ನೋಯ್ಡಾ: ನೋಯ್ಡಾದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಮೊದಲಿಗೆ ಶುಕ್ರವಾರ ಬೆಳಗ್ಗೆ, ಪತಿ ಮೆಟ್ರೊ ಟ್ರ್ಯಾಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಮೃತನ ಪತ್ನಿ ಮತ್ತು ಮಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪೊಲೀಸರ ಪ್ರಕಾರ, 33 ವರ್ಷದ ಭಾರತ್ ಎಂಬ ವ್ಯಕ್ತಿ ಸೆಕ್ಟರ್ 128 ರ ಜೆಪಿ ಪೆವಿಲಿಯನ್‌ನಲ್ಲಿ ಪತ್ನಿ ಶಿವರಾಜನಿ ಮತ್ತು ಮಗು ಜ್ಯಶೃತ ಅವರೊಂದಿಗೆ ವಾಸವಾಗಿದ್ದರು. ಡಿಸೆಂಬರ್ 13 ರಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೊ ಟ್ರ್ಯಾಕ್‌ಗೆ ಹಾರಿ ಭಾರತ್ ಆತ್ಮಹತ್ಯೆ ಮಾಡಿಕೊಂಡಿದ್ದರು.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ಮೃತರ ಸಹೋದರನೊಂದಿಗೆ ಆಸ್ಪತ್ರೆಗೆ ಹೋದರು. ಅಲ್ಲಿಂದ ಹಿಂದಿರುಗಿದ ನಂತರ, ಸಂಜೆ 7.30 ರ ಸುಮಾರಿಗೆ ಪತ್ನಿ ತನ್ನ ಹೆಣ್ಣು ಮಗುವಿನೊಂದಿಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಕುಟುಂಬವು 2019 ರಲ್ಲಿ ಕಠ್ಮಂಡುವಿನಿಂದ ಭಾರತಕ್ಕೆ ಬಂದು ನೆಲೆಸಿದ್ದರು ಎಂದು ತಿಳಿಸಿರುವ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.


ವರದಿಯನ್ನು ದೃಢಪಡಿಸಿರುವ ಅಧಿಕಾರಿ ಸ್ವೇತಾಭ್ ಪಾಂಡೆ ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡುತ್ತಾ, "ಮಹಿಳೆ ಆರ್‌ಎಂಎಲ್ ಆಸ್ಪತ್ರೆಯಲ್ಲಿ ತನ್ನ ಗಂಡನ ದೇಹವನ್ನು ಗುರುತಿಸಲು ಹೋಗಿದ್ದಳು. ಮನೆಗೆ ಹಿಂದಿರುಗಿದ ನಂತರ, ಅವಳು ತನ್ನ ಮಗಳೊಂದಿಗೆ ರೂಂ ಒಳಗೆ ಹೋಗಿ ಬೀಗ ಹಾಕಿಕೊಂಡಿದ್ದರು" ಎಂದು ಹೇಳಿದರು. ಪ್ರಾಥಮಿಕ ತನಿಖೆಯಲ್ಲಿ ಕುಟುಂಬವು ಸ್ವಲ್ಪ ಸಮಯದಿಂದ ಆರ್ಥಿಕ ತೊಂದರೆ ಎದುರಿಸುತ್ತಿತ್ತು ಎಂದು ಮಹಿಳೆಯ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅವರು ಹೇಳಿದರು.



ಸದ್ಯ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ.