ನಾಪತ್ತೆಯಾಗಿದ್ದ ಪತಿಯನ್ನು 3 ವರ್ಷಗಳ ನಂತರ ಟಿಕ್ ಟಾಕ್ ಮೂಲಕ ಪತ್ತೆ ಹಚ್ಚಿದ ಪತ್ನಿ
ಆಶ್ಚರ್ಯಕರ ಘಟನೆಯಲ್ಲಿ ತಮಿಳುನಾಡಿನ ವಿಲ್ಲುಪುರಂನ ಮಹಿಳೆಯೊಬ್ಬರು 2 ವರ್ಷಗಳ ನಂತರ ಕಾಣೆಯಾದ ಗಂಡನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ: ಆಶ್ಚರ್ಯಕರ ಘಟನೆಯಲ್ಲಿ ತಮಿಳುನಾಡಿನ ವಿಲ್ಲುಪುರಂನ ಮಹಿಳೆಯೊಬ್ಬರು 2 ವರ್ಷಗಳ ನಂತರ ಕಾಣೆಯಾದ ಗಂಡನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟಕ್ಕೂ ಹೇಗೆ ಅಂತೀರಾ ? ಅದು ಸಾಧ್ಯವಾಗಿದ್ದು ಟಿಕ್ ಟಾಕ್ ಆಪ್ ಮೂಲಕ. ಹೌದು, ಈಗ ಜಯಪ್ರದ ಎನ್ನುವ ಮಹಿಳೆ ಸುರೇಶ ಎನ್ನುವ ವ್ಯಕ್ತಿಯನ್ನು ಮದುವೆಯಾಗಿದ್ದರು. ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಜಯಪ್ರದಾ ಪ್ರಕಾರ ಪತಿ 2016 ರಲ್ಲಿ ಕೆಲಸಕ್ಕಾಗಿ ಮನೆಯಿಂದ ಹೊರಟುಹೋಗಿ ನಂತರ ಮನೆಗೆ ಹಿಂತಿರುಗಲಿಲ್ಲ.ಈ ಕುರಿತಾಗಿ ಅವರು ವಿಲ್ಲುಪುರಂ ಪೊಲೀಸರಿಗೆ ದೂರು ನೀಡಿದರೂ ಕೂಡ ಪತ್ತೆ ಹಚ್ಚುವುದರಲ್ಲಿ ಅವರು ವಿಫಲರಾಗಿದ್ದರು.
ಆದರೆ ಇತ್ತೀಚೆಗೆ ಜಯಪ್ರದ ಅವರ ಸಂಬಂಧಿಯೊಬ್ಬರು ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ನೋಡಿದ್ದಾರೆ ಮತ್ತು ವೀಡಿಯೊದಲ್ಲಿ ಸುರೇಶ್‌ಗೆ ಹೋಲುವ ವ್ಯಕ್ತಿಯನ್ನು ನೋಡಿ ಆಶ್ಚರ್ಯಚಕಿತರಾದರು. ಆಗ ಅವರ ಸಂಬಂಧಿ ಜಯಪ್ರದಳಿಗೆ ಈ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದಾರೆ. ಟಿಕ್‌ಟಾಕ್ ಅಪ್ಲಿಕೇಶನ್‌ನಲ್ಲಿ ವೀಡಿಯೊವನ್ನು ನೋಡಿದ ನಂತರ, ವೀಡಿಯೊದಲ್ಲಿರುವ ವ್ಯಕ್ತಿ ನಿಜಕ್ಕೂ ತನ್ನ ಕಾಣೆಯಾದ ಪತಿ ಸುರೇಶ್ ಎಂದು ಖಿಚಿತ ಪಡಿಸಿಕೊಂಡಿದ್ದಾರೆ.
ಜಯಪ್ರದ ತಕ್ಷಣ ವಿಲ್ಲುಪುರಂ ಪೊಲೀಸ್ ಠಾಣೆಗೆ ಹೋಗಿ ಇಡೀ ಕಥೆಯನ್ನು ಪೊಲೀಸರಿಗೆ ವಿವರಿಸಿದನು, ನಂತರ ಕೊನೆಗೆ ಸುರೇಶನನ್ನು ಹೊಸೂರಿನಲ್ಲಿ ಇರುವುದು ತಿಳಿದಿದೆ. ವಿಚಾರಣೆಯ ನಂತರ, ಸುರೇಶ್ ಅವರು ಪೊಲೀಸರಿಗೆ ಕೆಲವು ಕುಟುಂಬ ಸಮಸ್ಯೆ ಕಾರಣಕ್ಕಾಗಿ ಓಡಿಹೋಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಒಬ್ಬ ಮಂಗಳ ಮುಖಿ ಜೊತೆ ಸಂಬಂಧವನ್ನು ಹೊಂದಿರುವ ಕುರಿತು ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಸುರೇಶ್‌ಗೆ ವಿಲ್ಲುಪುರಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸಲು ಸಲಹೆ ನೀಡಿದರು. ಕೊನೆಗೆ ಸುರೇಶ್ ತನ್ನ ಹೆಂಡತಿಯೊಂದಿಗೆ ವಾಸಿಸಲು ಒಪ್ಪಿಕೊಂಡು ವಿಲ್ಲುಪುರಂಗೆ ತೆರಳಿದ್ದಾರೆ .ಈಗ ಕಾಣೆಯಾದ ವ್ಯಕ್ತಿಯನ್ನು ಹುಡುಕಲು ಟಿಕ್‌ಟಾಕ್ ಅಪ್ಲಿಕೇಶನ್ ಇದೇ ಮೊದಲ ಬಾರಿಗೆ ಸಹಾಯ ಮಾಡಿರುವುದು ನಿಜಕ್ಕೂ ಅಚ್ಚರಿ ಸಂಗತಿಯಾಗಿದೆ.