Cheetah For India: ಪ್ರಧಾನಿ ಹುಟ್ಟುಹಬ್ಬದಂದು ಭಾರತಕ್ಕೆ ವಿಶ್ವದ ಅತೀ ವೇಗದ ಚಿರತೆಗಳ ಆಗಮನ:70 ವರ್ಷಗಳ ಬಳಿಕ ಈ ಸೋಜಿಗ
ಚಿರತೆಗಳೊಂದಿಗೆ ವಿಮಾನವು ಇಂದು ಮುಂಜಾನೆ ಭಾರತೀಯ ವಾಯುಪಡೆ (ಐಎಎಫ್) ನಿರ್ವಹಿಸುವ ಗ್ವಾಲಿಯರ್‌ನ ಮಹಾರಾಜಪುರ ವಾಯುನೆಲೆಗೆ ಆಗಮಿಸಲಿದೆ. ಒಂದು ಗಂಟೆಯ ನಂತರ, ಅವುಗಳನ್ನು IAF ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಗುತ್ತದೆ.
ನವದೆಹಲಿ: ವಿಶೇಷ ಸರಕು ಸಾಗಣೆ ವಿಮಾನದಲ್ಲಿ ನಮೀಬಿಯಾದಿಂದ ಎಂಟು ಚಿರತೆಗಳು ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಈ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತಿದೆ.
ಇದನ್ನೂ ಓದಿ: ಭಾರೀ ಮಳೆ ಅವಾಂತರ: ಲಕ್ನೋದಲ್ಲಿ ಗೋಡೆ ಕುಸಿದು ಮೂರು ಮಕ್ಕಳು ಸೇರಿದಂತೆ 9 ಮೃತ
ಚಿರತೆಗಳೊಂದಿಗೆ ವಿಮಾನವು ಇಂದು ಮುಂಜಾನೆ ಭಾರತೀಯ ವಾಯುಪಡೆ (ಐಎಎಫ್) ನಿರ್ವಹಿಸುವ ಗ್ವಾಲಿಯರ್‌ನ ಮಹಾರಾಜಪುರ ವಾಯುನೆಲೆಗೆ ಆಗಮಿಸಲಿದೆ. ಒಂದು ಗಂಟೆಯ ನಂತರ, ಅವುಗಳನ್ನು IAF ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಗುತ್ತದೆ.
ಚೀತಾ ಸಂರಕ್ಷಣಾ ನಿಧಿಯ (CCF) ಪ್ರಕಾರ, ನಮೀಬಿಯಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆ ಅತ್ಯಂತ ವೇಗದ ಭೂ ಪ್ರಾಣಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಭಾರತಕ್ಕೆ ಬಂದಿರುವ ಐದು ಹೆಣ್ಣು ಚಿರತೆಗಳು ಎರಡರಿಂದ ಐದು ವರ್ಷ ವಯಸ್ಸಿನವರಾಗಿದ್ದಾರೆ. ಗಂಡು ಚಿರತೆಗಳು 4.5 ವರ್ಷ ಮತ್ತು 5.5 ವರ್ಷಗಳ ನಡುವೆಯದ್ದಾಗಿದೆ ಎಂದು ತಿಳಿದುಬಂದಿದೆ.
ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು. ಆದರೆ 1952 ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು. ಖಂಡಾಂತರ ಸ್ಥಳಾಂತರ ಯೋಜನೆಯ ಭಾಗವಾಗಿ ಇದೀಗ ಎಂದು ಎಂಟು ಚಿರತೆಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಗುತ್ತಿದೆ.
ರಾಷ್ಟ್ರೀಯ ಉದ್ಯಾನವನವು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿದೆ, ಇದು ಗ್ವಾಲಿಯರ್‌ನಿಂದ ಸುಮಾರು 165 ಕಿಮೀ ದೂರದಲ್ಲಿದೆ. ಹೇರಳವಾದ ಬೇಟೆ ಮತ್ತು ಹುಲ್ಲುಗಾವಲುಗಳ ಕಾರಣದಿಂದಾಗಿ ಕುನೋ ಉದ್ಯಾನವನವನ್ನು ಪ್ರಾಣಿಗಳಿಗೆ ಸೂಕ್ತ ಎಂದು ಆಯ್ಕೆಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಈ ಮೂರು ಚಿರತೆಗಳನ್ನು ಪಾರ್ಕ್‌ನ ಕ್ವಾರಂಟೈನ್ ಆವರಣಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸೆನ್ಸೆಕ್ಸ್‌ನಲ್ಲಿ ಭಾರಿ ಕುಸಿತ : 17,500 ನಿಫ್ಟಿ ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ
ಪ್ರಪಂಚದಾದ್ಯಂತ 7,000 ಕ್ಕಿಂತ ಕಡಿಮೆ ಚಿರತೆಗಳು ಉಳಿದಿವೆ. ಮುಖ್ಯವಾಗಿ ಆಫ್ರಿಕನ್ ಸವನ್ನಾಗಳಲ್ಲಿ ಕಡಿಮೆ ಇವೆ ಎಂದು IUCN ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್ ಅಡಿಯಲ್ಲಿ ದುರ್ಬಲ ಎಂದು ಪರಿಗಣಿಸಲಾಗಿದೆ. ಈ ಚಿರತೆಗಳು ಪ್ರಪಂಚದ ಅತಿ ವೇಗದ ಭೂ ಪ್ರಾಣಿಗಳಾಗಿದ್ದು, ಗಂಟೆಗೆ 70 ಮೈಲುಗಳ (113 ಕಿಮೀ) ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.