ಹರಿದ್ವಾರದ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ, ಕಾರಣ ಏನೆಂದು ತಿಳಿಯಿರಿ
ಒಂದು ತಿಂಗಳು ಹರಿದ್ವಾರ ಮತ್ತು ಅದರ ಸಂಪರ್ಕಿತ ಕಾಲುವೆಗಳು ಸಂಪೂರ್ಣವಾಗಿ ಒಣಗುತ್ತವೆ. ಹರಿದ್ವಾರದಲ್ಲಿ ಗಂಗೆಯ ಸ್ವಚ್ಛತೆಯಿಂದಾಗಿ ಉತ್ತರಾಖಂಡ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ನವದೆಹಲಿ: ಅನ್ಲಾಕ್ 5.0 ನಲ್ಲಿ ಎಲ್ಲಾ ಚಟುವಟಿಕೆಗಳು ಸಾಮಾನ್ಯವಾಗ ತೊಡಗಿದೆ ಮತ್ತು ಹೆಚ್ಚಿನ ಜನರು ತಮ್ಮ ನಗರದಿಂದ ಹೊರಹೋಗಲು ಮತ್ತು ವಾಕ್ ಮಾಡಲು ಯೋಜಿಸುತ್ತಾರೆ. ಕಳೆದ 6 ತಿಂಗಳ ಮೊದಲಿದ್ದಂತೆ ನಗರಗಳಲ್ಲಿ ಮತ್ತೆ ಕುಟುಂಬದೊಂದಿಗೆ ವಿಹಾರಕ್ಕೆ ಹೋಗುವ ಜನರನ್ನು ಕಾಣಬಹುದಾಗಿದೆ. ಏತನ್ಮಧ್ಯೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಅತ್ಯುತ್ತಮ ಪ್ರವಾಸಿ ತಾಣ ಹರಿದ್ವಾರಕ್ಕೆ (Haridwar) ಹೋಗಲು ನೀವು ಸಿದ್ದತೆ ನಡೆಸುತ್ತಿದ್ದರೆ ಮೊದಲು ಈ ಸುದ್ದಿಯನ್ನು ತಿಳಿಯಿರಿ. ಗಂಗಾ (Ganga) ನದಿಯಲ್ಲಿ ಪುಣ್ಯಸ್ನಾನ ಮಾಡಲು ಜನರು ಹರಿದ್ವಾರಕ್ಕೆ ತೆರಳುತ್ತಾರೆ. ಆದರೆ ಕೆಲ ದಿನಗಳ ಮಟ್ಟಿಗೆ ಹರಿದ್ವಾರದ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ.
ವಾಸ್ತವವಾಗಿ ಉತ್ತರಾಖಂಡ (Uttarakhand) ಸರ್ಕಾರ ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೆ ಹರಿದ್ವಾರದ ಗಂಗಾ ನೀರನ್ನು ಒಂದು ತಿಂಗಳು ನಿಲ್ಲಿಸಿದೆ. ಅಂದರೆ ಒಂದು ತಿಂಗಳು ಹರಿದ್ವಾರದ ಮತ್ತು ಅದರ ಸಂಪರ್ಕಿತ ಕಾಲುವೆಗಳು ಸಂಪೂರ್ಣವಾಗಿ ಒಣಗುತ್ತವೆ. ಹರಿದ್ವಾರದಲ್ಲಿ ಗಂಗೆಯ ಸ್ವಚ್ಛತೆ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕೊರೊನಾ ಮಧ್ಯೆ ಹಾಲಿವುಡ್‌ನಿಂದ ಹರಿದ್ವಾರದವರೆಗೆ ಯೋಗಕ್ಕೆ ಹೆಚ್ಚಿನ ಮಹತ್ವ ಬಂದಿದೆ -ಪ್ರಧಾನಿ ಮೋದಿ
ಮಾಹಿತಿಯ ಪ್ರಕಾರ, ಹರಿದ್ವಾರದಲ್ಲಿ ಗಂಗಾ ನದಿ ಸ್ವಚ್ಚತೆ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಗಂಗಾ ಕಾಲುವೆಯ ನೀರನ್ನು ಪೂರ್ಣ ತಿಂಗಳು ನಿಲ್ಲಿಸಲಾಗುವುದು. ಉತ್ತರಾಖಂಡ ಸರ್ಕಾರದ ಈ ನಿರ್ಧಾರದಿಂದಾಗಿ ಮೇಲಿನ ಗಂಗಾ ನಗರಕ್ಕೆ ಸಂಪರ್ಕ ಹೊಂದಿದ ಒಂದು ಡಜನ್‌ಗೂ ಹೆಚ್ಚು ಉಪನದಿಗಳಿಗೆ ನೀರು ಸಿಗುವುದಿಲ್ಲ ಎಂದು ತಿಳಿದು ಬಂದಿದೆ.
ಈ ಒಂದು ತಿಂಗಳಲ್ಲಿ ಹರಿದ್ವಾರ ಸೇರಿದಂತೆ ಉತ್ತರ ಪ್ರದೇಶ (Uttar Pradesh) ಮತ್ತು ದೆಹಲಿಯಲ್ಲಿ ನೀರಿನ ಕೊರತೆ ಉಂಟಾಗಬಹುದು. ಹರಿದ್ವಾರದಿಂದ ಬರುವ ಗಂಗಾ ನೀರನ್ನು ನೋಯ್ಡಾ ಮತ್ತು ಗಾಜಿಯಾಬಾದ್‌ಗೆ ಸರಬರಾಜು ಮಾಡಲಾಗುತ್ತದೆ.
ಲಾಕ್ ಡೌನ್ ಸಮಯದಲ್ಲಿ ಗಂಗಾ ನದಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ಮಾಲಿನ್ಯ ಮಟ್ಟ
ಕುಡಿಯುವ ನೀರಿನ ಕೊರತೆ:
ಮತ್ತೊಂದೆಡೆ ಗಂಗಾ ನಗರದಲ್ಲಿ ನೀರು ಸರಬರಾಜು ಕೊರತೆಯಿಂದಾಗಿ ಉಂಟಾಗುವ ನೀರಿನ ಕೊರತೆಯನ್ನು ಎದುರಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಉತ್ತರ ಪ್ರದೇಶ ಆಡಳಿತ ಹೇಳಿದೆ. ಗಂಗಾ ನಗರದಲ್ಲಿ ನೀರು ಸರಬರಾಜು ನಿಲ್ಲಿಸಿದ ನಂತರ ದೆಹಲಿ ಮತ್ತು ಗಾಜಿಯಾಬಾದ್ ಮುಂದಿನ 2-3 ದಿನಗಳವರೆಗೆ ಗಂಗಾ ನೀರನ್ನು ಪಡೆಯುವುದನ್ನು ಮುಂದುವರಿಸಲಿದೆ. ಇದರ ನಂತರ ಇತರ ಮೂಲಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತದೆ.