ನವದೆಹಲಿ: ಒಂದು ವೇಳೆ ನೀವು ಕೂಡ ದೇಶದ ಸಾರ್ವತ್ರಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಗೃಹಸಾಲ ಪಡೆದಿದ್ದರೆ, ನಿಮ್ಮ ಪಾಲಿಗೆ ಈ ಸುದ್ದಿ ಮತ್ತಷ್ಟು ನೆಮ್ಮದಿ ನೀಡಲಿದೆ. ಆದರೆ, ಈ ಬ್ಯಾಂಕ್ ನಲ್ಲಿ ನೀವು ಯಾವುದೇ ರೀತಿಯ ಉಳಿತಾಯ ಖಾತೆ ಹೊಂದಿದ್ದರೆ ಈ ಸುದ್ದಿ ನಿಮ್ಮ ಪಾಲಿಗೆ ಕೊಂಚ ಕಹಿ ಅನುಭವ ನೀಡಲಿದೆ. 


COMMERCIAL BREAK
SCROLL TO CONTINUE READING

ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳವಾರ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು 35 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದೆ. ಅಂದರೆ ಶೇ.೦.35ರಷ್ಟು ಇಳಿಕೆ ಮಾಡಿದ್ದು, ಈ ನೂತನ ದರಗಳು ಏಪ್ರಿಲ್ 10ರಿಂದ ಅನ್ವಹಿಸಲಿವೆ.


ಬ್ಯಾಂಕ್ ನ ಈ ನಿರ್ಣಯದಿಂದ ಬ್ಯಾಂಕ್ ನ MCLR ದರ ಶೇ.7.75ರಿಂದ ಶೇ.7.40 ಕ್ಕೆ ಬಂದು ತಲುಪಿದೆ. ಈ ಕಡಿತದ ಅತಿ ಹೆಚ್ಚು ಲಾಭ ಹೋಮ್ ಲೋನ್ ಪಡೆದ ಗ್ರಾಹಕರಿಗೆ ಸಿಗಲಿದೆ. ಇದರ ಜೊತೆಗೆ ಎಲ್ಲ ರೀತಿಯ ರಿಟೇಲ್ ಸಾಲ ಪಡೆದ ಗ್ರಾಹಕರಿಗೂ ಸಹ ಇದರ ನೇರ ಲಾಭ ಸಿಗಲಿದೆ.


ಹೋಮ್ ಲೋನ್ ಮಾಸಿಕ ಕಂತಿನಲ್ಲಿ ಎಷ್ಟು ಉಳಿತಾಯ
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ SBI, ಈ ಇಳಿಕೆಯಿಂದ MCLRದೊಂದಿಗೆ ಲಿಂಕ್ ಆಗಿರುವ 30 ವರ್ಸಗಳ ಅವಧಿಯ ಹೋಮ್ ಲೋನ್ ಮಾಸಿಕ ಕಂತಿನಲ್ಲಿ ಪ್ರತಿ ಒಂದು ಲಕ್ಷಕ್ಕೆ 24 ರೂ. ಉಳಿತಾಯವಾಗಲಿದೆ. ಅಂದರೆ, ಒಂದುವೇಳೆ 30 ವರ್ಷಗಳ ಅವಧಿಗೆ ನೀವು 30 ಲಕ್ಷ ರೂ. ಸಾಲ ಪಡೆದಿದ್ದರೆ, ನಿಮ್ಮ EMI ನಲ್ಲಿ 720 ರೂ.ಗಳಷ್ಟು ಇಳಿಕೆಯಾಗಲಿದೆ.


ಇದನ್ನು ಹೊರತುಪಡಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ಎಲ್ಲ ಅವಧಿಯ ರಿಟೇಲ್ ಹಾಗೂ ಬಲ್ಕ್ ಠೇವಣಿಗಳ ಬಡ್ಡಿ ದರಗಳಲ್ಲಿ ಶೇ.0.20 ರಿಂದ ಶೇ.1 ರಷ್ಟು ಕಡಿತ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಬ್ಯಾಂಕ್,  ಸೇವಿಂಗ್ ಬ್ಯಾಂಕ್ ನಲ್ಲಿ ರೂ.1 ಲಕ್ಷದ ವರೆಗಿನ ಠೇವಣಿಗೆ ಶೇ.3 ರಷ್ಟು ಬಡ್ಡಿ ಸಿಗಲಿದ್ದು, ಒಂದು ಲಕ್ಷಕ್ಕಿಂತ ಅಧಿಕ ಠೇವಣಿ ಮೊತ್ತಕ್ಕೆ ಶೇ.2.75 ರಷ್ಟು ಬಡ್ಡಿ ಸಿಗಲಿದ್ದು, ಬಡ್ಡಿದರ ಬದಲಾವಣೆ ಏಪ್ರಿಲ್ 15 ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.


ಮಾರ್ಚ್ 27 ರಂದು ತನ್ನ ಮಾನಿಟರಿ ಪಾಲಸಿ ರಿವ್ಯೂ ಮಾಡಿದ್ದ SBI, ತನ್ನ ರೆಪೋ ರೇಟ್ ನಲ್ಲಿ ಶೇ.0.75 ರಷ್ಟು ಇಳಿಕೆ ಮಾಡುವ ಘೋಷಣೆ ಮಾಡಿತ್ತು. ಆ ಬಳಿಕ ಬ್ಯಾಂಕ್ ತನ್ನ ಬಡ್ಡಿದರಗಳಲ್ಲಿ ಶೆ.075 ರಷ್ಟು ಇಳಿಕೆ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.