ನವದೆಹಲಿ: ಮುಂಬರುವ ವಿಧಾನಸಭೆಯಲ್ಲಿ ಶಿವಸೇನಾ ಪಕ್ಷವು ಯುವ ಘಟಕದ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಸುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಶಿವಸೇನಾ ಪಕ್ಷದ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಮರಾಠಿ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಈ ಸುಳಿವನ್ನು ನೀಡಿದ್ದಾರೆ. ಆದಿತ್ಯ ಠಾಕ್ರೆ ಅವರು ಮುಂಬರುವ ವಿಧಾನಸಭೆ ಚುನಾವಣೆ ಸಿದ್ದತೆ ನಡೆಸಿದ್ದಾರೆ ಎಂದು ಹೇಳಿದ ಅವರು " ಠಾಕ್ರೆ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ತೆಗೆದುಕೊಳ್ಳುವುದಿಲ್ಲ. ಕುಟುಂಬದ ಸದಸ್ಯರು ಯಾವಾಗಲೂ ಮುಖ್ಯಸ್ಥರಾಗಿರುತ್ತಾರೆ ಮತ್ತು ಕುಟುಂಬವು ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರತಿಷ್ಠೆಯನ್ನು ಹೊಂದಿದೆ" ಎಂದರು.


ಇನ್ನು ಮುಂದುವರೆದು ಮಾತನಾಡಿದ ಅವರು " ಆದಿತ್ಯ ಠಾಕ್ರೆ ಸ್ವತಃ ಚುನಾವಣಾ ಕ್ಷೇತ್ರದ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆಯವರು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ." ಎಂದು ರಾವತ್ ಹೇಳಿದರು.


ಈ ವಿಚಾರವಾಗಿ ಮಾಧ್ಯಮದವರು ಆದಿತ್ಯ ಠಾಕ್ರೆ ಅವರನ್ನು ಕೇಳಿದ್ದಕ್ಕೆ "ಇಂದು ಈ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ, ನಾವು ಇದನ್ನು ನಂತರ ಚರ್ಚಿಸುತ್ತೇವೆ" ಎಂದು ಗುರುವಾರ ತನ್ನ ಹುಟ್ಟುಹಬ್ಬದಂದು ಮುಂಬೈಯಲ್ಲಿ ಆಯೋಜಿಸಿದ ಸಂವಾದದಲ್ಲಿ ತಿಳಿಸಿದ್ದಾರೆ.ಮುಖ್ಯಮಂತ್ರಿ ಹುದ್ದೆಯನ್ನು ವಿಚಾರವಾಗಿ ಬಿಜೆಪಿಯೊಂದಿಗೆ ಸೇನಾ ನಿಲುವು ಗೊಂದಲ ಸೃಷ್ಟಿಸಬಹುದು ಎನ್ನಲಾಗುತ್ತದೆ.ಆದಾಗ್ಯೂ, ಮುಂದಿನ ಮುಖ್ಯಮಂತ್ರಿ  ಬಿಜೆಪಿ ಪಕ್ಷದಿಂದ ಬಂದವರು ಎಂದು ಬಿಜೆಪಿ ಹೇಳುತ್ತಿದೆ.