ಚಂಡೀಗಢ / ಜೋಧಪುರ: ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರಿದ ನಂತರ ರಾಜಸ್ಥಾನದ ಬಗ್ಗೆ ರಾಜಕೀಯ ಚರ್ಚೆಗಳು ಪ್ರಾರಂಭವಾಗಿವೆ. ಯಾಕೆಂದರೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್(Sachin Pilot) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ವರದಿಗಳಿವೆ. ಈ ಕಾರಣಕ್ಕಾಗಿ, ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ, ಇದೀಗ ಎಲ್ಲರ ಕಣ್ಣುಗಳು ಸಚಿನ್ ಪೈಲಟ್ ಅವರ ವರ್ತನೆಯತ್ತ ನೆಟ್ಟಿವೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಕೇಂದ್ರ ಜಲ ವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ, ಸಚಿನ್ ಪೈಲಟ್ ಕೂಡ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಅವರ ಮಾರ್ಗವನ್ನು ಅನುಸರಿಸುತ್ತಾರೆಯೇ? ಎಂದು ಪ್ರಶ್ನಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಸ್ವಲ್ಪ ಕಾಯಿರಿ, ಏಕೆಂದರೆ ಕಾಯುವಿಕೆಯ ಫಲ ಸಿಹಿಯಾಗಿದೆ. ಇದೀಗ ದೇಶದಲ್ಲಿ ಇಂತಹ ಅನೇಕ ಘಟನೆಗಳು ಕಂಡುಬರುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಶೇಖಾವತ್ ಹೇಳಿದರು.


ವಾಸ್ತವವಾಗಿ ಜ್ಯೋತಿರಾದಿತ್ಯ ಮತ್ತು ಸಚಿನ್ ಅನೇಕ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ಒಂದೇ ಪೀಳಿಗೆಯ ನಾಯಕರು. ಇಬ್ಬರೂ ಹಿರಿಯ ಕಾಂಗ್ರೆಸ್ ನಾಯಕರ ಕುಟುಂಬದಿಂದ ಬಂದವರು. ಖಂಡಿತವಾಗಿಯೂ ಇಬ್ಬರೂ ಸ್ನೇಹ ಮತ್ತು ನಿಕಟ ಸಂಬಂಧವನ್ನು ಹೊಂದಿದ್ದಾರೆ. ಆದರೆ ಮುಂದೆ ಏನಾಗಬಹುದು ಎಂಬುದನ್ನು ತಿಳಿಯಲು ನಾವು ಸ್ವಲ್ಪ ಕಾಯಬೇಕು, ಏಕೆಂದರೆ ಕಾಯುವ ಫಲವು ಯಾವಾಗಲೂ ಸಿಹಿಯಾಗಿರುತ್ತದೆಎಂದು ಶೇಖಾವತ್ ತಿಳಿಸಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡುತ್ತ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ನಿಂದಿಸಿದ ಶೇಖಾವತ್, ಸುಳ್ಳು ಭರವಸೆಗಳನ್ನು ನೀಡುವುದು, ದೊಡ್ಡ ಭ್ರಮೆಗಳನ್ನು ಹರಡುವುದು ಮತ್ತು ಅಧಿಕಾರಕ್ಕೆ ಬಂದ ನಂತರ ಈ ಭರವಸೆಗಳನ್ನು ಮರೆತುಬಿಡುವುದು ಕಾಂಗ್ರೆಸ್ ಪಕ್ಷದ ಸ್ವರೂಪವಾಗಿದೆ. ಕಾಂಗ್ರೆಸ್ ಪಕ್ಷವನ್ನು ಇಂದು ಅಂಚಿನಲ್ಲಿಟ್ಟುಕೊಳ್ಳಲು ಇದು ಕಾರಣವಾಗಿದೆ. ಚುನಾವಣಾ ಯುದ್ಧದಲ್ಲಿ ಜನರು ಅವರನ್ನು ಎಲ್ಲೆಡೆ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಈಗ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.


ಕಾಂಗ್ರೆಸ್ ತನ್ನ ನೀತಿಗಳಿಂದಾಗಿ ನಿರಂತರವಾಗಿ ಅಪ್ರಸ್ತುತವಾಗುತ್ತಿದೆ ಎಂದು ಕೇಂದ್ರ ಜಲ ವಿದ್ಯುತ್ ಸಚಿವರು ಹೇಳಿದರು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ರಾಜ್ಯದಲ್ಲಿ ಕೈಗಾರಿಕೆಗಳನ್ನು ಮುಚ್ಚಲಾಯಿತು. ರೈತರು ಅಸಮಾಧಾನಗೊಂಡಿದ್ದಾರೆ. ಕಮಲ್ ನಾಥ್ ಸರ್ಕಾರ, ಪ್ರತೀಕಾರವಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮಯದಲ್ಲಿ ಜನರ ಕಲ್ಯಾಣಕ್ಕಾಗಿ ಮಾಡಿದ ಯೋಜನೆಗಳನ್ನು ನಿಲ್ಲಿಸಲು ಪ್ರಯತ್ನಿಸಿತು. ಮಧ್ಯಪ್ರದೇಶದ ಪರಿಸ್ಥಿತಿ ಖಂಡಿತವಾಗಿಯೂ ಆತಂಕಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತು ಸಿಂಧಿಯಾ ಕಾಂಗ್ರೆಸ್ ತೊರೆದಿದ್ದಾರೆ ಎಂದರು.


ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ಇಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ಎಲ್ಲರಲ್ಲಿತ್ತು. ಆದರೆ ದುರದೃಷ್ಟವಶಾತ್, ಅದು ಆಗಿಲ್ಲ. ಇದಲ್ಲದೆ ಎರಡನೆಯ ಭರವಸೆ ನಿರುದ್ಯೋಗಿಗಳಿಗೆ ಭತ್ಯೆ ನೀಡುವುದು, ಅದೂ ಸಹ ಎಲ್ಲಿಯೂ ಜಾರಿಯಾಗಿಲ್ಲ ಎಂದವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.