ನವದೆಹಲಿ: ಈ ವರ್ಷದ ಮೊದಲ ಚಂದ್ರಗ್ರಹಣ ನಾಳೆ ಸಂಭವಿಸಲಿದೆ. ಜನವರಿ 10 ರಂದು ರಾತ್ರಿ 10ಗಂಟೆ 38ನಿಮಿಷಕ್ಕೆ ಈ ಗ್ರಹಣ ಆರಂಭಗೊಳ್ಳಲಿದೆ. ರಾತ್ರಿ 2.42ಕ್ಕೆ ಈ ಗ್ರಹಣ ಮುಕ್ತಾಯವಾಗಲಿದೆ. ಭಾರತದ ಜೊತೆಗೆ ಅಮೇರಿಕಾ, ಕೆನಡಾ, ಬ್ರೆಜಿಲ್, ಅರ್ಜೆಂಟೀನಗಳಂತಹ ದೇಶಗಳಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ವೈಜ್ಞಾನಿಕ ದೃಷ್ಟಿಯಿಂದ ಹೇಳುವುದಾದರೆ ಈ ಗ್ರಹಣವನ್ನು ಖಗ್ರಾಸ್ ಚಂದ್ರಗ್ರಹಣ ಎಂದು ಹೇಳುವುದು ತಪ್ಪು.  ಏಕೆಂದರೆ ವೈಜ್ಞಾನಿಕ ದೃಷ್ಟಿಯಲ್ಲಿ ಇದು ಖಂಡಗ್ರಾಸ್ ಚಂದ್ರಗ್ರಹಣವಾಗಿದೆ. ಈ ಗ್ರಹಣದಲ್ಲಿ ಚಂದ್ರನ ಸ್ಥಿತಿಯಲ್ಲಿ ಯಾವುದೇ ವಿಶೇಷ ಬದಲಾವಣೆ ಸಂಭವಿಸುವುದಿಲ್ಲ. ಆದ್ರೆ, ಚಂದಿರನ ಒಂದು ಸುಂದರ ಸ್ಥಿತಿಗೆ ಈ ಗ್ರಹಣ ಸಾಕ್ಷಿಯಾಗಲಿದೆ. ಈ ಚಂದ್ರಗ್ರಹಣದ ವಿಶೇಷತೆ ಎಂದರೆ, ಇದು ವರ್ಷ 2020ರಲ್ಲಿ ಸಂಭವಿಸುವ ಮೊದಲ ಚಂದ್ರಗ್ರಹಣವಾಗಿದೆ.


COMMERCIAL BREAK
SCROLL TO CONTINUE READING

ವರ್ಷ 2019 ರ ಕೊನೆಯಲ್ಲಿ ಇಡಿ ವಿಶ್ವ ಒಂದು ಅದ್ಭುತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದನ್ನು ರಿಂಗ್ ಆಫ್ ಫೈರ್ ಎಂದೂ ಕೂಡ ಕರೆಯಲಾಗಿತ್ತು. ಇದೀಗ ವರ್ಷ 2020ರ ಎರಡನೆಯ ವಾರದಲ್ಲಿಯೇ ಒಂದು ಚಂದ್ರಗ್ರಹಣದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಯುರೋಪ್ ಹಾಗೂ ಅಮೇರಿಕಾಗಳಂತಹ ದೇಶಗಳು ಇದಕ್ಕೆ 'ವೂಲ್ಫ್ ಇಕ್ಲಿಪ್ಸ್' ಎಂದು ಹೆಸರಿಸಿವೆ. ಇಂತಹ ಖಗೋಳದ ಘಟನೆಗಳಿಗೆ ಹೆಸರನ್ನು ಇರುವ ಒಂದು ಪರಂಪರೆ ಯುರೋಪ್ ನ ದೇಶಗಳಲ್ಲಿದೆ.


ಗ್ರಹಣದ ಕಾಲಾವಧಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣದ ಕಾಲಾವಧಿಯಲ್ಲಿ ವೈದಿಕ ಮಂತ್ರಗಳನ್ನು ಪಠಿಸಬೇಕು. ಆದರೆ, ಪೂಜೆ, ಕೈಂಕರ್ಯಗಳನ್ನು ನಡೆಸಬಾರದು. ಮನಸ್ಸಿನಲ್ಲಿಯೇ ದೇವರ ನಾಮಸ್ಮರಣೆ ಮಾಡಬೇಕು ಹಾಗೂ ದೇವರ ಕೊನೆಯ ಕಪಾಟ ಮುಚ್ಚಬೇಕು. ಗ್ರಹಣದ ಕಾಲಾವಧಿಯಲ್ಲಿ ದೇವರ ಮೂರ್ತಿಯನ್ನು ಸ್ಪರ್ಶಿಸಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರ ನದಿಯಲ್ಲಿ ಸ್ನಾನ ಕೈಗೊಳ್ಳಬೇಕು. ವೇದ ಮಂತ್ರಗಳನ್ನು ಪಠಿಸಬೇಕು ಹಾಗೂ ಈ ಸಂದರ್ಭದಲ್ಲಿ ಮಂತ್ರ ಸಿದ್ಧಿಗೂ ಕೂಡ ವಿಶೇಷ ಮಹತ್ವವಿದೆ. ಗ್ರಹಣದ ವೇಳೆ ಆಹಾರ ಸೇವನೆ, ನೀರು ಸೇವನೆ, ನಿದ್ರೆ ಮಾಡುವುದು, ಉಗುರು ಕತ್ತರಿಸುವುದು, ಎಣ್ಣೆ ಹಚ್ಚುವುದು ಇತ್ಯಾದಿ ಕಾರ್ಯಗಳು ವರ್ಜಿತವಾಗಿವೆ. ಆದರೆ, ಚಿಕ್ಕ ಮಕ್ಕಳು, ವೃದ್ಧರು, ಗರ್ಭವತಿ ಮಹಿಳೆಯರಿಗೆ ಶಾಸ್ತ್ರಗಳಲ್ಲಿ ಅನುಮತಿ ಕಲ್ಪಿಸಲಾಗಿದೆ.