ಪುಣೆ: ಬರಾಮಾತಿಯಲ್ಲಿ ಕೃಷಿ ಪ್ರದರ್ಶನವನ್ನು ಪ್ರಾರಂಭಿಸಲಾಗಿದ್ದು ಅಲ್ಲಿ 40 ಅಡಿಗಳ ಕಬ್ಬು ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಈ ಅತಿ ಉದ್ದದ ಕಬ್ಬನ್ನು ನೋಡಲು ಜನ ಆಕರ್ಷಕರಾಗಿದ್ದಾರೆ. ಪುಣೆ ಸಮೀಪದ ಹಾದಪ್ಸರ್ ರೈತ, ರಾಜೇಂದ್ರ ಯಾದವ್ ತಮ್ಮ ಮನೆಯ ಮುಂದೆ ಈ ಕಬ್ಬನ್ನು ಬೆಳೆದಿದ್ದಾರೆ. ನಿರಂತರವಾಗಿ ಎರಡು ವರ್ಷಗಳಿಂದ ಈ ಕಬ್ಬು ಬೆಳೆಯುತ್ತಿದೆ. ಸಾಮಾನ್ಯವಾಗಿ ಕಬ್ಬು 14 ರಿಂದ 15 ಅಡಿಗಳಷ್ಟು ಬೆಳೆಯುತ್ತದೆ, ಆದರೆ ರಾಜೇಂದ್ರ ಯಾದವ್ನ ಈ ಕಬ್ಬು ಈಗ 40 ಅಡಿಗಳಷ್ಟು ಬೆಳೆಸಿದ್ದು, ಇದು ಇನ್ನೂ ಎತ್ತರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕಬ್ಬಿನ ಚರ್ಚೆಯಾಗುತ್ತಿದ್ದಂತೆ ರಾಜೇಂದ್ರ ಅವರನ್ನು ಭೇಟಿಯಾದ ಸಂಶೋಧಕರು, ಸಾಮಾನ್ಯವಾಗಿ ಕಬ್ಬು 12 ರಿಂದ 13 ಅಡಿ ಉದ್ದವಿರುತ್ತದೆ. ಬಳಿಕ ಗಾಳಿಯಿಂದ ಮುರಿದು ಹೋಗುವ ಸಾಧ್ಯತೆಯೇ ಹೆಚ್ಚು. ಆದರೆ ಉತ್ತಮ ಪೋಷಣೆಯಿಂದ ಇದನ್ನು ಸಾಧಿಸಬಹುದು. ರಾಜೇಂದ್ರ ಯಾದವ್ ಇದನ್ನು ಸಾಬೀತು ಪಡಿಸಿದ್ದಾರೆ ಎಂದಿದ್ದಾರೆ.


ಇನ್ನು ಈ ಬಗ್ಗೆ ಮಾತನಾಡಿರುವ ರಾಜೇಂದ್ರ ಯಾದವ್, "ಕಬ್ಬು ನೆಟ್ಟ ಕೆಲವು ದಿನಗಳ ನಂತರ ಅದು 7 ರಿಂದ 8 ಅಡಿಗಳಷ್ಟು ಬೆಳೆದಿತ್ತು. ನಂತರ ಅದು ತಿರುಗಲು ಪ್ರಾರಂಭಿಸಿತ್ತು. ಬಳಿಕ ನಾವು ಅದನ್ನು ನೆರವಾಗಿಸಲು ಪ್ರಾರಂಭಿಸಿಸಿದೆವು. ಜೊತೆಗೆ ಕಬ್ಬಿಗೆ ಉತ್ತಮ ನೀರಿನ ಪೂರೈಕೆ ಮಾಡಲಾಯಿತು. ನೀರಿನ ಪೂರೈಕೆ ಚೆನ್ನಾಗಿದ್ದರೆ ಕಬ್ಬು ಚೆನ್ನಾಗಿ ಬೆಳೆಯುತ್ತದೆ ಎಂಬುದು ಇದರಿಂದ ಸ್ಪಷ್ಟವಾಯಿತು. ಕಬ್ಬು 40 ಅಡಿಯಷ್ಟಾಗುತ್ತದೆ ಎಂದು ನಾವು ಯೋಚಿಸಿರಲಿಲ್ಲ. ಪ್ರಸ್ತುತ ಅದನ್ನು ಗಮನಿಸಿದರೆ ಅದು ಇನ್ನೂ ಹೆಚ್ಚಾಗಬಹುದು ಎಂದೆನಿಸುತ್ತದೆ. ಅದಕ್ಕಾಗಿ ನಾನು ಅದನ್ನು ಕೃಷಿ ಪ್ರದರ್ಶನದಲ್ಲಿ ತಂದಿದ್ದೇನೆ" ಎಂದರು.


ರಾಜೇಂದ್ರ ಅವರ ಈ ಕಬ್ಬನ್ನು ನೋಡಲು ಅಕ್ಕ-ಪಕ್ಕದ ಗ್ರಾಮದವರೂ ಬರುತ್ತಾರೆ ಎನ್ನಲಾಗಿದೆ. ಸದ್ಯ ರಾಜೇಂದ್ರ ಅವರ ಸ್ಥಳದಲ್ಲಿ 15 ರಿಂದ 16 ಕಬ್ಬು ಮಾತ್ರ ಇವೆ. ಅವು ಈ ಕಬ್ಬಿನಂತೆಯೇ ಉದ್ದವಾಗುವುದೇ ಎಂದು ಪ್ರಶ್ನಿಸಿದರೆ ಉತ್ತರ ಹೌದು.


ಕಬ್ಬನ್ನು ಉದ್ದವಾಗಿಸಲು(ಉತ್ತಮವಾಗಿಸಲು) ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅದು ಸ್ವಲ್ಪ ಬೆಳೆದಂತೆ ಗಾಳಿಯಿಂದಾಗಿ ಬೀಳುತ್ತದೆ. ರೈತರು ಸರಿಯಾದ ಬೆಂಬಲವನ್ನು ಸಿದ್ಧಪಡಿಸಿದಲ್ಲಿ ಕಬ್ಬು ಹೆಚ್ಚು ಉದ್ದ ಬೆಳೆಯಲು ಸಾಧ್ಯವಾಗುತ್ತದೆ. ರೈತರು ಅಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ನೂರಾರು ಎಕರೆ ಭೂಮಿಯಲ್ಲಿ ಕಬ್ಬನ್ನು ಈ ರೀತಿ ಬೆಳೆಸುವುದು ಸ್ವಲ್ಪ ಕಷ್ಟಕರ. ಆದರೆ ಅಸಾಧ್ಯವಲ್ಲ. ವಿಭಿನ್ನ ತಂತ್ರಗಳನ್ನು ಬಳಸುವುದರಿಂದ ಇದು ಸಾಧ್ಯವಾಗುತ್ತದೆ. ಇದು ಕಬ್ಬು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.