World Day of Social Justice: ಇಂದು ವಿಶ್ವ ಸಾಮಾಜಿಕ ನ್ಯಾಯ ದಿನ ! ಏನೀ ದಿನದ ಮಹತ್ವ
World Day of Social Justice: ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಪ್ರತಿ ವರ್ಷ ಫೆಬ್ರವರಿ 20 ರಂದು ಆಚರಿಸಲಾಗುತ್ತದೆ. ಈ ದಿನ ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಒಡೆದ ಜನರು ಒಂದಾಗುತ್ತಾರೆ. 2007 ರಲ್ಲಿ, ಯುಎನ್ ಈ ದಿನವನ್ನು ಆಚರಿಸುವಂತೆ ಘೋಷಣೆ ಮಾಡಿತ್ತು.
World Day of Social Justice : ಇಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತಿದೆ. ಒಂದಲ್ಲ ಒಂದು ಕಾರಣದಿಂದ ಜಗತ್ತಿನಲ್ಲಿ ತಾರತಮ್ಯ ಎದ್ದು ಕಾಣುತ್ತದೆ. ಈ ಕಾರಣಕ್ಕಾಗಿ, ಜನರು ಸಹ ಪರಸ್ಪರ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಈ ಕಾರಣದಿಂದ ಅನೇಕ ಜನರು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಗತ್ತಿನಲ್ಲಿರುವ ಇಂಥಹ ಅನಿಷ್ಟಗಳನ್ನು ಕೊನೆಗಾಣಿಸಿ ಜನರಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ.
ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ :
ಪ್ರಪಂಚದಾದ್ಯಂತ ಈ ದಿನದಂದು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರನ್ನು ಜಾಗೃತಗೊಳಿಸಲಾಗುತ್ತದೆ. ಅನೇಕ ಉದ್ದೇಶಗಳನ್ನು ಪೂರೈಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಜನಾಂಗ, ಲಿಂಗ, ಧರ್ಮ, ಜಾತಿ ಇತ್ಯಾದಿಗಳ ಆಧಾರದ ಮೇಲೆ ವಿಭಜಿಸಲ್ಪಟ್ಟ ಜನರು ಒಂದಾಗುತ್ತಾರೆ. ಇದಲ್ಲದೆ, ಜನರ ನಡುವೆ ಹೆಚ್ಚುತ್ತಿರುವ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಈ ದಿನ ವಿವಿಧ ವಿಷಯಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.
ಇದನ್ನೂ ಓದಿ : ‘ಶಿವಾಜಿ’ಗಾಗಿ ABVP-ಎಡಪಂಥೀಯ ವಿದ್ಯಾರ್ಥಿಗಳ ನಡುವೆ ಘರ್ಷಣೆ: JNU ಕ್ಯಾಂಪಸ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
2007 ರಲ್ಲಿ ಯುಎನ್ ಘೋಷಿಸಿತ್ತು ವಿಶ್ವ ಸಾಮಾಜಿಕ ನ್ಯಾಯ ದಿನ :
ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 2007 ರಲ್ಲಿ, ಈ ದಿನವನ್ನು ವಿಶ್ವಸಂಸ್ಥೆಯು ಘೋಷಿಸಿತು. 2009ರಲ್ಲಿ, ಈ ದಿನವನ್ನು ಪ್ರಪಂಚದಾದ್ಯಂತ ಮೊದಲ ಬಾರಿಗೆ ಆಚರಿಸಲಾಯಿತು. ವಿಶ್ವ ಸಾಮಾಜಿಕ ನ್ಯಾಯ ದಿನದ ಗುರಿಯನ್ನು ಈಡೇರಿಸಲು ವಿಶ್ವದ ಹಲವು ದೇಶಗಳು ವಿಶ್ವಸಂಸ್ಥೆಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಇದರ ಅಡಿಯಲ್ಲಿ ಬಡತನ, ನಿರುದ್ಯೋಗ, ಜಾತಿ, ಲಿಂಗ ಅಥವಾ ಧರ್ಮದ ಆಧಾರದ ಮೇಲೆ ವಿಭಜಿತವಾಗಿರುವ ಜನರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಭಾರತ ಸರ್ಕಾರದಿಂದಲೂ ಪರಿಣಾಮಕಾರಿ ಕ್ರಮ :
ಪ್ರಪಂಚದ ಅನೇಕ ದೇಶಗಳಲ್ಲಿ ಪ್ರತಿ ವರ್ಷ, ಈ ದಿನವನ್ನು ಜನರನ್ನು ಜಾಗೃತಗೊಳಿಸುವ ಉದ್ದೇಶಕ್ಕಾಗಿ ಆಚರಿಸಲಾಗುತ್ತದೆ. ಭಾರತ ಕೂಡಾ ಈ ದಿಕ್ಕಿನಲ್ಲಿ ಅನೇಕ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತೀಯ ಸಂವಿಧಾನದ ರಚನೆಯ ಸಮಯದಲ್ಲಿ, ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಪ್ರಮುಖ ಮನ್ನಣೆ ನೀಡಲಾಗಿತ್ತು. ವಿಶ್ವಸಂಸ್ಥೆಯೊಂದಿಗೆ ಭಾರತ ಸರ್ಕಾರವು ಈ ಸಾಮಾಜಿಕ ಸಮಸ್ಯೆಗಳನ್ನು ತೊಡೆದುಹಾಕಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ : Tata Punch: ಭಾರತದಲ್ಲಿ ಟಾಟಾ ಪಂಚ್ ಅತ್ಯಂತ ಸುರಕ್ಷಿತ ಕಾರು, ವೈಶಿಷ್ಟ್ಯ ಮತ್ತು ಬೆಲೆ ತಿಳಿಯಿರಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.