World`s Tallest Railway Bridge: ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ
ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ ಕಂಬವನ್ನು ನಿರ್ಮಿಸಲಾಗುತ್ತಿದೆ. 141 ಮೀಟರ್‌ಗಳ (462 ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್‌ನ ಎತ್ತರದ ದಾಖಲೆಯನ್ನು ಮೀರಿಸುತ್ತಿದೆ.
ಇಂಫಾಲ್: ಭಾರತೀಯ ರೈಲ್ವೆಯು ಈಶಾನ್ಯ ರಾಜ್ಯ ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ ಕಂಬವನ್ನು (World's tallest railway bridge pier) ನಿರ್ಮಿಸುತ್ತಿದೆ. ಇದು 111 ಕಿ.ಮೀ ಉದ್ದದ ಜಿರಿಬಾಮ್-ಇಂಫಾಲ್ ರೈಲ್ವೆ ಯೋಜನೆಯ(Jiribam-Imphal project) ಭಾಗವಾಗಿದೆ.
ಮಣಿಪುರದ ಮಹತ್ವಾಕಾಂಕ್ಷೆಯ ಯೋಜನೆಯು ಮಣಿಪುರದ ರಾಜಧಾನಿಯನ್ನು ದೇಶದ ಬ್ರಾಡ್ ಗೇಜ್ ಜಾಲದೊಂದಿಗೆ (broad gauge network)ಸಂಪರ್ಕಿಸಲು 111 ಕಿಮೀ ಉದ್ದದ ಜಿರಿಬಾಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿದೆ. 141 ಮೀಟರ್‌ಗಳ (462 ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್‌ನ (Mala-Rijeka viaduct) ಎತ್ತರದ ದಾಖಲೆಯನ್ನು ಮೀರಿಸುತ್ತಿದೆ. ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್ ನ ಎತ್ತರ 139 ಮೀಟರ್ ಇದೆ.
ಇದನ್ನೂ ಓದಿ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ , 18 ಜನರ ದುರ್ಮರಣ
ಪ್ರಪಂಚದಲ್ಲಿಯೇ ಅತಿ ಎತ್ತರದ ರೈಲು ಸೇತುವೆ ನಿರ್ಮಾಣ(Railway Bridge Pier) ಕಾರ್ಯವನ್ನು ಈಶಾನ್ಯ ಗಡಿ ರೈಲ್ವೆ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಯೋಜನೆಯ ಪೂರ್ಣಗೊಳ್ಳುವಿಕೆಯೊಂದಿಗೆ 111 ಕಿಮೀ ದೂರವನ್ನು 2 ರಿಂದ 2.5 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ಜಿರಿಬಾಮ್-ಇಂಫಾಲ್ (NH-37) ನಡುವಿನ ಅಂತರವು 220 ಕಿಮೀ ಆಗಿದ್ದು, ಇದು ಸುಮಾರು 10 ರಿಂದ 12 ಗಂಟೆ ತೆಗೆದುಕೊಳ್ಳುತ್ತದೆ. ನಿರ್ಮಾಣ ಪೂರ್ಣಗೊಂಡ ನಂತರ ನೋನಿ ಕಣಿವೆಯನ್ನು ದಾಟುವ ಈ ಸೇತುವೆಯು ವಿಶ್ವದ ಅತಿ ಎತ್ತರದ ಕಂಬವಿರುವ ಸೇತುವೆಯಾಗಲಿದೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದರು.
ರೂಪ ಬದಲಿಸುವ ಮೂಲಕ ವಿನಾಶವನ್ನುಂಟು ಮಾಡುತ್ತಿರುವ ಕೊರೊನಾ ವೈರಸ್!: ಕೇಂದ್ರದ ಸಿದ್ಧತೆ ಹೇಗಿದೆ..?
ಸೇತುವೆಯ ನಿರ್ಮಾಣದಲ್ಲಿ ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಮಾತನಾಡಿದ ಶರ್ಮಾ, ಮಳೆಗಾಲದಲ್ಲಿ NH-37 ನಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತವೆ. ಇದು ಈ ಸ್ಥಳಕ್ಕೆ ಏಕೈಕ ಮಾರ್ಗವಾಗಿದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಆ ಸಮಯದಲ್ಲಿ ಇಲ್ಲಿ ಕೆಲಸ ಮಾಡುವುದು ಕಷ್ಟ ಎಂದರು. 111 ಕಿ. ಮೀ ಉದ್ದದ ಈ ರೈಲ್ವೆ ಮಾರ್ಗ ಸುಮಾರು 61 ಸುರಂಗಗಳನ್ನು ಒಳಗೊಂಡಿದೆ. ಸೇತುವೆಯ ಅಂದಾಜು ವೆಚ್ಚ 374 ಕೋಟಿ ರೂ. ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.