Biparjoy Latest Update: ಹವಾಮಾನ ಇಲಾಖೆ (IMD) ಪ್ರಕಾರ,  ಬಿಪರ್ಜೋಯ್ ಮುಂದಿನ 6 ಗಂಟೆಗಳಲ್ಲಿ ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದರೆ, ಅದು ಗುಜರಾತ್ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇಲ್ಲದಿರುವುದು ಸಮಾಧಾನದ ಸಂಗತಿ. ಬಿಪರ್‌ಜೋಯ್ ಚಂಡಮಾರುತವು ಪೋರಬಂದರ್ ಕರಾವಳಿಯಿಂದ 200-300 ಕಿಮೀ ದೂರದಲ್ಲಿ ಹಾದುಹೋಗುವ ಮುನ್ಸೂಚನೆ ಇದೆ, ಆದರೆ ಜೂನ್ 15 ರವರೆಗೆ ಗುಜರಾತ್‌ನಲ್ಲಿ ಗುಡುಗು ಸಹಿತ ಬಿರುಗಾಳಿ ಮತ್ತು ಬಲವಾದ ಮಳೆ ಬೀಸುವ ಸಾಧ್ಯತೆಯಿದೆ. IMD ಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಅತ್ಯಂತ ತೀವ್ರವಾದ ಚಂಡಮಾರುತ 'ಬಿಪರ್ಜೋಯ್' ಮುಂದಿನ 12 ಗಂಟೆಗಳಲ್ಲಿ ಅತ್ಯಂತ ತೀವ್ರವಾದ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಚಂಡಮಾರುತ ಬಿಪರ್ಜೋಯ್ ಎಲ್ಲಿಯವರೆಗೆ ಬಂದಿದೆ?
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಇದು ಉತ್ತರ-ವಾಯುವ್ಯಕ್ಕೆ ಚಲಿಸುವ ಮೊದಲು ಕ್ರಮೇಣ ಉತ್ತರ-ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ. ಅಹಮದಾಬಾದ್ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಮಾತನಾಡಿ, ಬಿಪರ್‌ಜೋಯ್ ಚಂಡಮಾರುತವು ಪ್ರಸ್ತುತ ಪೋರಬಂದರ್‌ನಿಂದ 600 ಕಿಮೀ ದೂರದಲ್ಲಿದೆ. ಇದು ಮತ್ತಷ್ಟು ಚಲಿಸುವಾಗ, ಪೋರ್ಟ್ ಸಿಗ್ನಲ್ ಎಚ್ಚರಿಕೆಗಳು ಅದಕ್ಕೆ ಅನುಗುಣವಾಗಿ ಬದಲಾಗುತ್ತವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Amit Shah: 'ಮುಸ್ಲಿಂ ಮೀಸಲಾತಿ ಕೊನೆಗೊಳಿಸುವುದೆ ನಮ್ಮ ಗುರಿ', ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದ ಅಮಿತ್ ಶಾ


ಬಿಪರ್‌ಜೋಯ್ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆಯೇ?
ಮುನ್ಸೂಚನೆಯ ಪ್ರಕಾರ, ಈ ಅವಧಿಯಲ್ಲಿ ಬಿಪ್‌ಜಾಯ್ ಚಂಡಮಾರುತವು ಪೋರ್‌ಬಂದರ್‌ನಿಂದ ಸುಮಾರು 200-300 ಕಿಮೀ ಮತ್ತು ಕಚ್‌ನ ನಲಿಯಾದಿಂದ 200 ಕಿಮೀ ದೂರದಿಂದ ಹಾದುಹೋಗುವ ನಿರೀಕ್ಷೆಯಿದೆ. ಸದ್ಯದ ಮುನ್ಸೂಚನೆಯಂತೆ ಗುಜರಾತ್ ಕರಾವಳಿಗೆ ಬಿಪರ್ಜೋಯ್ ಅಪ್ಪಳಿಸುವ ಸಾಧ್ಯತೆ ಇಲ್ಲ. ಮುಂದಿನ 5 ದಿನಗಳ ಕಾಲ ಅಂದರೆ ಜೂನ್ 15ರವರೆಗೆ ಅರಬ್ಬಿ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.


ಇದನ್ನೂ ಓದಿ-General Elections 2024: ಒಂದರ ಮೇಲೊಂದರಂತೆ ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆಗೈದ ಅಮಿತ್ ಶಾ


ಬಿಪರ್ಜೋಯ್ ಎತ್ತ ಚಲಿಸುತ್ತಿದೆ?
ಬಿಪರ್‌ಜೋಯ್ ಚಂಡಮಾರುತವು ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಮೊಹಂತಿ ಹೇಳಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಅದರ ವೇಗವು ಈಶಾನ್ಯಕ್ಕೆ ಬದಲಾಗುವ ನಿರೀಕ್ಷೆಯಿದೆ. ಇದರ ನಂತರ, ಚಂಡಮಾರುತದ ದಿಕ್ಕು ಉತ್ತರ-ವಾಯುವ್ಯದ ಕಡೆಗೆ ಇರುತ್ತದೆ. ಜೂನ್ 15ರವರೆಗೆ ಗುಜರಾತ್ ನಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಗಾಳಿಯ ವೇಗವು ಪ್ರಬಲವಾಗಿರಲಿದೆ .


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.