ಪುಟ್ಟ ಹಳ್ಳಿಯಾದರೂ ಇರುವವರೆಲ್ಲಾ ಕುಬೇರ ವಂಶಸ್ಥರರೇ !17 ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ 7000 ಕೋಟಿ FD! ಇದು ನಮ್ಮದೇ ದೇಶದ ಹಳ್ಳಿ
World Richest Village in India :ಈ ಹಳ್ಳಿಯಲ್ಲಿ ಇರುವುದು ಒಂದರ ಹಿಂದೆ ಒಂದರಂತೆ ಐಷಾರಾಮಿ ಬಂಗಲೆಗಳು, ಕಾರುಗಳು.ಮಾತ್ರವಲ್ಲ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೋಟಿಗಟ್ಟಲೆ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಕೋಟ್ಯಾಧಿಪತಿಯೇ.
World Richest Village in India : ಒಂದು ಹಳ್ಳಿ ಅಂದರೆ ಮುರಿದ ರಸ್ತೆಗಳು, ಮಣ್ಣಿನ ಮನೆಗಳು, ಬಡತನ ಮತ್ತು ಯಾವ ಸೌಕರ್ಯವೂ ಇಲ್ಲದೆ ಬಡ ಜನರೇ ಇರುವ ಪ್ರದೇಶ ಎನ್ನುವುದು ಸಾಮಾನ್ಯವಾಗಿ ಎಲ್ಲರ ಮನದಲ್ಲಿ ಇರುವ ಭಾವನೆ. ಹಳ್ಳಿಯ ಜನರು ತಮ್ಮ ಅಗತ್ಯಗಳನ್ನು ಕಡಿಮೆ ಸಂಪನ್ಮೂಲಗಳೊಂದಿಗೆ ಪೂರೈಸುತ್ತಾರೆ. ಆದರೆ ಇಂದು ಇಲ್ಲಿ ಹೇಳಲು ಹೊರಟಿರುವ ಹಳ್ಳಿ ಮುಂದೆ ದೆಹಲಿ-ಮುಂಬೈನಂತಹ ನಗರಗಳು ಕೂಡಾ ವಿಫಲವಾಗಿವೆ. ಈ ಹಳ್ಳಿಯಲ್ಲಿ ಇರುವುದು ಒಂದರ ಹಿಂದೆ ಒಂದರಂತೆ ಐಷಾರಾಮಿ ಬಂಗಲೆಗಳು, ಕಾರುಗಳು.ಮಾತ್ರವಲ್ಲ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೋಟಿಗಟ್ಟಲೆ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಕೋಟ್ಯಾಧಿಪತಿಯೇ.
ಶ್ರೀಮಂತ ಗ್ರಾಮ ಎಲ್ಲಿದೆ ? :
ಗುಜರಾತಿನ ಕಚ್ ಜಿಲ್ಲೆಯ ಮಧಾಪರ್ ಗ್ರಾಮವು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವೆಂದು ಪರಿಗಣಿಸಲ್ಪಟ್ಟಿದೆ.ಇಲ್ಲಿರುವ ಬಹುತೇಕರು ಲಕ್ಷಾಧಿಪತಿಗಳಾಗಿದ್ದಾರೆ ಎಂಬ ಅಂಶದಿಂದಲೇ ಈ ಗ್ರಾಮದ ಶ್ರೀಮಂತಿಕೆಯನ್ನು ಅಳೆಯಬಹುದು. 32 ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಜನರಿಗೆ ಹಣದ ಕೊರತೆ ಇಲ್ಲ. ಗ್ರಾಮದಲ್ಲಿ ವಾಸಿಸುವ ಹೆಚ್ಚಿನವರು ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಗ್ರಾಮದ ಪ್ರಗತಿಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಮುಂದಿನ ನಾಲ್ಕು ದಿನ ಈ ಭಾಗಗಳಲ್ಲಿ ಭಾರೀ ಮಳೆ ಬಗ್ಗೆ ಐಎಂಡಿ ಎಚ್ಚರಿಕೆ
7000 ಕೋಟಿ ಮೌಲ್ಯದ ಎಫ್‌ಡಿ ಹೊಂದಿರುವ ಹಳ್ಳಿಗರು :
ಮಾದಾಪರ್ ಗ್ರಾಮದಲ್ಲಿ ದೊಡ್ಡ ನಗರಗಳಲ್ಲಿ ಲಭ್ಯವಿರುವಂತೆ ಉತ್ತಮ ರಸ್ತೆಗಳು, ಉತ್ತಮ ನೀರು ಸರಬರಾಜು, ಉತ್ತಮ ನೈರ್ಮಲ್ಯ ವ್ಯವಸ್ಥೆ, ಶಾಲೆ, ಆರೋಗ್ಯದಂತಹ ಎಲ್ಲಾ ಸೌಲಭ್ಯಗಳು ಇವೆ. ಇಲ್ಲಿ ಒಂದಲ್ಲ ಎರಡಲ್ಲ 17 ಬ್ಯಾಂಕ್ ಶಾಖೆಗಳಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಈ ಗ್ರಾಮದಲ್ಲಿವೆ. ಈ ಬ್ಯಾಂಕ್‌ಗಳಲ್ಲಿ ಗ್ರಾಮಸ್ಥರು 7000 ಕೋಟಿ ರೂ. ಎಫ್ ದಿ ಇಟ್ಟಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
ಹಳ್ಳಿಗರ ಸಂಪತ್ತಿನ ರಹಸ್ಯವೇನು, ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ? :
ಹಣವಿದೆ ಎಂದರೆ ಹಳ್ಳಿಗರು ದುಡಿಯುವುದಿಲ್ಲ ಎಂದಲ್ಲ. ಅವರು ಕೃಷಿಯಿಂದ ಹಿಡಿದು ಅಂಗಡಿ ನಡೆಸುವುದು, ವ್ಯಾಪಾರ ಹೀಗೆ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ. ಹೀಗಿರುವಾಗ ಅವರೆಲ್ಲರ ಮನಸ್ಸಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಕಾಡುತ್ತಿರಬಹುದು. ಗ್ರಾಮದ ಸುಮಾರು 1200 ಜನರ ಕುಟುಂಬ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ವಿದೇಶದಲ್ಲಿ ನೆಲೆಸಿದ್ದರೂ ಹಳ್ಳಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ವಿದೇಶದಲ್ಲಿ ವಾಸಿಸುವ ಜನರು ತಮ್ಮ ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿಗೆ ಹಣವನ್ನು ಕಳುಹಿಸುತ್ತಾರೆ. ಅಷ್ಟೇ ಅಲ್ಲ, ಅವರು ತಮ್ಮ ಗಳಿಕೆಯ ಒಂದು ಭಾಗವನ್ನು ಸ್ಥಳೀಯ ಬ್ಯಾಂಕ್‌ಗಳು ಮತ್ತು ಮಾಧಾಪರ್‌ನ ಅಂಚೆ ಕಚೇರಿಗಳಲ್ಲಿ ಠೇವಣಿ ಮಾಡುತ್ತಾರೆ.ಅನಿವಾಸಿ ಭಾರತೀಯರ ಈ ಹಣದಿಂದಾಗಿ ಬ್ಯಾಂಕ್‌ಗಳಲ್ಲಿ ಅಪಾರ ಪ್ರಮಾಣದ ಹಣ ಜಮೆಯಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಬ್ಯಾಂಕ್‌ಗಳಲ್ಲಿ 7000 ಕೋಟಿ ರೂ :
ಅನಿವಾಸಿ ಭಾರತೀಯರಿಂದ ಬರುವ ಹಣವೇ ಇಲ್ಲಿನ ದೊಡ್ಡ ಆದಾಯದ ಮೂಲವಾಗಿದೆ. ಅವರ ಹಣದಿಂದಾಗಿ ಇಲ್ಲಿನ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ 7000 ಕೋಟಿ ರೂ.ಗೂ ಹೆಚ್ಚು ಹಣ ಜಮೆಯಾಗಿದೆ. ಇದಲ್ಲದೇ ಗ್ರಾಮದ ಜನರು ಕೃಷಿ ಮಾಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ವಿದೇಶದಲ್ಲಿ ಉಳಿದಿರುವ ಗ್ರಾಮಸ್ಥರನ್ನು ದೇಶ ಮತ್ತು ಹಳ್ಳಿಯೊಂದಿಗೆ ಸಂಪರ್ಕಿಸಲು ಮಧಾಪರ್ ಗ್ರಾಮ ಸಂಘವನ್ನು ರಚಿಸಲಾಯಿತು. ಈ ಮೂಲಕ ವಿದೇಶದಲ್ಲಿ ವಾಸಿಸುವ ಹಳ್ಳಿಯ ಜನರೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ