ತಾಯಿಯನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದ ಮಗ, ಹಸಿವಿನಿಂದ ಸತ್ತ ವೃದ್ದೆ
ಉತ್ತರಪ್ರದೇಶದ ಷಹಜಹಾನ್ಪುರದಲ್ಲಿ 80 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮನೆಯೊಳಗೆ ಸಾವನ್ನಪ್ಪಿದ್ದಾಳೆ. ಆಕೆಯ ಮಗ ಮನೆಯೊಳಗೆ ಲಾಕ್ ಮಾಡಿರುವುದರಿಂದ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಜಹಾನ್ಪುರ: ಉತ್ತರಪ್ರದೇಶದ ಷಹಜಹಾನ್ಪುರದಲ್ಲಿ 80 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮನೆಯೊಳಗೆ ಸಾವನ್ನಪ್ಪಿದ್ದಾಳೆ. ಆಕೆಯ ಮಗ ಮನೆಯೊಳಗೆ ಲಾಕ್ ಮಾಡಿರುವುದರಿಂದ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಜಹಾನ್ಪುರದ ರೈಲ್ವೆ ಕಾಲೋನಿಯ ಮನೆಯಿಂದ ವಾಸನೆ ಬಂದ ನಂತರ ನೆರೆಹೊರೆಯವರು ಪೋಲಿಸರಿಗೆ ದೂರು ನೀಡಿದ್ದಾರೆ.ಆಗ ಮಹಿಳೆಯ ಶವ ಮನೆಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಪುತ್ರ ಸಲೀಲ್ ಚೌಧರಿ ರೈಲ್ವೆ ನೌಕರರಾಗಿದ್ದಾರೆ.ಎರಡು ಭಾರಿ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಹಾಜರಾಗದಿರುವುದಕ್ಕೆ ಅವರನ್ನು ಅಮಾನತು ಮಾಡಲಾಗಿತ್ತು, ಕಳೆದ ಎರಡು ತಿಂಗಳಿಂದ ಅವರು ಡ್ಯೂಟಿಯಲ್ಲಿ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋದ ನಿವಾಸಿಯಾಗಿರುವ ಚೌಧರಿ 2005 ರಿಂದ ಷಹಜಹಾನ್ಪುರದಲ್ಲಿ ಅವರಿಗೆ ಡ್ಯೂಟಿ ಪೋಸ್ಟಿಂಗ್ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದರು.ಈಗಾಗಲೇ ಆ ಮೃತ ಮಹಿಳೆಯ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು ಇನ್ನೊಂದೆಡೆ ಚೌದರಿಯವರನ್ನು ಹಿಡಿಯಲು ಪೋಲಿಸರು ಬಲೆ ಬಿಸಿದ್ದಾರೆ ಎಂದು ತಿಳಿದುಬಂದಿದೆ.