Rahul Gandhi Parliament Membership : ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣದಲ್ಲಿ ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ನ್ಯಾಯಾಲದ ಈ ತೀರ್ಪಿನ ಬಳಿಕ ಇದೀಗ  ರಾಹುಲ್ ಗಾಂಧಿ ಸಂಸತ್ತಿನ ಸದಸ್ಯತ್ವ ಕಳೆದುಕೊಳ್ಳುವ ಅಪಾಯ ಎದುರಾಗಿದೆ. ನಿಯಮಗಳ ಪ್ರಕಾರ,  ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 8 ರ ಉಪವಿಭಾಗ 3 ರ ಅಡಿಯಲ್ಲಿ, ಯಾವುದೇ ಸಾರ್ವಜನಿಕ ಪ್ರತಿನಿಧಿಗೆ ಎರಡು ವರ್ಷ ಅಥವಾ ಎರಡು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾದರೆ, ತೀರ್ಪು ಬಂದ ದಿನದಂದು ಆ ಪ್ರತಿನಿಧಿಯ ಸದಸ್ಯತ್ವವನ್ನು ಅನರ್ಹಗೊಳಿಸಲಾಗುತ್ತದೆ. ಮಾತ್ರವಲ್ಲ ಜೈಲಿನಿಂದ ಹೊರಬಂದ ನಂತರ, 6 ವರ್ಷಗಳವರೆಗೆ ಅವರು ಅನರ್ಹರಾಗಿರುತ್ತಾರೆ. ಅಂದರೆ ಜೈಲಿನಿಂದ ಹೊರ ಬಂದ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು  ಸಾಧ್ಯವಾಗುವುದಿಲ್ಲ. ಇದರ 4ನೇ ಉಪವಿಭಾಗವು ತಪ್ಪಿತಸ್ಥರಿಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಮಯಾವಕಾಶವನ್ನು ನೀಡುತ್ತದೆ. ಈ ಹಿಂದೆ ಜನಪ್ರತಿನಿಧಿಗಳು ಮೇಲ್ಮನವಿ ಸಲ್ಲಿಸುವುದು ಬಾಕಿ ಇದೆ ಎಂದು ಹೇಳಿ ತಮ್ಮ ಸದಸ್ಯತ್ವವನ್ನು ಉಳಿಸುತ್ತಿದ್ದರು. ಆದರೆ ರಾಹುಲ್ ಗಾಂಧಿ ವಿಚಾರದಲ್ಲಿ ಹಾಗಾಗುವುದಿಲ್ಲ. 


COMMERCIAL BREAK
SCROLL TO CONTINUE READING

ರಾಹುಲ್ ಸಂಕಷ್ಟ ಹೆಚ್ಚಾದದ್ದು ಹೇಗೆ? : 
ಆದರೆ 2013 ರಲ್ಲಿ, ಲಿಲಿ ಥಾಮಸ್ ವಿರುದ್ಧ ಕೇಂದ್ರ ಸರ್ಕಾರ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಈ  ಸಬ್ ಸೆಕ್ಷನ್ 4 ಅನ್ನು ರದ್ದುಗೊಳಿಸಿದೆ. ಇದರರ್ಥ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಎಂಪಿ/ಎಂಎಲ್‌ಎ ಸದಸ್ಯತ್ವ ರದ್ದುಗೊಳಿಸಲಾಗುವುದು. ಕೋರ್ಟ್ ತೀರ್ಪಿನ ಬಗ್ಗೆ ಅಧಿಕೃತ ಮಾಹಿತಿ ಕೈ ಸೇರಿದ ಕೂಡಲೇ ಸಂಬಂಧಪಟ್ಟ ಕಾರ್ಯದರ್ಶಿ (ಲೋಕಸಭೆ/ವಿಧಾನಸಭೆ) ಆ ಸ್ಥಾನವನ್ನು ಖಾಲಿ ಎಂದು ಘೋಷಿಸುತ್ತಾರೆ. 


ಇದನ್ನೂ ಓದಿ : 72 ಲಕ್ಷ ರೂ ಕದ್ದ ಆರೋಪದ ಮೇಲೆ ಸೋನು ನಿಗಮ್ ತಂದೆಯ ಮಾಜಿ ಚಾಲಕನ ವಿರುದ್ಧ ಪ್ರಕರಣ


ರಾಹುಲ್ ಮುಂದಿನ ದಾರಿ ಏನು? :
ರಾಹುಲ್ ಗಾಂಧಿ ಅವರ ಶಿಕ್ಷೆಗೆ ಕೆಳ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಆದರೆ ಸದಸ್ಯತ್ವ ಉಳಿಯಬೇಕಾದರೆ ರಾಹುಲ್ ಗಾಂಧಿಗೆ ದೋಷಿ ಎನ್ನುವ ತೀರ್ಪಿನ ವಿರುದ್ದವೂ ತಡೆಯಾಜ್ಞೆ ತರಬೇಕಾಗುತ್ತದೆ. ಇಂದಿನ ಆದೇಶದಲ್ಲಿ ನ್ಯಾಯಾಲಯವು ಕೇವಲ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ ಎಂದಾದರೆ ರಾಹುಲ್ ಗಾಂಧಿ ಅವರ ಮೇಲ್ಮನವಿ ಮತ್ತು ಅದರ ನಿಲುವಿಗೆ ಸ್ಪೀಕರ್ ಕಾಯಬೇಕಾಗಿಲ್ಲ.  ಸ್ಪೀಕರ್  ಯಾವಾಗ ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು.


ಉಳಿಯುವುದೇ ರಾಹುಲ್ ಸಂಸತ್ ಸದಸ್ಯತ್ವ : 
ತಮ್ಮ ಸಂಸತ್ ಸದಸ್ಯತ್ವವು ಯಥಾಸ್ಥಿತಿಯಲ್ಲಿ ಉಳಿಯಬೇಕಾದರೆ  
ಲೋಕಸಭಾ ಸ್ಪೀಕರ್ ಆ ಸ್ಥಾನವನ್ನು ಖಾಲಿ ಎಂದು ಘೋಷಿಸುವ ಮೊದಲೇ ರಾಹುಲ್ ಗಾಂಧಿ ಶಿಕ್ಷೆಯ ನಿರ್ಧಾರಕ್ಕೆ ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಬೇಕಾಗುತ್ತದೆ. 


ಇದನ್ನೂ ಓದಿ : ₹ 19 ಕೋಟಿ ವಂಚಿಸಿದ ಚೀನಾದ ಸ್ಮಾರ್ಟ್‌ಫೋನ್‌ ಕಂಪನಿ ಅಧಿಕಾರಿ ಬಂಧನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.