಯಲ್ಲಿ ನಾಯಕರ ಮಾನದಂಡಗಳ ಅಡಿಯಲ್ಲಿ ಬರುವುದಿಲ್ಲ, ಇನ್ನು ಮನಮೋಹನ್ ಸಿಂಗ್ ಅವರನ್ನು ಆರ್ಥಿಕ ವಿಷಯಗಳ ಕುರಿತಾಗಿ ಚರ್ಚಿಸುವ ಅಗತ್ಯವನ್ನು ಮನಗಂಡು ಅವರನ್ನು ಸಭೆಗೆ ಆಹ್ವಾನಿಸಲಾಯಿತು ಪಕ್ಷ ಹೇಳಿದೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ ನಂತರ ರಾಹುಲ್ ಗಾಂಧಿ ಪಕ್ಷದ ಸದಸ್ಯರಾಗಿರುವುದು ಬಿಟ್ಟರೆ ಇನ್ನುಳಿದ ಯಾವುದೇ ಸಾಂಸ್ಥಿಕ ಹುದ್ದೆಯನ್ನು ಸ್ಥಾನವನ್ನು ಹೊಂದಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ರಾಹುಲ್ ಗಾಂಧಿ ಕೂಡ ತಾವು ಅಧ್ಯಕ್ಷರಾಗದೆ ಇದ್ದರೂ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. 


ಎಕೆ ಆಂಟನಿ ಕೂಡ ಹಾಜರಿದ್ದರಿಂದ ಕೇರಳದ ವಯನಾಡ ಸಂಸದ ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಬಹುದಿತ್ತು ಎಂದು ಪಕ್ಷದ ಮೂಲಗಳನ್ನು ಎಎನ್‌ಐ ಉಲ್ಲೇಖಿಸಿದೆ. ಆಂಟನಿ ಅವರು ಯಾವುದೇ ಹುದ್ದೆಯನ್ನು ಅಲಂಕರಿಸಿಲ್ಲ, ಆದರೆ ಹಿರಿಯ ಕಾಂಗ್ರೆಸ್ ನಾಯಕರಾಗಿ ಹೋದರು ಎಂದು ಮೂಲಗಳು ತಿಳಿಸಿವೆ.