ಮಾಜಿ ಪತಿ ಹಾಗೂ ಸ್ನೇಹಿತರಿಂದ ಜಾರ್ಖಂಡ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ
ಜಾರ್ಖಂಡ್ನ ಜಮ್ತಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ, ತದನಂತರ ಆಕೆ ಗುಪ್ತಾಂಗದಲ್ಲಿ ಕಟ್ಟಿಗೆ ತುಂಡನ್ನು ತುರುಕಿದ್ದಾರೆ. ಇದರಿಂದ ಆ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಜಮ್ತಾರಾ: ಜಾರ್ಖಂಡ್ನ ಜಮ್ತಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ, ತದನಂತರ ಆಕೆ ಗುಪ್ತಾಂಗದಲ್ಲಿ ಕಟ್ಟಿಗೆ ತುಂಡನ್ನು ತುರುಕಿದ್ದಾರೆ. ಇದರಿಂದ ಆ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈಗಾಗಲೇ ಆ ಮಾಜಿ ಪತಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಬಿ.ಎನ್. ಸಿಂಗ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ಬುಧವಾರ ರಾತ್ರಿ ಕಾಳಿ ಪೂಜೆ ಪ್ರಯುಕ್ತ ರಂಗಮಂದಿರದಲ್ಲಿ ನಾಟಕವನ್ನು ವೀಕ್ಷಿಸಲು ತೆರಳಿದ್ದರು ಆಗ ಅವರ ಮಾಜಿ ಪತಿ ಮತ್ತು ಇಬ್ಬರು ಸಹಚರರು ಆ ಮಹಿಳೆಯನ್ನು ಬಲವಂತವಾಗಿ ಪಕ್ಕದ ಹಳ್ಳಿಯೊಂದರ ಗದ್ದೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ತದನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯ ಗುಪ್ತಾಂಗದಲ್ಲಿ ಕೋಲನ್ನು ತುರುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಬೆಳಗ್ಗೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಹಿಳೆಯನ್ನು ಧ್ವನಿಯನ್ನು ಕೇಳಿ ಆಕೆಯನ್ನು ನಾರಾಯಣಪುರ ಪಟ್ಟಣದಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಅವರು ಜಮ್ತಾರಾ ಸಾದರ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದಾರೆ ಆಗ ಅಲ್ಲಿ ಆ ಮಹಿಳೆ ಮೃತಪಟ್ಟಿದ್ದಾಳೆ