ನವದೆಹಲಿ: ಬಿಹಾರದ ಕಿಶನ್ಗಂಜ್ ಜಿಲ್ಲೆಯಲ್ಲಿ ಪತಿಯ ಮರು ಮದುವೆಗೆ ಮನನೊಂದು ಕ್ರಿಮಿನಾಶಕವನ್ನು ಸೇವಿಸಿ 30 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಾಸಿಯಾ ಬೇಗಮ್ ಮತ್ತು ಅವಳ ಇಬ್ಬರು ಮಕ್ಕಳು - 6 ವರ್ಷದ ಮಶ್ಕುರ್ ಮತ್ತು 3 ತಿಂಗಳ ವಯಸ್ಸಿನ ಅಬ್ರಾರ್ - ಕಳೆದ ರಾತ್ರಿ ವಿಷ ಸೇವಿಸಿದ ತಕ್ಷಣ ಅವರನ್ನು  ಖರ್ಸೆಲ್ದೆಂಗ ಗ್ರಾಮದಲ್ಲಿನ ಆಸ್ಪತ್ರೆಗೆ ಸಾಗುತ್ತಿದ್ದ  ಸಂದರ್ಭದಲ್ಲಿ   ಮೃತಪಟ್ಟಿದ್ದಾರೆ. ಸಧ್ಯ ಆಕೆಯ ಮೂರನೆಯ ಮಗು, 2 ವರ್ಷದ ಅಯೇಶಾ, ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಸಾವಿನ ನೋವಿನ ಹೋರಾಟ ನಡೆಸಿದ್ದಾಳೆ. ಮಾಸಿಯ ಬೇಗಂ ಎಂಟು ವರ್ಷಗಳ ಹಿಂದೆ ಅನ್ಸರ್ ಅಲಮ್ ಅವರನ್ನು ವಿವಾಹವಾಗಿ ಸಂತೋಷದಿಂದ ಜೀವಿಸುತ್ತಿದ್ದರು ಎಂದು ಬಹದ್ದೂರ್ಗಂಜ್ ಠಾಣೆ ಪೊಲೀಸ್ ಮಹ್ಫೂಝ್ ಆಲಾಮ್ ಹೇಳಿದ್ದಾರೆ.


ಆದರೆ ಕೆಲವು ದಿನಗಳ ಹಿಂದೆ ತನ್ನ ಪತಿ ನೆರೆಯ ಗ್ರಾಮದಲ್ಲಿ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ತಿಳಿದ ಬಳಿಕ  ಅವರ ಸಂಬಂಧದಲ್ಲಿ ವ್ಯತ್ಯಾಸ ಬಂದಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಮನನೊಂದು ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗಾಗಲೇ ತನಿಖೆ ನಡೆಸಿರುವ ಪೊಲೀಸರು ಅನ್ಸರ್ ಮತ್ತು ಅವನ ಎರಡನೇ ಪತ್ನಿ ವಿಚಾರಣೆಗೋಸ್ಕರ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.