ನವದೆಹಲಿ: ಜಾರ್ಖಂಡದ ಜಮಷೆಡಪುರ ಮ್ಯಾಂಗೋ ಪ್ರದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಎಂದು ಪೋಸ್ ನೀಡಿ 50 ಸಾವಿರ ರೂಪಾಯಿ ಬೇಡಿಕೆ ಇಟ್ಟ ವ್ಯಕ್ತಿಗೆ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾಳೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 



COMMERCIAL BREAK
SCROLL TO CONTINUE READING

"ನಾವು ಕೆಲವು ದಿನಗಳ ಹಿಂದೆ ಅವರನ್ನು ಭೇಟಿಯಾಗಿದ್ದೆವು.ಅವರು ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡಲು ಆತನ ಮಹಿಳೆರೊಂದಿಗೆ ಬರುತ್ತಿದ್ದನು.ಆಗ ನಾನು ಕೂಡ ನನ್ನ ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಲು ಅವರ ಸಹಾಯಕ್ಕೆ ಮೊರೆ ಹೋಗಿದ್ದೆ, ಆದರೆ ಇದಕ್ಕಾಗಿ ಅವರು 50,000 ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳೆ ಸಖಿ ಶರ್ಮಾ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 


ಈ ಬೇಡಿಕೆಯಿಂದ ದಿಗ್ಭ್ರಮೆಗೊಂಡ ಮಹಿಳೆ ಎಸಿಬಿಗೆ ಕರೆ ಮಾಡಿದ್ದಾರೆ.ಆಗ  ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ತಾವು ದಾಳಿ ಮಾಡುವುದಿಲ್ಲವೆಂದು ಹೇಳಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ  ನನ್ನ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯದಿಂದ ನಾವು ಆತನನ್ನು ಬಂಧಿಸಿದ್ದೇವೆ" ಎಂದು ಹೇಳಿದ್ದಾರೆ.