ನವದೆಹಲಿ: ಇತ್ತಿಚಿಗಷ್ಟೇ ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಹೊಸ ಸಂಚಲನ ಮೂಡಿಸಿದ್ದ ಮಹಿಳೆಯರಿಬ್ಬರು ಈಗ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.


COMMERCIAL BREAK
SCROLL TO CONTINUE READING

ಕನಕ ದುರ್ಗಾ ಮತ್ತು ಬಿಂದು ಅಮ್ಮಿನಿ ಎನ್ನುವ ಇಬ್ಬರು ಮಹಿಳೆಯರು ಜನವರಿ 2 ರಂದು ಶಬರಿ ಮಲೆ ದೇವಸ್ಥಾನವನ್ನು ಪ್ರವೇಶಿಸಿದ್ದರು.ಅದರಲ್ಲಿ ಒಬ್ಬ ಮಹಿಳೆಗೆ ಅತ್ತಿಗೆ ಹಲ್ಲೆ ಮಾಡಿದ್ದರು ಈ ಹಿನ್ನಲೆಯಲ್ಲಿ ತಮಗೆ ರಕ್ಷಣೆ ಬೇಕೆಂದು ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.



ಈ ಹಿಂದೆ ಸುಪ್ರೀಂಕೋರ್ಟ್ ಲಿಂಗದ ಆಧಾರದ ಮೇಲೆ ಮಹಿಳೆಯ ಹಕ್ಕುಗಳನ್ನು ಕಡೆಗಣಿಸುವ ಹಾಗಿಲ್ಲ ಎಂದು ಮಹಿಳೆಯರಿಗೂ ಸಹಿತ ದೇವಸ್ಥಾನಕ್ಕೆ ಪ್ರವೇಶದ ಅವಕಾಶವನ್ನು ಸುಪ್ರೀಂಕೋರ್ಟ್ ಕಲ್ಪಿಸಿತ್ತು, ಆದರೆ ಇದಾದ ನಂತರ ಕೇರಳಾದ್ಯಂತ ಪ್ರತಿಭಟನೆಗಳು ಜರುಗಿದ್ದವು, ಹಲವು ಬಲಪಂಥೀಯ ಸಂಘಟನೆಗಳು ಸಹಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಮಹಿಳೆಯರು ದೇವಸ್ತಾನಕ್ಕೆ ಪ್ರವೇಶಿಸುವುದು ನಿಜಕ್ಕೂ ಜಟಿಲವಾಗಿತ್ತು. ಆದರೆ ಕೊನೆಗೂ ಈ ಇಬ್ಬರು ಮಹಿಳೆಯರು ಜನವರಿ 2 ರಂದು ದೇವಸ್ಥಾನ ಪ್ರವೇಶಿಸುವುದರ ಮೂಲಕ ಸುಪ್ರೀಂ ಆದೇಶವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದರು.


ಆದರೆ ಇದಾದ ನಂತರ ಮಹಿಳೆಯರಿಬ್ಬರು ಜೀವ ಬೆದರಿಕೆಯಿಂದಾಗಿ ಬಹಿರಂಗವಾಗಿ ಎಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಮಂಗಳವಾರದಂದು ಕನಕ ದುರ್ಗ ಎನ್ನುವ ಮಹಿಳೆಗೆ ಮನೆಯಲ್ಲಿದ್ದ ಅತ್ತೆಯೇ ಹಲ್ಲೆ ಮಾಡಿದ್ದಳು.ಈಗ ಆಕೆಯ ವಿರುದ್ದ ಪ್ರಕರಣ ದಾಖಲಾಗಿದೆ.