ಫೇಸ್ಬುಕ್ ನಲ್ಲಿ ಕಿರುಕುಳ ಕೊಟ್ಟವನನ್ನು ಹಿಡಿಯಲು 900 ಕಿಮೀ ಸಾಗಿದ ಗಟ್ಟಿಗಿತ್ತಿ!
ಮಹಿಳೆಯೊಬ್ಬಳು ನಕಲಿ ಫೆಸ್ ಬುಕ್ ಖಾತೆ ಮತ್ತು ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ದೆಹಲಿಯಿಂದ ಮಧ್ಯಪ್ರದೇಶದ ಖಂಡುವಾ ಜಿಲ್ಲೆಯವರೆಗೆ ಸುಮಾರು 900 ಕಿಮೀ ವರೆಗೆ ಪತಿಯೊಂದಿಗೆ ಸಾಗಿದ್ದಾಳೆ.
ನವದೆಹಲಿ: ಮಹಿಳೆಯೊಬ್ಬಳು ನಕಲಿ ಫೆಸ್ ಬುಕ್ ಖಾತೆ ಮತ್ತು ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ದೆಹಲಿಯಿಂದ ಮಧ್ಯಪ್ರದೇಶದ ಖಂಡುವಾ ಜಿಲ್ಲೆಯವರೆಗೆ ಸುಮಾರು 900 ಕಿಮೀ ವರೆಗೆ ಪತಿಯೊಂದಿಗೆ ಸಾಗಿದ್ದಾಳೆ.
ಮೂಲಕ ದೆಹಲಿಯಲ್ಲಿ ಸಿಂಗರ್ ಮತ್ತು ಮಾಡೆಲ್ ಆಗಿರುವ ಈ ಮಹಿಳೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ಶಕೀರ್ ಹುಸೇನ್ ನನ್ನು ಹಿಡಿಯಲು ಹಲವಾರು ಬಾರಿ ದೆಹಲಿಯಲ್ಲಿ ಸೈಬರ್ ಸೆಲ್ ಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.ಆ ಶಕೀರ್ ಹುಸೇನ್ ಎನ್ನುವ ವ್ಯಕ್ತಿಯು ಈ ಮಹಿಳೆಯನ್ನು ಬೆಂಗಳೂರಿಗೆ ಬರಲು ಹೇಳಿದ್ದಲ್ಲದೆ ತನ್ನ ಜೊತೆ ಎರಡು ದಿನ ಕಳೆಯಬೇಕು ಆಗ ಮಾತ್ರ ಫೇಸ್ ಬುಕ್ ಖಾತೆಗಳನ್ನು ಅಳಿಸುವುದಾಗಿ ಹೇಳಿದ್ದಾನೆ.
ಆದರೆ ಇದರ ಬದಲಾಗಿ ಅವಳು ಖಾಂಡುವಾ ಟ್ರೈನ್ ಹತ್ತಿ ಅಲ್ಲಿಂದ ಅವಳು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಹಿಂದೆ ಆಕೆಯ ಗಂಡ ಖಾಂಡವಾದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನಲೆಯಲ್ಲಿ ಅವಳು ಅಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಆಕೆ ತನಗೆ ಅರೋಗ್ಯ ಸರಿ ಇಲ್ಲ ಎಂದು ಹೇಳಿ ಖಾಂಡವಾ ಬರಲು ಹೇಳಿದ್ದಾಳೆ.ಇದಾದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ನಂತರ ಅವನನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಇದಾದ ನಂತರ ಅವನು ಆಕೆಗೆ ಪದೆಪದೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಖಾಂಡುವಾ ಪೊಲೀಸರು ದೆಹಲಿ ಪೋಲಿಸರನ್ನು ಸಂಪರ್ಕಿಸಿ ಮತ್ತೆ ಬಂಧಿಸಿದ್ದಾರೆ.
ದೆಹಲಿಯಲ್ಲಿ ಪ್ರಕರಣ ದಾಖಲಿಸದ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಪೊಲೀಸರು " ದಂಪತಿಗಳು ನಮಗೆ ದೂರನ್ನು ಸಲ್ಲಿಸಿದ್ದರು.ಆದರೆ ಅವರು ಮರಳಿ ಬರುತ್ತಾರೆ ಎಂದು ತಿಳಿದಿದ್ದೇವು,ಅವರು ಮರಳಿ ಬಂದಿದ್ದರೆ ನಾವು ಕೇಸ್ ಬಗ್ಗೆ ಇನ್ನು ಹೆಚ್ಚಿನ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಬಹುದಿತ್ತು, ಆದರೆ ಅವರು ಬರಲೇ ಇಲ್ಲ" ಎಂದು ಡಿಸಿಪಿ ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.