ಚಂಡೀಗಢ: ರೋಹ್ಟಕ್‌ನಲ್ಲಿ ಬಿಜೆಪಿಯ ಕೆಲವು ನಾಯಕರನ್ನು ಬಂಧಿಸಿದ ನಂತರ ಬಿಜೆಪಿ ಸಂಸದ ಅರವಿಂದ್ ಶರ್ಮಾ(BJP MP Arvind Sharma) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಿಯಾಣದ ಮಾಜಿ ಸಚಿವ, ಬಿಜೆಪಿ ಮುಖಂಡ ಮನೀಷ್ ಗ್ರೋವರ್ ಅವರನ್ನು ಯಾರಾದರೂ ಟಾರ್ಗೆಟ್ ಮಾಡಿದರೆ ಅವರ ‘ಕಣ್ಣುಗಳನ್ನು ಕಿತ್ತು, ಕೈ ಕತ್ತರಿಸಿ’ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶನಿವಾರ ಅರವಿಂದ್ ಶರ್ಮಾ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಬಿಜೆಪಿ ಮುಖಂಡ ಮನೀಶ್ ಗ್ರೋವರ್(Manish Grover) ಅವರು ಶುಕ್ರವಾರ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಅವರಿಗೆ ಮುತ್ತಿಗೆ( Rohtak Protest) ಹಾಕಿದ್ದರು. ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಅರವಿಂದ್ ಶರ್ಮಾ ತಮ್ಮ ಪಕ್ಷದ ಮುಖಂಡನ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದು ಇದೀಗ ವಿವಾದ ಸೃಷ್ಟಿಸಿದೆ.


ಇದನ್ನೂ ಓದಿ: 7th Pay Commission : ಕೇಂದ್ರ ಸರ್ಕಾರದ 11.56 ಲಕ್ಷ ನೌಕರರಿಗೆ ಭರ್ಜರಿ ಸಿಹಿ ಸುದ್ದಿ


‘ಕೈ’ ನಾಯಕರಿಗೆ ಶರ್ಮಾ ಎಚ್ಚರಿಕೆ..!


Indian Railways New Rules: ಟಿಕೆಟ್ ಕಾಯ್ದಿರಿಸುವಾಗ ಈ ವಿಶೇಷ ಕೋಡ್ ನೆನಪಿನಲ್ಲಿಡಿ, ಇಲ್ಲದಿದ್ದರೆ ಸೀಟು ಸಿಗುವುದಿಲ್ಲ


ಏನಿದು ವಿವಾದ..?


ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳ ವಿರುದ್ಧ ಸುದೀರ್ಘ ಕಾಲದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಮನೀಶ್ ಗ್ರೋವರ್ ವಾಗ್ದಾಳಿ ನಡೆಸಿದ್ದರು. ‘ನಿರುದ್ಯೋಗಿ ಕುಡುಕರು ಮತ್ತು ವಿಧ್ವಂಸಕ ಶಕ್ತಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ’ ಎಂದು ಅವರು ಆರೋಪಿಸಿದ್ದರು. ಇದರಿಂದ ಕೋಪಗೊಂಡಿದ್ದ ರೈತರು ಗ್ರೋವರ್ ಹಾಗೂ ಅವರ ಬೆಂಬಲಿಗರನ್ನು 8 ಗಂಟೆಗಳ ಕಾಲ ದೇವಸ್ಥಾನದೊಳಗೆ ದಿಗ್ಬಂಧನ ವಿಧಿಸಿದ್ದರು. ತಮ್ಮ ಹೇಳಿಕೆ ವಿಚಾರವಾಗಿ ರೈತರಿಗೆ ಕೈಮುಗಿದು ಕ್ಷಮೆಯಾಚಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.  


ದಿಗ್ಬಂಧನದಿಂದ ಪಾರಾದ ಬಳಿಕ ಗ್ರೋವರ್(Manish Grover), ‘ನಾವು ರೈತರ ಬಳಿ ಕ್ಷಮೆ ಕೇಳಿಲ್ಲ, ನಾನು ಬಯಸಿದಾಗಲೆಲ್ಲ ಈ ದೇವಸ್ಥಾನಕ್ಕೆ ಬರುತ್ತೇನೆ. ಕ್ಷಮೆ ಕೇಳಬೇಕೆಂಬ ರೈತರ ಒತ್ತಾಯವನ್ನು ತಾವು ನಿರಾಕರಿಸಿರುವುದಾಗಿ’ ಹೇಳಿಕೊಂಡಿದ್ದರು. ಇದರಿಂದ ಮತ್ತಷ್ಟು ಕುಪಿತಗೊಂಡ ರೈತರು ಬಿಜೆಪಿ ಮುಖಂಡರ ಹೇಳಿಕೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಶರ್ಮಾ ನೀಡಿರುವ ಹೇಳಿಕೆಯು ವಿವಾದವನ್ನು ಸೃಷ್ಟಿಸಿದೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ