Winter Vacation 2024 School Closed : ಹೊಸ ವರ್ಷ ಆಗಮನದೊಂದಿಗೆ, ಚಳಿ ಕೂಡಾ ಹೆಚ್ಚಾಗಿದೆ. ಕೆಲವು ಶಾಲೆಗಲ್ಲಿ ಈಗಾಗಲೇ ಚಳಿಗಾಲದ ರಜೆ ನೀಡಲಾಗಿದ್ದರೆ, ಇನ್ನು ಕೆಲವು ಶಾಲೆಗಳು ಪುನರಾರಂಭವಾಗಿದೆ.ಆದರೆ ಬೀಸುತ್ತಿರುವ ಶೀತ ಗಾಳಿ, ಮೈ ಕೊರೆಯುವ ಚಳಿಯ ಕಾರಣ ಮಕ್ಕಳು ಶಾಲೆಗೆ ತೆರಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕೆಳಗಿನ ರಾಜ್ಯಗಳಲ್ಲಿ ರಜೆಯನ್ನು ಮುಂದುವರೆಸಲಾಗಿದೆ.  


COMMERCIAL BREAK
SCROLL TO CONTINUE READING

ದೆಹಲಿ  :
ದೆಹಲಿಯಲ್ಲಿ ಚಳಿಗಾಲದ ರಜೆಯನ್ನು ವಿಸ್ತರಿಸಲು ಘೋಷಿಸಲಾಗಿದೆ. ನಗರದ ಶಾಲೆಗಳಿಗೆ ಗ ಜನವರಿ 12 ರವರೆಗೆ ರಜೆ ಘೋಷಿಸಲಾಗಿದೆ. ಶೀತ ಅಲೆ ಮತ್ತು ಯಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ ನರ್ಸರಿಯಿಂದ 5 ನೇ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ಪಾಲಕರು ಮತ್ತು ವಿದ್ಯಾರ್ಥಿಗಳು ದೆಹಲಿ ಚಳಿಗಾಲದ ರಜೆ 2024 ರ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶಾಲಾ ಆಡಳಿತವನ್ನು ಸಂಪರ್ಕಿಸಬಹುದು.


ಇದನ್ನೂ ಓದಿ : ಬಜೆಟ್‌ ಇತಿಹಾಸದಲ್ಲಿ ಮೊದಲು ಬಜೆಟ್‌ ಮಂಡಿಸಿದ ಆ ವ್ಯಕ್ತಿ ಯಾರು..?


ನೋಯ್ಡಾ :
ನೋಯ್ಡಾದಲ್ಲಿ ಶಾಲೆಗಳಿಗೆ ಜನವರಿ 14, 2024 ರವರೆಗೆ ರಜೆ ನೀಡಲಾಗಿದೆ. ಬೀಸುತ್ತಿರುವ  ಶೀತಗಾಳಿಯ ಕಾರಣದಿಂದಾಗಿ 1 ರಿಂದ 8 ನೇ ತರಗತಿವರೆ  ರಜೆ ಘೋಷಿಸಲಾಗಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ, ಶಾಲಾ ಸಮಯವನ್ನು ಬದಲಿಸಲಾಗಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಎಂದು ಶಾಲಾ ಸಮಯವನ್ನು ನಿಗದಿ ಪಡಿಸಲಾಗಿದೆ.  


ಘಾಜಿಯಾಬಾದ್ :
ಘಾಜಿಯಾಬಾದ್ ನಲ್ಲಿಯೂ ಜನವರಿ 14, 2024 ರವರೆಗೆ ಗಾಜಿಯಾಬಾದ್‌ನ ಶಾಲೆಗಳಿಗೆ ರಜೆ  ಘೋಷಿಸಲಾಗಿದೆ. ತೀವ್ರ ಚಳಿಯಿಂದಾಗಿ 1ರಿಂದ 8ನೇ ತರಗತಿವರೆಗೆ ರಜೆ ನೀಡಲಾಗಿದೆ. 


ರಾಜಸ್ಥಾನ:
ರಾಜಸ್ಥಾನದ ಶಾಲೆಗಳಲ್ಲಿ ಚಳಿಗಾಲದ ರಜೆ ಡಿಸೆಂಬರ್ 25,ರಂದು ಪ್ರಾರಂಭವಾಗಿದೆ. ಆದರೂ ರಾಜಸ್ಥಾನದಲ್ಲಿ ಚಳಿಗಾಲದ ರಜೆಯ ಅಂತ್ಯಕ್ಕೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. 


ಇದನ್ನೂ ಓದಿ : ಮಾಲ್ಡೀವ್ಸ್ ನ ಆಸಕ್ತಿಯಾದಕ ಸಂಗತಿಗಳ ಬಗ್ಗೆ ನಿಮಗೇಷ್ಟು ತಿಳಿದಿದೆ..?


ಪಂಜಾಬ್  :
ಪಂಜಾಬ್ ಶಾಲೆಗಳಲ್ಲಿ ಚಳಿಗಾಲದ ರಜಾದಿನಗಳನ್ನು ಡಿಸೆಂಬರ್ 14 ಮತ್ತು 31, 2023 ರ ನಡುವೆ ನಿಗದಿಪಡಿಸಲಾಗಿತ್ತು. ಪಂಜಾಬ್ ನಲ್ಲಿಯೂ ಶಾಲಾ ರಜೆಗಳ ವಿಸ್ತರಣೆಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ನಿರೀಕ್ಷಿಸುತ್ತಿದ್ದರು. ಇದೀಗ ಅಧಿಕಾರಿಗಳು ಶಾಲೆಯ ಸಮಯವನ್ನು ಬದಲಾಯಿಸಿದ್ದಾರೆ. ರಾಜ್ಯದ ಶಾಲೆಗಳು ಇನ್ನು ಮುಂದೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕಾರ್ಯನಿರ್ವಹಿಸಲಿವೆ.ಜನವರಿ 14, ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.