ನವದೆಹಲಿ: ಪರಿಸರ ವಿಷಯಕ್ಕೆ ಸಂಬಂಧಿಸಿದ ಹಾಗೆ ಶಾಸಕರೊಬ್ಬರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವನ್ನು ಸಂಪರ್ಕಿಸಿದ್ದಕ್ಕೆ ಎನ್ ಜಿ ಟಿ ಅಚ್ಚರಿ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಶಾಸಕನೊಬ್ಬ ಜಹಾಂಗೀರ್ ಪುರಿಯಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯ ನಿರ್ವಹಣೆ ಹೌಸ್ ನಿರ್ಮಾಣವನ್ನು ಪ್ರಶ್ನಿಸಿ ಎನ್ಜಿಟಿಗೆ ಮೊರೆ ಹೋಗಿರುವ ಕುರಿತಾಗಿ ಅದು ಅಚ್ಚರಿಯನ್ನು ವ್ಯಕ್ತಪಡಿಸಿದೆ."ಶಾಸಕರೊಬ್ಬರು ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ರಾಧಿಕಾರವನ್ನು ಸಂಪರ್ಕಿಸುವ ಬದಲು ಟ್ರಿಬ್ಯೂನಲ್ ನ್ನು ಸಂಪರ್ಕಿಸಿದ್ದು ನಿಜಕ್ಕೂ ಅಚ್ಚರಿ, ನಮಗೆ ಶಾಸಕನು ಸಹಿತ ಸ್ವಾಯತ್ತ ಸಂಸ್ಥೆಗಳ ಮೇಲೆ ನಂಬಿಕೆ ಇರದಿರುವುದನ್ನು ನೋಡಿ ಅಚ್ಚರಿಯಾಗಿದೆ" ಎಂದು ನ್ಯಾಯಮೂರ್ತಿ ಎಸ್ಪಿ ವಾಂಗಡಿ ತಿಳಿಸಿದರು.


ಅರ್ಜಿ ವಿಚಾರಣೆ ವೇಳೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ ನ್ಯಾಯಾಧಿಕರಣ ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಬೇಕೆಂದರು.ಈಗ ಟ್ರಿಬ್ಯೂನಲ್ ಏಪ್ರಿಲ್ 24 ರಂದು ಈ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ.ಆದರ್ಶ ನಗರದ ಶಾಸಕ ಪವನ್ ಕುಮಾರ್ ಶರ್ಮಾ ಕಸ ಸಂಗ್ರಹಣೆ ಘಟಕಗಳನ್ನು ಸ್ಥಾಪಿಸುವುದರಿಂದಾಗಿ ಸುತ್ತಲಿನ ಪರಿಸರಕ್ಕೆ ಹಾನಿಯಾಗಲಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.