ನವದೆಹಲಿ: ಭಾನುವಾರ ಬೆಳಿಗ್ಗೆ ರಾಜಸ್ಥಾನದ ಜೋಧಪುರ್ ಸಮೀಪದ ರಸ್ತೆ ಅಪಘಾತದಲ್ಲಿ ವಿಶ್ವಖ್ಯಾತಿಯ ನೃತ್ಯಗಾರ ಕ್ವೀನ್ ಹರೀಶ್ ಮತ್ತು ಇತರ ಮೂವರು ಜಾನಪದ ಕಲಾವಿದರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜೈಸಲ್ಮೇರ್ನಿಂದ ಅಜ್ಮೀರ್ ಕಡೆಗೆ ಜಾನಪದ ಕಲಾವಿದರನ್ನೊಳಗೊಂಡ ತಂಡವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ  ಜೋಧ್ಪುರ್ ಹೆದ್ದಾರಿಯಲ್ಲಿರುವ ಕಪಾರ್ಡಾ ಗ್ರಾಮದ ಬಳಿ  ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.


ಈಗ ಕ್ವೀನ್ ಹರೀಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  "ಜೋಧ್ಪುರದ ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಕಲಾವಿದ ರಾಣಿ ಹರೀಶ್ ಸೇರಿದಂತೆ ನಾಲ್ಕು ಮಂದಿ ಸಾವು ನಿಜಕ್ಕೂ ದುಃಖಕರ, ಅವರು ರಾಜಸ್ಥಾನದ ಜಾನಪದ ಕಲೆ ಮತ್ತು ಸಂಸ್ಕೃತಿಗೆ ಸಮರ್ಪಿಸಿಕೊಂಡಿದ್ದರು , ಹರೀಶ್ ತಮ್ಮ ವಿಭಿನ್ನ ಶೈಲಿಯಿಂದಾಗಿ ಜೈಸಲ್ಮೇರ್ಗೆ ಹೊಸ ಗುರುತನ್ನು ನೀಡಿದ್ದಾರೆ. ಅವರ ನಿಧನ ಜಾನಪದ ಕಲೆಯ ಕ್ಷೇತ್ರಕ್ಕೆ ನಷ್ಟ, " ಎಂದು ಗೆಹ್ಲೋಟ್ ಹೇಳಿದರು.


ಜೈಸಲ್ಮೇರ್ ನವರಾದ ಹರೀಶ್ ಕುಮಾರ್ ಕ್ವೀನ್ ಹರೀಶ್ ಎಂದೇ ಜನಪ್ರಿಯರಾಗಿದ್ದರು.ಘೂಮರ್, ಕಾಲ್ಬೆಲಿಯಾ, ಚಾಂಗ್, ಭವಾ, ಚರಿ ಮುಂತಾದ ವಿವಿಧ ಜಾನಪದ ನೃತ್ಯ ರೂಪಗಳನ್ನು ಒಳಗೊಂಡ ಅವನ ಪ್ರದರ್ಶನಗಳು ಬಹಳ ಜನಪ್ರಿಯವಾಗಿವೆ.