ಬೆಂಗಳೂರು: ಮಹಿಳೆಯರ ಆನ್‍ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಮೆಟಾ ಮತ್ತು ರಾಷ್ಟ್ರೀಯ ಮಹಿಳಾ ಆಯೋಗವು ಫರ್ಹಾನ್ ಅಖ್ತರ್ ಅವರ ಮರ್ದ್ ಜೊತೆ ಸಹಯೋಗದೊಂದಿಗೆ ಇಂದು "ಹಿಂಜರಿಯದಿರಿ, ವರದಿ ಮಾಡಿ, ಸುರಕ್ಷಿತವಾಗಿರಿ" ಎಂಬ ವರದಿಗಾರಿಕೆಯ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ಅಭಿಯಾನವು, MARD ಸಹಯೋಗದೊಂದಿಗೆ, ಆನ್‍ಲೈನ್ ನಿಂದನೆ, ಅನುಚಿತ ವಿಷಯ ಅಥವಾ ನಡವಳಿಕೆಯನ್ನು ವರದಿ ಮಾಡಲು ಬಳಕೆದಾರರಿಗೆ ಲಭ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳ ಕುರಿತು ಅರಿವು ಮತ್ತು ಜ್ಞಾನವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ರಾಯಚೂರಿನ ಜನ ತೆಲಂಗಾಣದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ: ಸಿಎಂ ಕೆ.ಚಂದ್ರಶೇಖರ್ ರಾವ್


ಇಂಗ್ಲಿಷ್ ಮತ್ತು ಐದು ಭಾರತೀಯ ಭಾಷೆಗಳಾದ - ಹಿಂದಿ, ಬೆಂಗಾಲಿ, ಮರಾಠಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಪ್ರಾರಂಭಿಸಲಾಗಿರುವ – 'ಹಿಂಜರಿಯದಿರಿ, ವರದಿ ಮಾಡಿ, ಸುರಕ್ಷಿತವಾಗಿರಿ' ಅಭಿಯನವು ಬಳಕೆದಾರರು ಆಕ್ಷೇಪಾರ್ಹವೆಂದು ಭಾವಿಸುವ ವಿಷಯವನ್ನು ಮತ್ತಷ್ಟು ಹಂಚಿಕೊಳ್ಳುವ ಬದಲಾಗಿ ವರದಿ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತದೆ.


[[{"fid":"253649","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಬಳಕೆದಾರರಿಗೆ ಸುರಕ್ಷಿತ ಇಂಟರ್ನೆಟ್ ಅನ್ನು ಸೃಷ್ಟಿಸುವ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಎತ್ತಿ ತೋರಿಸುತ್ತಾ, ಫೇಸ್‍ಬುಕ್ ಇಂಡಿಯಾ (ಮೆಟಾ) ನ ನೀತಿ ಯೋಜನೆಗಳು ಮತ್ತು ಔಟ್‍ರೀಚ್‍ನ ಮುಖ್ಯಸ್ಥ ಮಧು ಸಿಂಗ್ ಸಿರೋಹಿ, "ಸಂಶೋಧನೆಗಳ ಪ್ರಕಾರ, ಮಹಿಳೆಯರು ಡಿಜಿಟಲ್ ಆಗಿ ಸಬಲೀಕೃತವಾದಾಗ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಾರೆ ಮತ್ತು ಅದಕ್ಕೆ ಸುರಕ್ಷಿತವಾದ  ಮತ್ತು ಅಭಿವೃದ್ಧಿ ಮತ್ತು ಪ್ರಭಾವವನ್ನು ಉತ್ತೇಜಿಸುವ ಇಂಟರ್ನೆಟ್ ಅನ್ನು ನಿರ್ಮಿಸುವ ಅಗತ್ಯವಿದೆ. ಮೆಟಾದಲ್ಲಿ, ನಾವು ಮಹಿಳೆಯರಿಗೆ ಸುರಕ್ಷಿತ ಮತ್ತು ಅಂತರ್ಗತ ಇಂಟರ್ನೆಟ್ ಅನ್ನು ಸಕ್ರಿಯಗೊಳಿಸುವ ಸಾಧನಗಳು ಮತ್ತು ಸಂಪನ್ಮೂಲಗಳನ್ನು ನಿರ್ಮಿಸಲು ನಾವು ನಿರಂತರವಾಗಿ ಶ್ರಮಿಸಿದ್ದೇವೆ.  ಅನುಭವವನ್ನು ರಚಿಸಲು ನಮ್ಮೊಂದಿಗೆ ಪಾಲುದಾರರಾಗಲು ನಾವು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ನಮಗೆ ವಿಶ್ವಾಸವಿದೆ" ಎಂದರು.Breaking News : ಬಿಜೆಪಿ ಸಂಸದೀಯ ಮಂಡಳಿಯನ್ನು ಘೋಷಿಸಿದ ನಡ್ಡಾ : ಸಚಿವ ಗಡ್ಕರಿ ಔಟ್


ಅಭಿಯಾನದ ಸಹಯೋಗದ ಕುರಿತು ಮಾತನಾಡಿದ ನಟ, ನಿರ್ದೇಶಕ, ದಕ್ಷಿಣ ಏಷ್ಯಾದ UN ವುಮೆನ್ ಗುಡ್‍ವಿಲ್ ರಾಯಭಾರಿ, ಮತ್ತು MARD (ಮೆನ್ ಎಗೈನ್ಸ್ಟ್ ರೇಪ್ ಅಂಡ್ ಡಿಸ್ಕ್ರಿಮಿನೇಷನ್) ಉಪಕ್ರಮದ ಸಂಸ್ಥಾಪಕ ರಾದ ಫರ್ಹಾನ್ ಅಖ್ತರ್ ಮಾತನಾಡಿ, "MARD ನಲ್ಲಿ ನಾವು ಲಿಂಗ ಸಮಾನತೆ ಮತ್ತು ಅಂತರ್ಜಾಲದ ಪ್ರಜಾಪ್ರಭುತ್ವೀಕರಣವನ್ನು ಖಾತ್ರಿಪಡಿಸುವುದರಲ್ಲಿ ನಂಬಿಕೆ ಇಡುತ್ತೇವೆ, ಆ ಮೂಲಕ ಎಲ್ಲಾ ಬಳಕೆದಾರರ ಘನತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಜನರಿಗೆ ಸುರಕ್ಷಿತ ಆನ್‍ಲೈನ್ ಅನುಭವವನ್ನು ನಿರ್ಮಿಸಲು ಮೆಟಾ ಮತ್ತು NCW  ಜೊತೆ ಕೈಜೋಡಿಸಲು ನಾವು ಹೆಮ್ಮೆಪಡುತ್ತೇವೆ." ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.