ಬೆಂಗಳೂರು: ರಾಜ್ಯ ಸರ್ಕಾರವು ಐಟಿ ಕಂಪನಿಗಳಿಗೆ ಕಚೇರಿ ತೆರೆಯಲು ಸೂಚಿಸುವುದಿಲ್ಲ ಎಂದು ಡಿಸಿಎಂ ಸಿ ಎನ್ ಅಶ್ವತ್ ನಾರಾಯಣ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದರು.


COMMERCIAL BREAK
SCROLL TO CONTINUE READING

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾರಾಯಣ್, ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ   Work From Home ಯೋಜನೆ ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರೆಯಲಿದೆ. ಕಂಪನಿಗಳ ಕಚೇರಿಗಳನ್ನು ತೆರೆಯಲು ಸರ್ಕಾರವು ಆದೇಶಿಸಲು ಸಾಧ್ಯವಿಲ್ಲ. ಅಂತಿಮವಾಗಿ, ಅವರು ನಿರ್ಧಾರ ತೆರೆದುಕೊಳ್ಳುತ್ತಾರೆ.ಕಂಪೆನಿಗಳು ತಮ್ಮ ಕಚೇರಿಗಳನ್ನು ತೆರೆಯುವಂತೆ ಕೇಳಲು ಸರ್ಕಾರದಲ್ಲಿ ಯಾವುದೇ ಆಲೋಚನೆ ಇಲ್ಲ. ಅಲ್ಲದೆ, ನಾವು ಅವರನ್ನು ಕೇಳಲು ಪರಿಸ್ಥಿತಿ ಸರಿಯಲ್ಲ ಎಂದು ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆಯೂ ಕರ್ನಾಟಕದ ಐಟಿ ಕ್ಷೇತ್ರ ಉತ್ತಮ ಪ್ರದರ್ಶನ ನೀಡಿದೆ ಎಂದು ತಿಳಿಸಿದರು.


ಶಾಲೆ- ಕಾಲೇಜು ಆರಂಭದ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ನೀಡುವೆವು: ಡಿಸಿಎಂ


ಕೋವಿಡ್ -19 ರ ಕಾರಣದಿಂದಾಗಿ ಕರ್ನಾಟಕದ ಐಟಿ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರು ತಮ್ಮ ಕಚೇರಿಗಳನ್ನು ಮುಚ್ಚಿದ್ದವು, ಮನೆಯಿಂದ ಕೆಲಸ ಮಾಡುವಂತೆ ನೌಕರರನ್ನು ಕೇಳಿಕೊಂಡವು. ಐಟಿ ಮತ್ತು ಬಿಪಿಓ ಸಂಸ್ಥೆಗಳಿಗೆ 2020 ರ ಡಿಸೆಂಬರ್ 31 ರವರೆಗೆ ಕೇಂದ್ರವು ವರ್ಕ ಫ್ರಾಂ ಹೋಮ್ ಸಂಪರ್ಕದ ಮಾನದಂಡಗಳನ್ನು ವಿಸ್ತರಿಸಿದೆ.


'ಕೇವಲ 7-8% ರಷ್ಟು ಉದ್ಯೋಗಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ ಮತ್ತು ಉಳಿದವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಕೆಲಸದಿಂದಾಗಿ, ಉತ್ಪಾದಕತೆ ಕಡಿಮೆಯಾಗಿದೆ ಎಂದು ಬಚ್ಚೇಗೌಡ ಹೇಳಿದರು. ನಾವು ಕಚೇರಿಗಳನ್ನು ತೆರೆಯಲು ಕಂಪನಿಗಳ ಮೇಲೆ ಒತ್ತಡವನ್ನು ತರಬೇಕು ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಕೂಡ ಧ್ವನಿಗೂಡಿಸಿದರು.


ಯಡಿಯೂರಪ್ಪ ನಾಯಕತ್ವ ಕೊಂಡಾಡಿದ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ


'ಡಿಸೆಂಬರ್ ಅಂತ್ಯದವರೆಗೆ ಸರ್ಕಾರವು ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ಐಟಿ ಕಂಪನಿಗಳು ಇನ್ನೂ ತೆರೆಯದ ಕಾರಣ, ಕ್ಯಾಬ್‌ಗಳು ಮತ್ತು ಇತರ ಅವಲಂಬಿತ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತಿವೆ 'ಎಂದು ಅವರು ಹೇಳಿದರು.ಇನ್ನೊಂದೆಡೆಗೆ ಮನೆಯಿಂದ ಮಾಡುವ ಕೆಲಸವೂ ಕೂಡ ಒಂದು ಪರಿಹಾರ ಎಂದು ನಾರಾಯಣ್ ಹೇಳಿದರು, ಒಮ್ಮೆ ಕಛೇರಿಗಳು ತೆರೆದರೆ ಅದಕ್ಕೆ ಪೂರಕ ಸೇವೆಗಳು ಸಹಿತ ತೆರೆದುಕೊಳ್ಳುತ್ತವೆ ಎಂದು ಹೇಳಿದರು.