ಪತಿಯ ಚಿಕಿತ್ಸೆಗೆ 45 ಸಾವಿರ ರೂ.ಗೆ ಮಗುವನ್ನೇ ಮಾರಿದ ತಾಯಿ
ಬರೇಲಿ: ಉತ್ತರ ಪ್ರದೇಶದಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬರೇಲಿ ಜಿಲ್ಲೆಯ ಮೀರ್ ಗಂಜ್ ಪ್ರದೇಶದಲ್ಲಿ ತನ್ನ ಗಂಡನ ಚಿಕಿತ್ಸೆಗಾಗಿ ಮಹಿಳೆಯೋರ್ವಳು ತನ್ನ 15 ದಿನದ ಹಸುಗೂಸನ್ನೇ 45 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನೋವಿನಲ್ಲೇ ಪ್ರತಿಕ್ರಿಯೆ ನೀಡಿದ ಮಹಿಳೆ 'ನನ್ನ ಪತಿಯ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ತುರ್ತು ಚಿಕಿತ್ಸೆ ಅಗತ್ಯವಾಗಿತ್ತು.ಚಿಕಿತ್ಸೆಗೆ ಹಣ ಹೊಂದಿಸಲು ನನಗೆ ಬೇರೆ ಯಾವುದೇ ಮಾರ್ಗ ಇರಲ್ಲಿಲ್ಲ. ದಿಕ್ಕು ತೋಚದೆ ಮಗುವನ್ನೇ ಮಾರಾಟ ಮಾಡುವ ಸಂದಿಗ್ಧ ಎದುರಾಯಿತು' ಎಂದಿದ್ದಾಳೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ ಮಗು ಮರಳಿ ತಾಯಿಯ ಮಡಿಲು ಸೇರುವಂತೆ ಮಾಡುತ್ತೇವೆ ಎಂದಿದೆ.