ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ
ವಿಶ್ವ ಬ್ಯಾಂಕ್ ಮತ್ತೊಮ್ಮೆ ಭಾರತಕ್ಕಾಗಿ ತನ್ನ ಖಜಾನೆಯ ಬಾಗಿಲನ್ನು ತೆರೆದಿದೆ.
ನವದೆಹಲಿ:ಲಾಕ್ಡೌನ್ ಮಧ್ಯೆ ಕರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕೆ ವಿಶ್ವ ಬ್ಯಾಂಕ್ ನಿರಂತರವಾಗಿ ತನ್ನ ಪ್ರೋತ್ಸಾಹ ನೀಡುತ್ತಿದೆ. ಇತ್ತೀಚೆಗಷ್ಟೇ ಮೊದಲ ಕಂತಿನ ಹಣಕಾಸಿನ ನೆರವು ನೀಡಿದ್ದ ವರ್ಲ್ಡ್ ಬ್ಯಾಂಕ್ ಇದೀಗ ಮತ್ತೊಮ್ಮೆ ಭಾರತಕ್ಕೆ ತನ್ನ ಖಜಾನೆಯ ಬಾಗಿಲನ್ನು ತೆರೆದಿದೆ. ಕರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಡ, ದುರ್ಬಲ ಕುಟುಂಬಗಳಿಗೆ ಸಾಮಾಜಿಕ ನೆರವು ನೀಡುವ ಭಾರತದ ಪ್ರಯತ್ನಗಳಿಗೆ ಸಹಾಯ ಮಾಡಲು ವಿಶ್ವ ಬ್ಯಾಂಕ್ ಶುಕ್ರವಾರ ಒಂದು ಬಿಲಿಯನ್ ಡಾಲರ್ ನೆರವಿಗೆ ಅನುಮೋದನೆ ನೀಡಿದೆ.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಳಕೆಯಾಗಲಿದೆ ಈ ಹಣ
ಈ ಸಹಾಯವನ್ನು 'ಇಂಡಿಯನ್ ಕೋವಿಡ್ -19 ಸಾಮಾಜಿಕ ಸಂರಕ್ಷಣಾ ಪ್ರತಿಕ್ರಿಯೆ ಕಾರ್ಯಕ್ರಮ ಪ್ರಚಾರ' ಕಾಗಿ ನೀಡಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಇದುವರೆಗೆ ಒಟ್ಟು ಎರಡು ಬಿಲಿಯನ್ ಡಾಲರ್ ನೀಡಲು ಬದ್ಧವಾಗಿರುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ. ಈ ಕುರಿತು ವೆಬ್ ನಾರ್ ನಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿರುವ ವಿಶ್ವ ಬ್ಯಾಂಕ್ ನ ನಿರ್ದೇಶಕ(ಕಂಟ್ರಿ) ಜುನೈದ್ ಅಹ್ಮದ್, ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ವಿಶ್ವಾಧ್ಯಂತ ಇರುವ ದೇಶಗಳ ಸರ್ಕಾರಗಳು ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರದಂತಹ ನಿರ್ಣಯಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಲಿಸಬೇಕಾಗಿದೆ ಎಂದಿದ್ದಾರೆ.
ಈ ಹಿಂದೆ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾರ್ವಜನಿಕ ಆರೋಗ್ಯ ಸಿದ್ಧತೆಗಳನ್ನು ಬಲಪಡಿಸಲು ವಿಶ್ವ ಬ್ಯಾಂಕ್ ಭಾರತಕ್ಕೆ 7500 ಕೋಟಿ ಪ್ಯಾಕೇಜ್ ನೀಡಿತು. ಇದುವರೆಗೆ ಭಾರತದ ಆರೋಗ್ಯ ಕ್ಷೇತ್ರಕ್ಕೆ ಬ್ಯಾಂಕ್ ನೀಡಿದ ಅತಿ ದೊಡ್ಡ ಬೆಂಬಲ ಇದಾಗಿದೆ. ಕರೋನಾ ವೈರಸ್ ವಿರುದ್ಧ ಹೋರಾಡಲು ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡುವುದಾಗಿ ಬಹಳ ಹಿಂದೆಯೇ ಘೋಷಿಸಿದೆ. ಕೋರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ನೆರವು ವಿಶ್ವ ಬ್ಯಾಂಕ್ ತನ್ನ ನೆರವು ನೀಡುತ್ತಿದೆ.