ದೇಶದಲ್ಲಿ ಕರೋನಾ ವೈರಸ್‌ನಿಂದಾಗಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತೆಲಂಗಾಣದಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಎಲ್ಲರಿಗೂ ಆಶ್ಚರ್ಯ ತಂದಿದೆ. ತಾಯಿಯ ವಿಶಿಷ್ಟ ರೂಪವನ್ನು ಇಲ್ಲಿ ನೋಡಲಾಗಿದೆ. ಲಾಕ್ ಡೌನ್ ಅನ್ನು ಲೆಕ್ಕಿಸದೆ ತಾಯಿಯೊಬ್ಬಳು ತನ್ನ ಮಗನನ್ನು ಮನೆಗೆ ಕರೆತರಲು ಸ್ಕೂಟಿಯಿಂದ 1400 ಕಿ.ಮೀ ಪ್ರಯಾಣಿಸಿದ್ದಾಳೆ.


COMMERCIAL BREAK
SCROLL TO CONTINUE READING

ಈ ಮಹಿಳೆಯ ಹೆಸರು ರಜಿಯಾ ಬೇಗಮ್. ರಜಿಯಾ ಸೋಮವಾರ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದರು, ನಂತರ ಅವರು ಆಂಧ್ರಪ್ರದೇಶದ ನೆಲ್ಲೂರಿಗೆ ತೆರಳಿದ್ದಾರೆ. ಸ್ಕೂಟಿಯಲ್ಲಿ ಓರ್ವ ಮಹಿಳೆ 1400 ಕಿ.ಮೀ ಪ್ರಯಾಣಿಸುವುದು ಸುಲಭದ ಮಾತಲ್ಲ. ಆದರೆ ಮಗನನ್ನು ಸುರಕ್ಷಿತವಾಗಿ ಮರಳಿ ಮನೆಗೆ ಕರೆತರಲು  ಈ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ರಜಿಯಾ ಹೇಳಿದ್ದಾರೆ. "ರಾತ್ರಿಯಲ್ಲಿ ಯಾವುದೇ ದಟ್ಟಣೆ ಇರಲಿಲ್ಲ ಮತ್ತು ರಸ್ತೆಯಲ್ಲಿ ಜನರಿರಲಿಲ್ಲ, ಅದು ಭಯ ಹುಟ್ಟಿಸುತ್ತಿತ್ತು, ಆದರೆ ನನ್ನ ನಿಲುವಿನಲ್ಲಿ ನಾನು ದೃಢವಾಗಿದ್ದೆ” ಎಂದು ರಜಿಯಾ ಹೇಳಿದ್ದಾರೆ. ರಜಿಯಾಳ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ.  ರಜಿಯಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಎಂಜಿನಿಯರಿಂಗ್ ಪದವೀಧರ ಮತ್ತು ಎರಡನೇ ಮಗ ನಿಜಾಮುದ್ದೀನ್(19) ಓದುತ್ತಿದ್ದಾನೆ. ರಜಿಯಾ ಹೈದರಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ನಿಜಾಮಾಬಾದ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ.


ನಿಜಾಮುದ್ದೀನ್ 12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರನಾಗಿದ್ದು, ಸದ್ಯ ಎಂಬಿಬಿಎಸ್ ಪ್ರವೇಶಕ್ಕೆ ತರಬೇತಿ ಪಡೆಯುತ್ತಿದ್ದಾನೆ. ಮಾರ್ಚ್ 12 ರಂದು ತನ್ನ ಸ್ನೇಹಿತನನ್ನು ಬಿಡಲು ಅವನು ನೆಲ್ಲೂರಿನ ರಹಮತಾಬಾದ್‌ಗೆ ಹೋಗಿದ್ದ. ಅಲ್ಲಿ ಕೆಲವು ದಿನಗಳ ಕಾಲ ಆತ ತನ್ನ ಸ್ನೇಹಿತನ ಜೊತೆಗೆ ಕಾಲಕಳೆದಿದ್ದಾನೆ. ಕೆಲವು ದಿನಗಳ ಬಳಿಕ ಕರೋನಾ ಪ್ರಕೋಪದ ಹಿನ್ನೆಲೆ ಲಾಕ್‌ಡೌನ್ ಘೋಷಿಸಲಾಗಿದ್ದು,  ಆತ ಸ್ನೇಹಿತನ ಮನೆಯಲ್ಲಿಯೇ ಸಿಳುಕಿಕೊಂದಡಿದ್ದಾನೆ.. ಅವರು ಮನೆಗೆ ಮರಳಲು ಬಯಸಿದ್ದರು ಕೂಡ ಯಾವುದೇ ಮಾರ್ಗವಿರಲಿಲ್ಲ. ನಂತರ ರಜಿಯಾ ಬೇಗಂ ಅವರು ತಮ್ಮ ಮಗನನ್ನು ಮನೆಗೆ ಕರೆತರಲು ನಿರ್ಧರಿಸಿದ್ದಾರೆ. ಪೊಲೀಸರ ಭಯದಿಂದ ಅವರು ತನ್ನ ಹಿರಿಯ ಮಗನನ್ನು ಕಳುಹಿಸಲಿಲ್ಲ. ಕಾರಿನಲ್ಲಿ ಹೋಗುವ ಬದಲು, ಅವರು ಸ್ಕೂಟಿಯೊಂದಿಗೆ ಹೋಗಲು ನಿರ್ಧರಿಸಿದ್ದಾರೆ. ಏಪ್ರಿಲ್ 6 ರ ಬೆಳಿಗ್ಗೆ, ಅವರು ಮನೆಯಿಂದ ಹೊರಟು ಮರುದಿನ ಮಧ್ಯಾಹ್ನ ನೆಲ್ಲೂರಿಗೆ ತನ್ನ ಸ್ಕೂಟಿ ಮೂಲಕ ತಲುಪಿದ್ದಾರೆ. ಅಲ್ಲಿಂದ ಅವರು ತಮ್ಮ ಮಗನೊಂದಿಗೆ ಹೊರಟು ಬುಧವಾರ ಸಂಜೆ ಬೋಧನ್ ತಲುಪಿದ್ದಾರೆ.