ನವದೆಹಲಿ: ಉದ್ದೇಶಪೂರ್ವಕವಾಗಿ ಆದಾಯ ತೆರಿಗೆ (Income Tax) ತಪ್ಪಿಸುವುದು 7 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಸಿ ಪ್ರಕಾರ, ಉದ್ದೇಶಪೂರ್ವಕವಾಗಿ ತೆರಿಗೆ, ದಂಡ, ಬಡ್ಡಿ ನೀಡದೆ ಇರುವುದು ಅಥವಾ ನಿಮ್ಮ ಆದಾಯದ ಕುರಿತು ತಪ್ಪು ಬಾಹಿತಿ ನೀಡುವವವರಿಗೆ 3 ತಿಂಗಳಿನಿಂದ ಹಿಡಿದು 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ಈ ರೀತಿ ಮಾಡುವ ತೆರಿಗೆ ಪಾವತಿದಾರರಿಗೆ ದಂಡ ಕೂಡ ವಿಧಿಸಲಾಗುವ ಸಾಧ್ಯತೆ ಕೂಡ ಇದೆ.


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಸಿ ಅಡಿ 25 ಲಕ್ಷ ರೂ.ಗಳ ಮೇಲಿನ ಮೊತ್ತದ ಮೇಲೆ ಲೆಕ್ಕ ಹಾಕಲಾಗುವ ತೆರಿಗೆಯನ್ನು ಪಾವತಿಸದೇ ಹೋದಲ್ಲಿ, ಕನಿಷ್ಠ ಆರು ತಿಂಗಳು ಜೈಲು ಶಿಕ್ಷೆ ಮತ್ತು ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಕುರಿತು ಉಲ್ಲೇಖಿಸಲಾಗಿದೆ. ಇನ್ನೊಂದೆಡೆ 25 ಲಕ್ಷ ರೂ.ಗಳಿಗಿಂತ ಕಡಿಮೆ ಮೊತ್ತದ ಮೇಲಿನ ಟ್ಯಾಕ್ಸ್ ತಪ್ಪಿಸಿದರೆ ಕನಿಷ್ಠ ಅಂದರೆ ಮೂರು ತಿಂಗಳು ಮತ್ತು ಗರಿಷ್ಟ ಅಂದರೆ ಎರಡು ವರ್ಷ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ಸಹ ಪಾವತಿಸಬೇಕಾಗಲಿದೆ.


ಶಿಕ್ಷೆಯ ಜೊತೆಗೆ ದಂಡ ಕೂಡ ವಿಧಿಸಬಹುದು
ಈ ಕಾಯ್ದೆಯ ಅಡಿ ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಯ ಖಾತೆ ಪುಸ್ತಕದಲ್ಲಿ ಅಥವಾ ಇತರೆ ದಾಖಲೆಗಳಲ್ಲಿ ತಪ್ಪು ಅಥವಾ ನಕಲಿ ಎಂಟ್ರಿ ಅಥವಾ ಸ್ಟೇಟ್ಮೆಂಟ್ ಬರೆದಿದ್ದರೆ, ಆ ವ್ಯಕ್ತಿ ಉದ್ದೇಶಪೂರ್ವಕ  ಟ್ಯಾಕ್ಸ್ ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂಬ ಅರ್ಥ ನೀಡುತ್ತದೆ.


ದೊಡ್ಡ-ದೊಡ್ಡ ಖತೆಗಳಲ್ಲಿನ ನಕಲಿ ಎಂಟ್ರಿಗಳು ತೆರಿಗೆ ಕಳ್ಳತನ ಎಂದು ಪರಿಗಣಿಸಲಾಗುವುದು
ಆದಾಯ ತೆರಿಗೆ ಕಾಯ್ದೆಯ ಈ ಸೆಕ್ಷನ್ ಅಡಿಯಲ್ಲಿ, ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದಿರುವುದ ವ್ಯಾಖ್ಯಾನಿಸಲಾಗಿದೆ. ವ್ಯಕ್ತಿಯ ಖಾತೆ ಪುಸ್ತಕ ಮತ್ತು ಇತರೆ ದಾಖಲೆಗಳಲ್ಲಿ ತಪ್ಪು ಅಥವಾ ನಕಲಿ ನಮೂದುಗಳು ಅಥವಾ ಹೇಳಿಕೆಗಳು ಕಂಡುಬಂದಲ್ಲಿ, ಆ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸಲು ಬಯಸುವುದಿಲ್ಲ ಎಂದು ಊಹಿಸಲಾಗುವುದು. ಒಬ್ಬ ವ್ಯಕ್ತಿಯು ತನ್ನ ಲೆಡ್ಜರ್ ಖಾತೆಗಳಲ್ಲಿ ಸುಳ್ಳು ಅಥವಾ ನಕಲಿ ನಮೂದನ್ನು ಮಾಡಿದರೆ ಅಥವಾ ಖಾತೆ ಪುಸ್ತಕದಲ್ಲಿ ದಾಖಲಾದ ನಮೂದನ್ನು ಅಳಿಸಿದರೆ, ಅದನ್ನು ಉದ್ದೇಶಪೂರ್ವಕ ತೆರಿಗೆ ವಂಚನೆ ಎಂದು ಪರಿಗಣಿಸಲಾಗುತ್ತದೆ.