Wives on Rent: ಜಗತ್ತಲ್ಲಿ ಬಾಡಿಗೆಗೆ ವಸ್ತುಗಳು, ಮನೆಗಳು, ಸೈಟ್’ಗಳು ಹೀಗೆ ಕೆಲವೊಂದು ಲಭ್ಯವಾಗುವುದು ತಿಳಿದಿರುವ ಸಂಗತಿ. ಆದರೆ ದೇಶದ ಈ ಗ್ರಾಮದಲ್ಲಿ ಪತ್ನಿಯರೇ ಬಾಡಿಗೆಗೆ ಸಿಗ್ತಾರಂತೆ. ಇದು ಆಶ್ಚರ್ಯವಾದ್ರೂ ಸತ್ಯ ಸಂಗತಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss: ಬಿಗ್‌ಬಾಸ್‌ನಿಂದ ದೊಡ್ಡ ಮೊತ್ತದ ಹಣದೊಂದಿಗೆ ಹೊರನಡೆದ ಟಾಪ್ 5 ಸ್ಪರ್ಧಿಗಳಿವರು!   


ಮಧ್ಯಪ್ರದೇಶದ ಒಂದು ಸ್ಥಳ ಸಾಂಸ್ಕೃತಿಕ ಬಣ್ಣಗಳಿಗೆ ಹೆಸರುವಾಸಿಯಾಗಿದೆ. ಅದೇ ಸ್ಥಳದಲ್ಲಿ ಹೆಂಡತಿಯರೂ ಬಾಡಿಗೆಗೆ ಸಿಗುತ್ತಾರೆ. ಇದು ನಿಮಗೆ ವಿಚಿತ್ರವೆನಿಸಬಹುದು ಅಥವಾ ನಂಬಿಕೆಯೇ ಬರದಿರಬಹುದು. ಆದರೆ ಇದು ನಿಜ. ರಾಜ್ಯದ ಶಿವಪುರಿ ಜಿಲ್ಲೆಯಲ್ಲಿ ‘ಧಾಡಿಚಾ ಪ್ರಾಥಾ’ ಎಂಬ ಸಂಪ್ರದಾಯವಿದ್ದು, ಈ ಸಂಪ್ರದಾಯದ ಅಡಿಯಲ್ಲಿ ಇಂದಿಗೂ ಅವಿವಾಹಿತ ಹೆಣ್ಣು ಮಕ್ಕಳಿಂದ ಹಿಡಿದು ವಿವಾಹಿತ ಪತ್ನಿಯರ ತನಕವೂ ಬಾಡಿಗೆಗೆ ಸಿಗ್ತಾರೆ. ಇದಕ್ಕಾಗಿ ಸ್ಟಾಂಪ್ ಪೇಪರ್ ಮೇಲೆ 10 ರಿಂದ 100 ರೂ.ವರೆಗೆ ಅಗ್ರಿಮೆಂಟ್ ಕೂಡ ಮಾಡಿಕೊಳ್ಳಲಾಗುತ್ತದೆ. ಇಲ್ಲಿಗೆ ಬರುವ ಪುರುಷರು ತಮ್ಮ ನೆಚ್ಚಿನ ಮಹಿಳೆಯನ್ನು ನಿಗದಿತ ಅವಧಿಗೆ ಹಣ ಪಾವತಿಸಿ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಾರಂತೆ.


ಪ್ರತಿ ವರ್ಷ ನಿಗದಿತ ಸಮಯದಲ್ಲಿ ಧಾಡಿಚಾ ಪ್ರಾಥಾ ಮಾರುಕಟ್ಟೆ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು ದೂರದೂರುಗಳಿಂದ ಖರೀದಿದಾರರು ಮತ್ತು ಪುರುಷರು ಬರುತ್ತಾರೆ. ಇಲ್ಲಿಗೆ ಅವಿವಾಹಿತ ಹೆಣ್ಣುಮಕ್ಕಳಲ್ಲದೆ ವಿವಾಹಿತ ಮಹಿಳೆಯರೂ ಬರುತ್ತಾರೆ. ಪ್ರತಿಯೊಬ್ಬರ ನಡವಳಿಕೆಯನ್ನು ಗಮನಿಸಿದ ನಂತರ, ಅವರಿಗೆ ಇಂತಿಷ್ಟು ಮೊತ್ತವನ್ನು ನಿಗದಿಪಡಿಸಿ, ಖರೀದಿದಾರರು ನಿರ್ದಿಷ್ಟ ಅವಧಿಗೆ ಹುಡುಗಿಯರು ಅಥವಾ ಮಹಿಳೆಯರನ್ನು ತಮ್ಮ ಹೆಂಡತಿಯಾಗಿ ಖರೀದಿಸಿ ಕರೆದುಕೊಂಡು ಹೋಗುತ್ತಾರೆ.


ಮಾಹಿತಿ ಪ್ರಕಾರ ಈ ಮಾರುಕಟ್ಟೆಯಲ್ಲಿ ಪತ್ನಿಯರ ಬೆಲೆ 15 ಸಾವಿರ ರೂ.ನಿಂದ ಆರಂಭವಾಗಿ 4 ಲಕ್ಷ ರೂ.ವರೆಗೆ ಇದೆಯಂತೆ. ಅಂದಹಾಗೆ ಈ ಬಾಡಿಗೆ ವ್ಯವಹಾರದ ಪ್ರಕ್ರಿಯೆಯಲ್ಲಿ ಮೊದಲು ಸ್ಟಾಂಪ್ ಪೇಪರ್ ನಲ್ಲಿ 10 ರಿಂದ 100 ರೂ.ವರೆಗೆ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಅದಾದ ಬಳಿಕ ಎರಡೂ ಕಡೆಯವರ ಷರತ್ತುಗಳನ್ನು ಅದರಲ್ಲಿ ಬರೆಯಲಾಗುತ್ತದೆ. ಹೀಗಾದ ಬಳಿಕ ಗಂಡ ಮತ್ತು ಬಾಡಿಗೆ ಹೆಂಡತಿ ಇಬ್ಬರೂ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಒಪ್ಪಂದ ಪೂರ್ಣಗೊಂಡ ನಂತರ, ಪತಿ ತನಗೆ ಈ ಹೆಂಡತಿ ಬೇಕೋ ಅಥವಾ ಬೇರೆ ಯಾರೋ ಎಂದು ನಿರ್ಧರಿಸುತ್ತಾನೆ. ಒಂದು ಆ ವ್ಯಕ್ತಿಗೆ ಮತ್ತೆ ಅದೇ ಹೆಂಡತಿ ಬೇಕೆಂದರೆ, ಅವನು ಮಾರುಕಟ್ಟೆಗೆ ಹೋಗಿ ಮತ್ತೊಮ್ಮೆ ಅಗ್ರಿಮೆಂಟ್ ಮಾಡಿ ಮೊತ್ತವನ್ನು ಪಾವತಿಸಬೇಕು.


ಇದನ್ನೂ ಓದಿ: ಇನ್ನು ಕೇವಲ 12 ದಿನಗಳಲ್ಲಿ ಹೊರ ಬೀಳುವುದು ನಿರ್ಧಾರ !ದುಪ್ಪಟ್ಟಾಗುವುದು ಸರ್ಕಾರಿ ನೌಕರರ ವೇತನ   


ಒಂದು ವೇಳೆ ಪತ್ನಿಗೆ ಆ ಸಂಬಂಧದಲ್ಲಿ ಇಷ್ಟ ಇಲ್ಲ ಎಂದಾದರೆ, ಆಕೆಗೆ ಒಪ್ಪಂದವನ್ನು ಮುರಿಯುವ ಸಂಪೂರ್ಣ ಹಕ್ಕಿದೆ, ಆದರೆ ಹಾಗೆ ಮಾಡಲು ಅವಳು ಸ್ಟಾಂಪ್ ಪೇಪರ್’ನಲ್ಲಿ ಅಫಿಡವಿಟ್ ನೀಡಬೇಕು. ಇದರ ನಂತರ ಅವರು ಖರೀದಿದಾರರಿಗೆ ನಿಗದಿತ ಮೊತ್ತವನ್ನು ಹಿಂದಿರುಗಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.