ನವದೆಹಲಿ: Work From Hotel - ಮನೆಯಲ್ಲಿದ್ದುಕೊಂಡು ಆಫಿಸ್ ಕೆಲಸ ಮಾಡಿ ಬೋರ್ ಆಗಿರುವ ಜನರು ಇದೀಗ ಮನೆಯಿಂದ ಹೊರಬಂದು ಪ್ರವಾಸಿ ತಾಣಗಳತ್ತ ಮುಖಮಾಡಿ ಅಲ್ಲಿಂದ ಆಫಿಸ್ ಕೆಲಸ ಕೂಡ ಮಾಡುತಿದ್ದಾರೆ ಮತ್ತು ಜೊತೆಗೆ ಪ್ರವಾಸದ ಆನಂದವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಇದೀಗ ವರ್ಕ್ ಫ್ರಮ್ ಹೋಟೆಲ್ (Work From Home) ಎಂದು ಹೆಸರಿಡಲಾಗಿದೆ.


COMMERCIAL BREAK
SCROLL TO CONTINUE READING

ಕೊರೊನಾ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ
ಕೊರೊನಾ ಸಾಂಕ್ರಾಮಿಕದ (Covid-19) ಕಾರಣ ಎಲ್ಲ ಉದ್ಯಮಗಳು ಪ್ರಭಾವಿತಗೊಂಡಿವೆ. ಇದಕ್ಕೆ ಟೂರಿಸ್ಟ್ ಇಂಡಸ್ಟ್ರಿ  ಕೂಡ ಹೊರತಾಗಿಲ್ಲ. ಕಳೆದ ವರ್ಷ ಕೊರೊನಾ ಮಹಾಮಾರಿಯ (Corona Pandemic) ಕಾರಣ ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರಲಿಲ್ಲ. ಈ ವರ್ಷವೂ ಕೂಡ ಕೊರೊನಾ ಕಾರಣ ಪ್ರವಾಸಕ್ಕಾಗಿ ಜನರು ಹೊರಬೀಳುತ್ತಿಲ್ಲ. ಇದರಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸ್ಥಳೀಯ ಜನರ ಆದಾಯದ ಮೇಲೆ ವಿಪರೀತ ಪರಿಣಾಮ ಉಂಟಾಗಿದೆ. ಆದರೆ, ಮನೆಯಲ್ಲಿಯೇ ಇದ್ದುಕೊಂಡು ಬೋರ್ ಆಗುತ್ತಿರುವ ಜನರು ಇದೀಗ ಪ್ರವಾಸೋದ್ಯಮದತ್ತ (Tourism) ಮತ್ತೊಮ್ಮೆ ಮುಖಮಾಡಲು ಆರಂಭಿಸಿದ್ದಾರೆ.


ಏನಿದು ವರ್ಕ್ ಫ್ರಮ್ ಹೋಟೆಲ್ 
Coronavirus
ಎರಡನೇ ಅಲೆಯ ಬಳಿಕ ಜನರು ಆಫಿಸ್ ಗೆ ಹೋಗುವ ಬದಲು ತಮ್ಮ ಮನೆಯಲ್ಲಿಯೇ ಬಂಧಿಯಾಗಿ ಆಫಿಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿದ್ದುಕೊಂಡು ಜನ ಬೋರ್ ಆಗಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಕೊವಿಡ್ ನಿಯಮಗಳನ್ನು ಅನುಸರಿಸುತ್ತ ವರ್ಕ್ ಫ್ರಮ್ ಹೋಟೆಲ್ ನತ್ತ ತಿರುಗಿದ್ದಾರೆ. 


ಇದನ್ನೂ ಓದಿ- Corona Vaccine: ಕರೋನಾ ಲಸಿಕೆ ಪಡೆದು 10 ಕೋಟಿ ಗೆಲ್ಲುವ ಅವಕಾಶ


ವರ್ಕ್ ಫ್ರಮ್ ಹೋಟೆಲ್ ಮಾಡಲು ಜನರು ಗಿರಿಧಾಮ (Hill Stations) ಗಳಿಗೆ ತೆರಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಮನಾಲಿಯ (Manali) ಒಂದು ಹೋಟೆಲ್ ನ ಮಾಲೀಕರಾಗಿರುವ ಸಚಿನ್ ಗುಪ್ತಾ, ಮಲ್ಟಿನ್ಯಾಷನಲ್ ಕಂಪನಿಯಲ್ಲಿ (MNC) ಕೆಲಸ ಮಾಡುವ ಹೆಚ್ಚಿನ ಜನರು ಹೋಟೆಲ್ ಗಳಿಗೆ ಬರುತ್ತಿದ್ದು, ಅಲ್ಲಿಯೇ ತಂಗಿ ತಮ್ಮ ಕಂಪನಿಯ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ-ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ!


ಗಿರಿಧಾಮಗಳಿಗೆ ಭೇಟಿ ನೀಡುತ್ತಿದ್ದಾರೆ ಜನ
ಸಚಿನ್ ಹೇಳುವ ಪ್ರಕಾರ ವರ್ಕ್ ಫ್ರಮ್ ಹೋಟೆಲ್ ಗಾಗಿ ಬಹುತೇಕ ಜನರು ದೆಹಲಿ, ಗುರುಗ್ರಾಮ್, ಚಂಡಿಗಡ್ ಗಳ ಗಿರಿಧಾಮಗಳಿಗೆ ತೆರಳುತ್ತಿದ್ದಾರೆ. ಇದರಿಂದ ಕೊಂಚವಾದರೂ ಸರಿ ಹೋಟೆಲ್ ಗಳ ಆದಾಯ ಪುನಃ ಆರಂಭವಾದಂತಾಗಿದೆ. ಈ ಎಲ್ಲಾ ಹೋಟೆಲ್ ಗಳು ಕೊವಿಡ್ ನಿಯಮಾವಳಿಗಳನ್ನು (Covid-19 Guidellines) ಅನುಸರಿಸಿ ಹೋಟೆಲ್ ಗೆ ವರ್ಕ್ ಫ್ರಮ್ ಹೋಟೆಲ್ ಗಾಗಿ ಬರುವವರಿಗೆ ಅತ್ಯುತ್ತಮ ಇಂಟರ್ನೆಟ್ ಸೌಕರ್ಯಗಳನ್ನೂ ಒದಗಿಸುತ್ತಿವೆ.


ಇದನ್ನೂ ಓದಿ-ಬಿಹಾರದಲ್ಲಿ ಜೂನ್ 8ರವರೆಗೆ ಲಾಕ್ ಡೌನ್ ವಿಸ್ತರಣೆ, ನಿಯಮಗಳಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ