ಮುಂಬೈ: ದೆಹಲಿಗೆ ತೆರಳುತ್ತಿದ್ದ ಮಹಿಳೆಗೆ ಉದ್ಯಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ನಡೆದಿದೆ. 


COMMERCIAL BREAK
SCROLL TO CONTINUE READING

Vistara ಏರ್ಲೈನ್ಸ್ ವಿಮಾನದಲ್ಲಿ ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ 41ವರ್ಷದ ಮಹಿಳೆಗೆ 65 ವರ್ಷದ ಉದ್ಯಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.



ಘಟನೆ ಬಗ್ಗೆ ಐಪಿಸಿ ಸೆಕ್ಷನ್‌ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಉದ್ಯಮಿಯನ್ನು ಬಂಧಿಸಿದ್ದರು. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 


ಅಷ್ಟಕ್ಕೂ, ಇಂತಹ ಘಟನೆ Vistara ಏರ್ಲೈನ್ಸ್'ನಲ್ಲಿ ಇದೇ ಮೊದಲ ಬಾರಿ ನಡೆದಿಲ್ಲ. ಕಳೆದ ವರ್ಷ ಪುಣೆಯ 62 ವರ್ಷದ ವ್ಯಕ್ತಿಯೊಬ್ಬ ವಿಮಾನದ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದ.