ನವದೆಹಲಿ: 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಸಹಾಯ ಮಾಡುವ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಲಕ್ನೋದ ಐಐಎಂನೊಂದಿಗೆ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಐಐಎಂ-ಲಕ್ನೋ ಸಹಯೋಗದೊಂದಿಗೆ ಭಾನುವಾರ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ-ಮಂಥನ್ ’ನ ಎರಡನೇ ಅಧಿವೇಶನಕ್ಕೆ ಸ್ವಲ್ಪ ಮುಂಚಿತವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಎರಡನೇ ಅಧಿವೇಶನದಲ್ಲಿ ಆಡಳಿತದ ಉನ್ನತ ಅಧಿಕಾರಿಗಳು ಮಂತ್ರಿಗಳ ಜೊತೆಗೆ ಐಐಎಂ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.


ಮಂಥನ್ ನ ಎರಡನೇ ಅಧಿವೇಶನವು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ತಂಡದ ಕೆಲಸಗಳ ಮೂಲಕ ನಾವು ಗುರಿಗಳನ್ನು ವ್ಯಾಖ್ಯಾನಿಸುತ್ತೇವೆ ಮತ್ತು ಸಾಧಿಸುತ್ತೇವೆ. ಮೂರನೇ ಅಧಿವೇಶನದಲ್ಲಿ ಅದೇ ತಂಡವು ಐಐಎಂನೊಂದಿಗೆ ಕುಳಿತು ಕೆಲಸ ಮಾಡುತ್ತೇವೆ. ಮಾರ್ಗಸೂಚಿಯ ಮೂಲಕ ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧಿಸುವ ಯೋಜನೆ ರೂಪಿಸುತ್ತೇವೆ. ಆ ಮೂಲಕ ಇದು ರಾಜ್ಯವನ್ನು ಡಾಲರ್ 1 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ 'ಎಂದು ಯೋಗಿ ಆದಿತ್ಯನಾಥ್ ಹೇಳಿದರು.


'ಇಂದಿನ ಸಭೆಯಲ್ಲಿ, ಮಂತ್ರಿಗಳನ್ನು ಹೊರತುಪಡಿಸಿ, ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖೆಗಳ ಮುಖ್ಯಸ್ಥರು ಸಹ ಸೇರಿದ್ದಾರೆ. ಮಂತ್ರಿಗಳಿಗೆ ಸಾರ್ವಜನಿಕ ಜೀವನದಲ್ಲಿ ಅನುಭವವಿದೆ ಮತ್ತು ಆಡಳಿತಾಧಿಕಾರಿಗಳಿಗೆ ದೃಷ್ಟಿ ಕೋನ ಇದೆ. ಐಐಎಂ ತಂಡದ ಸಹಾಯದಿಂದ ಉತ್ತಮ ಫಲಿತಾಂಶ ಸಿಗಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.


ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ-ಮಂಥನ್ ನ ಮೂರನೇ ಅಧಿವೇಶನವನ್ನು ಸೆಪ್ಟೆಂಬರ್ 22 ರಂದು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಮೊದಲ ಅಧಿವೇಶನವನ್ನು ಸೆಪ್ಟೆಂಬರ್ 8 ರಂದು ನಡೆಸಲಾಯಿತು, ಇದರಲ್ಲಿ ಯೋಗಿ ಆದಿತ್ಯನಾಥ್ ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು ಐಐಎಂ-ಲಕ್ನೋ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.