ನವದೆಹಲಿ: CAA ಹಾಗೂ NRC ವಿರುದ್ಧ ನಡೆಸಲಾದ ಪ್ರತಿಭಟನೆ ಪ್ರಕರಣದ ಕುರಿತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಈ ವೇಳೆ ದೆಹಲಿ ಪೊಲೀಸರನ್ನು ಪ್ರಶ್ನಿಸಿರುವ ನ್ಯಾಯಾಧೀಶರು ಜಾಮಾ ಮಸೀದಿ ಪಾಕಿಸ್ತಾನ್ ಆಗಿದ್ದು, ನೀವು ಪಾಕಿಸ್ತಾನದಲ್ಲಿರುವಂತೆ ಏಕೆ ವರ್ತಿಸುತ್ತಿರುವಿರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಆಕ್ಷೇಪಾರ್ಹ ಟಿಪ್ಪಣಿಗಳನ್ನು ಮಾಡಲಾಗಿದೆಯೇ? ಕಾನೂನು ಏನು ಹೇಳುತ್ತದೆ? ಇದುವರೆಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಂದೂ ಕೂಡ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಈ ವೇಳೆ ಕೋರ್ಟ್ ರೂಂ ನಲ್ಲಿ ನ್ಯಾಯಾಧೀಶರ ಮುಂದೆ ನಿಯಮಗಳನ್ನು ಉಲ್ಲೇಖಿಸಿರುವ ಸರ್ಕಾರಿ ವಕೀಲರು, ಧಾರ್ಮಿಕ ಸಂಸ್ಥಾನಗಳ ಹೊರಗೆ ಪ್ರತಿಭಟನೆ ನಡೆಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಧೀಶರು, ದೆಹಲಿ ಪೊಲೀಸರು ಅಷ್ಟೊಂದು ಹಿಂದುಳಿದವರಾಗಿದ್ದು,  ಅವರ ಬಳಿ ಯಾವುದೇ ದಾಖಲೆ ಇಲ್ಲ ಎಂದು ನಿಮಗೆ ಅನಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಸಣ್ಣ ಪುಟ್ಟ ಘಟನೆಗಳಿಗೂ ಕೂಡ ದಾಖಲೆಗಳನ್ನು ನೀಡುವ ದೆಹಲಿ ಪೊಲೀಸರು , ಈ ಘಟನೆಯಲ್ಲಿ ಯಾಕೆ ನೀಡಿಲ್ಲ? ಎಂದಿದ್ದಾರೆ.


ಡಿಸೆಂಬರ್ 21ರಂದು ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಮಧ್ಯ ದೆಹಲಿಯ ದರಿಯಾಗಂಜ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಇತರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಪ್ರತಿಭಟನೆಯ ವೇಳೆ ಚಂದ್ರಶೇಖರ್ ಅವರು ತಮ್ಮ ಬೆಂಬಲಿಗರ ಜೊತೆ ಸ್ವಲ್ಪ ಸಮಯ ಜಾಮಾ ಮಸೀದಿ ಪರಿಸರದಲ್ಲಿ ಕಾಣಿಸಿಕೊಂಡಿದ್ದರು. ಸಾಧಾರಣ ಡ್ರೆಸ್ ಧರಿಸಿ ಜನ ಸಂದಣಿಯಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಘಟನಾ ಸ್ಥಳದಲ್ಲಿಯೇ ಬಂಧಿಸಲು ದೆಹಲಿ ಪೊಲೀಸರ ವಿಶೇಷ ತಂಡ ವಿಫಲವಾಗಿತ್ತು.