ನವದೆಹಲಿ: ಜಾರ್ಖಂಡ್ ಸಂಸದ ನಿಶಿಕಾಂತ್ ದುಬೇ ಅವರ ಪಾದ ತೊಳೆದ ಬಿಜೆಪಿ ಕಾರ್ಯಕರ್ತನೊಬ್ಬ ಅದನ್ನು ಕುಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ನಡೆಯನ್ನು ವಿರೋಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 16ರಂದು ರಾಂಚಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಸಂಸದ ನಿಶಿಕಾಂತ್ ದುಬೇ ಅವರ ಪಾದ ತೊಳೆದು, ಆ ನೀರನ್ನು ಕುಡಿದಿದ್ದರು. ಈ ವಿಚಾರ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈ ನಡೆಯನ್ನು ಸಮರ್ಥಿಸಿಕೊಂಡಿದ್ದ ದುಬೇ ಅವರು ಇದರಲ್ಲಿ ತಪ್ಪೇನಿದೆ, ಅದು ಅಭಿಮಾನಿಯ ಪ್ರೀತಿ ಎಂದಿದ್ದರು. 


ಇದೀಗ ದುಬೇ ಅವರ ಸಮರ್ಥನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, "ದುಬೇ ಅವರು ಮೋದಿಯ ಪಾದ ತೊಳೆದ ಆ ಕೊಳಕು ನೀರನ್ನು ಕುಡಿಯುತ್ತಾರೆಯೇ?" ಎಂದು ಟ್ವೀಟ್ ಮಾಡಿದ್ದಾರೆ.



ಮತ್ತೊಂದೆಡೆ, ಬಿಜೆಪಿ ಕಾರ್ಯಕರ್ತ ಪವನ್ ಷಾ ಮಾತನಾಡಿ, ಅಷ್ಟಕ್ಕೂ ನಾನ್ಯಾವ ತಪ್ಪು ಮಾಡಿದ್ದೇನೆ? ಪಾದ ಪೂಜೆ ಮಾಡಿ ನೀರು ಕುಡಿಯುವುದರಲ್ಲಿ ತಪ್ಪೇನಿದೆ? ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ. ಯಾರಾದರೂ ಈ ಬಗ್ಗೆ ಟೀಕಿಸಿದರೆ ಅವರ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.