ನವದೆಹಲಿ: ಮೀಟೂ (#MeToo) ಚಳುವಳಿ ಭಾರತದಲ್ಲಿ ಸುಳ್ಳು ಪ್ರಚಾರಕ್ಕಾಗಿ ಹೆಸರು ಮಾಡುತ್ತಿದೆ.ಮಹಿಳೆಯರು 2 ರಿಂದ 4 ಲಕ್ಷ ರೂಪಾಯಿಗಳನ್ನು ತಗೆದುಕೊಂಡು ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಾಲಿವುಡ್ ನಟ ನಾನಾ ಪಟೇಕರ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಸಂಸದ ಉದಿತ್ ರಾಜ್ " ಮೀಟೂ ಪ್ರಚಾರ ಅಗತ್ಯ, ಆದರೆ ವ್ಯಕ್ತಿಯೋಬ್ಬನ ಮೇಲೆ 10 ವರ್ಷದ ನಂತರ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸುವುದರಲ್ಲಿ ಯಾವ ಅರ್ಥವಿದೆ ಹೇಳಿ? ಅಷ್ಟು ವರ್ಷಗಳ ನಂತರ ಎಲ್ಲ ಘಟನೆಗಳನ್ನು ಮತ್ತು ಸಂಗತಿಗಳನ್ನು ಹೇಗೆ ಪರಿಶೀಲಿಸುವುದು? ಹಾಗೆ ಆರೋಪವನ್ನು ಹೋರಿಸುವುದರ ಮೂಲಕ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರಲಾಗುತ್ತಿದೆ ಎಂದರು.


ಇನ್ನು ಮುಂದುವರೆದು ನಾನು ಒಪ್ಪುತ್ತೇನೆ ಇದು ಮನುಷ್ಯ ಸ್ವಭಾವದಲ್ಲಿದೆ ಎಂದು ಹಾಗಾದರೆ ಮಹಿಳೆಯರು ಕೂಡ ಸರಿ ಇದ್ದಾರೆಯೇ? ಇದನ್ನು ಅವರು ದುರುಪಯೋಗ ಪಡಿಸಿಕೊಳ್ಳುವುದಿಲ್ಲವೇ? ಇದರಿಂದಾಗಿ ವ್ಯಕ್ತಿಯ ಜೀವನ ಹಾಳಾಗಿ ಹೋಗುತ್ತದೆ ಎಂದು ಅವರು ತಿಳಿಸಿದರು. 


ಚಿತ್ರೋದ್ಯಮ, ಮಾಧ್ಯಮ ವಿಭಾಗದಲ್ಲಿ ಮೀಟೂ ಆರೋಪಗಳು ಹೆಚ್ಚಾದ ಹಿನ್ನಲೆಯಲ್ಲಿ ಉದಿತ್ ರಾಜ್ ಅವರು ಈ ರೀತಿ ಆರೋಪಿಸಿದ್ದಾರೆ.