ಇಲ್ಲಿ ಒಂದು ತಿಂಗಳವರೆಗೆ ನಡೆಯುತ್ತದೆ ವೈನ್ ಫೆಸ್ಟಿವಲ್, ವೈಶಿಷ್ಟ್ಯಗಳ ಭಂಡಾರ ಈ ಉತ್ಸವ
ವೈನ್ ಫೆಸ್ಟಿವಲ್ ಸಮಯದಲ್ಲಿ ಈ ಸ್ಥಳವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸಂಗೀತ ಕಾರ್ಯಕ್ರಮಗಳ ನಡುವೆ, ವಿವಿಧ ರೀತಿಯ ವೈನ್‌ಗಳನ್ನು ಇಲ್ಲಿ ಇರಿಸಲಾಗುತ್ತದೆ. ಇಲ್ಲಿ ಪ್ರದರ್ಶನಕ್ಕೆ ಇಡುವ ವೈನ್ ಅನ್ನು ಪ್ರವಾಸಿಗರು ಅಲ್ಲೇ ಸವಿಯಲೂ ಬಹುದು.
ನವದೆಹಲಿ : ಪ್ರತಿ ವರ್ಷ ವಿಶ್ವದ ಅನೇಕ ದೇಶಗಳಲ್ಲಿ ವೈನ್ ಉತ್ಸವವನ್ನು (Wine festival) ಬಹಳ ಉತ್ಸಾಹದಿಂದ ಆಯೋಜಿಸಲಾಗುತ್ತದೆ. ಫ್ರಾನ್ಸ್ನ ವೈನ್ ಉತ್ಸವ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಭಾರತದಲ್ಲೂ ವೈನ್ ಉತ್ಸವವನ್ನುಆಚರಿಸಲಾಗುತ್ತದೆ. ವೈನ್ ಉತ್ಪಾದನೆಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ನಾಸಿಕ್ (Nasik wine fest) ಜಿಲ್ಲೆಯಲ್ಲಿ ಯೂ ವೈನ್ ಉತ್ಸವ ಆಚರಿಸಲಾಗುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಸ್ಥಳೀಯ ದ್ರಾಕ್ಷಿ ಬೆಳೆಗಾರರು ಮತ್ತು ವೈನ್ ಫ್ಯಾಕ್ಟರಿ ಮಾಲೀಕರು ಪ್ರತಿವರ್ಷ ಆಕರ್ಷಿಸಲು 'ವೈನ್ ಫೆಸ್ಟಿವಲ್ ಅನ್ನು' ಆಯೋಜಿಸಲಾಗುತ್ತದೆ.
ಒಂದು ತಿಂಗಳವರೆಗೆ ನಡೆಯುತ್ತದೆ ವೈನ್ ಫೆಸ್ಟಿವಲ್ :
ಈ ಉತ್ಸವ ಪ್ರತಿ ವರ್ಷ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್ ವರೆಗೆ ನಡೆಯುತ್ತದೆ. ರಾಜ್ಯದಲ್ಲಿ ವೈನ್ ಟೂರಿಸಂ (Wine tourism) ಅನ್ನು ಉತ್ತೇಜಿಸುವ ಉದ್ದೇಶದಿಂದ, ವಿವಿಧ ಕಂಪನಿಗಳು, ಸುಲಾ ವೈನ್ಸ್ (sula wine), ಪೆರ್ನೋಡ್ ರಿಕಾರ್ಡ್, ವಲ್ಲೋನ್, ಸೋಮ ವೈನ್ಸ್, ಯಾರ್ಕ್ ವೈನರಿ, ವಿಂಚೂರ್ ವೈನ್ಸ್ ಮತ್ತು ಗ್ರೋವರ್ ಜಂಪಾ ಹೀಗೆ ವಿವಿಧ ಪ್ರಕಾರದ ವೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.
ಇದನ್ನೂ ಓದಿ :Driving License ಬಗ್ಗೆ ಬಿಗ್ ನ್ಯೂಸ್ : ಈಗ ಟೆಸ್ಟ್ ನೀಡದೆ ಸಿಗಲಿದೆ 'ಡ್ರೈವಿಂಗ್ ಲೈಸನ್ಸ್' ಸರ್ಕಾರದ ಹೊಸ ನಿಯಮ!
ವೈನ್ ಫೆಸ್ಟಿವಲ್ (Wine festival) ಸಮಯದಲ್ಲಿ ಈ ಸ್ಥಳವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸಂಗೀತ ಕಾರ್ಯಕ್ರಮಗಳ ನಡುವೆ, ವಿವಿಧ ರೀತಿಯ ವೈನ್‌ಗಳನ್ನು ಇಲ್ಲಿ ಇರಿಸಲಾಗುತ್ತದೆ. ಇಲ್ಲಿ ಪ್ರದರ್ಶನಕ್ಕೆ ಇಡುವ ವೈನ್ ಅನ್ನು ಪ್ರವಾಸಿಗರು ಅಲ್ಲೇ ಸವಿಯಲೂ ಬಹುದು.
ಯುರೋಪ್ ನಲ್ಲೂ ಪ್ರಸಿದ್ಧ ನಾಸಿಕ್ ವೈನ್ :
ಭಾರತೀಯ ವೈನ್ ಅಕಾಡೆಮಿಯ (Indian wine academy)ಪ್ರಕಾರ, ಈ ವೈನ್ ಫೆಸ್ಟಿವಲ್ ಮೇಲೆ ಕೂಡಾ ಕರೋನಾದ (Coronavirus) ಕರಿನೆರಳು ಬಿದ್ದಿದೆ. ದೇಶದಲ್ಲಿ ಸುಮಾರು 110 ನಗರಗಳಲ್ಲಿ ವೈನ್ ತಯಾರಿಸಲಾಗುತ್ತದೆ, ಈ ಪೈಕಿ 48ಕ್ಕೂ ಹೆಚ್ಚು ವೈನ್ ತಯಾರಿಸುವ ಪ್ರದೇಶಗಳು ನಾಸಿಕ್ ನಲ್ಲಿಯೇ ಇವೆ. ಪ್ರತಿ ವರ್ಷ ದೇಶದಲ್ಲಿ ಸುಮಾರು 20 ಮಿಲಿಯನ್ ಲೀಟರ್ ವೈನ್ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಅರ್ಧದಷ್ಟು ಭಾಗವನ್ನು ನಾಸಿಕ್‌ನಲ್ಲಿಯೇ ಉತ್ಪಾದಿಸಲಾಗುತ್ತದೆ.
ಇದನ್ನೂ ಓದಿ :Raksha Bandhan 2021: ದೇಶದ ಜನತೆಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ‘ರಕ್ಷಾ ಬಂಧನ’ದ ಶುಭಾಶಯ
ನಾಸಿಕ್‌ನ ವೈನ್‌ಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಲ್ಲಿಯ ವೈನ್ ಜಪಾನ್ (Japan) ಮತ್ತು ಯುರೋಪಿನಲ್ಲಿಯೂ ಪ್ರಸಿದ್ಧವಾಗಿದೆ. ಇಲ್ಲಿಯ ವೈನ್ ಅನ್ನು ಗಲ್ಫ್ ದೇಶಗಳಿಗೆ ಮತ್ತು ಯುರೋಪಿನ ಪ್ರತಿಯೊಂದು ದೇಶಗಳಿಗೂ ರಫ್ತು ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ