ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟ ಸೊಸೆ..!
ಗುವಾಹಟಿಯಲ್ಲಿ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಮೂರು ದಿನಗಳ ಕಾಲ ಮನೆಯ ಫ್ರಿಡ್ಜ್‌ನಲ್ಲಿ ಇರಿಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಅಲ್ಲದೆ ತನಿಖೆಯ ವೇಳೆ ಆರೋಪಿ ಮಹಿಳೆ ಇಬ್ಬರ ದೇಹವನ್ನು ಮೇಘಾಲಯ ವ್ಯಾಪ್ತಿಯ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Mother in law murder case : ಗುವಾಹಟಿಯಲ್ಲಿ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಮೂರು ದಿನಗಳ ಕಾಲ ಮನೆಯ ಫ್ರಿಡ್ಜ್‌ನಲ್ಲಿ ಇರಿಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಅಲ್ಲದೆ ತನಿಖೆಯ ವೇಳೆ ಆರೋಪಿ ಮಹಿಳೆ ಇಬ್ಬರ ದೇಹವನ್ನು ಮೇಘಾಲಯ ವ್ಯಾಪ್ತಿಯ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅರೋಪಿಯನ್ನು ಬಂದನಾ ಕಲಿತಾ ಎಂದು ಗುರುತಿಸಲಾಗಿದೆ. ಸದ್ಯ ಬಂದನಾ ಜೊತೆ ಆಕೆಯ ಜೊತೆ ಸಂಬಂಧಲ್ಲಿದ್ದ ಧಂಜಿತ್ ದೇಕಾ ಹಾಗೂ ಸ್ನೇಹಿತ ಅರೂಪ್ ದಾಸ್ ಅವರನ್ನು ಬಂಧಿಸಲಾಗಿದೆ. ಅಮರೇಂದ್ರ ದೇ ಮತ್ತು ಅವರ ತಾಯಿ ಶಂಕರಿ ದೇ ಮೃತರು. ಅಮರೇಂದ್ರ ದೇ ಮತ್ತು ಅವರ ತಾಯಿ ಶಂಕರಿ ದೇ ಅವರು ಕಳೆದ 7 ತಿಂಗಳ ಹಿಂದೆಯೇ ಕೊಲೆಯಾಗಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Trending Video : ಹುಡುಗಿ ಹಾಟ್ ಡ್ಯಾನ್ಸ್ ಕಂಡು ದಂಗಾದ ನೆಟ್ಟಿಗರು.!
ಬಂದನಾ ಕಲಿತಾ ತಾನೇ ತನ್ನ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡಿ ನಂತರ ಗುವಾಹಟಿಯ ನೂನ್ಮತಿ ಪೊಲೀಸ್ ಠಾಣೆಯಲ್ಲಿ ತನ್ನ ಇಬ್ಬರೂ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಇಬ್ಬರ ಪತ್ತೆಯಾಗಿದ್ದಿಲ್ಲ. ಸ್ವಲ್ಪ ಸಮಯದ ನಂತರ, ಅಮರೇಂದ್ರ ಅವರ ಸೋದರಸಂಬಂಧಿ ಮತ್ತೊಂದು ಕಾಣೆಯಾದ ದೂರನ್ನು ದಾಖಲಿಸಿದ್ದರು. ಇದು ಬಂದನಾ ಮೇಲೆ ಅನುಮಾನವನ್ನು ಹುಟ್ಟುಹಾಕಿತು. ನಂತರ ತನಿಖೆ ಪುನಃ ಪ್ರಾರಂಭಿಸಿದಾಗ ಇಬ್ಬರು ಹತ್ಯಯಾಗಿರುವುದು ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ದಿಗಂತ ಕುಮಾರ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.
ಶಂಕಿತರು ಶವಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಿ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದರು. ನಂತರ ಸಮಯ ನೋಡಿ ಆ ಚೀಲಗಳನ್ನು ಮೇಘಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ನಾವು ಮೃತದೇಹಗಳನ್ನು ಪತ್ತೆಹಚ್ಚಿದ್ದೇವೆ. ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದೇವೆ. ಮೃತ ಇಬ್ಬರ ದೇಹಗಳು ಅಥವಾ ದೇಹದ ಎಲ್ಲಾ ಭಾಗಗಳನ್ನು ಹುಡುಕಲು ನಮ್ಮ ಕಾರ್ಯಾಚರಣೆ ನಡೆಯುತ್ತಿದೆ ಎಂದು ಚೌಧರಿ ಅವರು ಮಾಹಿತಿ ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.