ನಾಪತ್ತೆಯಾಗಿದ್ದ ಎಎನ್-32 ವಿಮಾನದ ಅವಶೇಷ ಪತ್ತೆ!
ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸಾಂನ ಜೋರಾತ್ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಂಚುಕಕ್ಕೆ ವಾಯುನೆಲೆಗೆ ಹೊರಟಿದ್ದ ಭಾರತೀಯ ವಾಯುಪಡೆಯ AN-32 ವಿಮಾನ ಟೇಕಾಫ್ ಆದ ಅರ್ಧಗಂಟೆಯಲ್ಲಿಯೇ ಸಂಪರ್ಕ ಕಡಿದುಕೊಂಡಿತ್ತು.
ನವದೆಹಲಿ: ಸೋಮವಾರ ಮಧ್ಯಾಹ್ನ ಕಾಣೆಯಾಗಿದ್ದ ಭಾರತೀಯ ವಾಯುಪಡೆಯ AN-32 ಸಾರಿಗೆ ವಿಮಾನದ ಅವಶೇಷ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ಅರುಣಾಚಲ ಪ್ರದೇಶದ ವೆಸ್ಟ್ ಸಿಯಂಗ್ ಜಿಲ್ಲೆಯ ಟಟೊ ಸಮೀಪದಲ್ಲಿ ಭಾರತೀಯ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಲವಾರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸಾಂನ ಜೋರಾತ್ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಂಚುಕಕ್ಕೆ ವಾಯುನೆಲೆಗೆ ಹೊರಟಿದ್ದ ಭಾರತೀಯ ವಾಯುಪಡೆಯ AN-32 ವಿಮಾನ ಟೇಕಾಫ್ ಆದ ಅರ್ಧಗಂಟೆಯಲ್ಲಿಯೇ ಸಂಪರ್ಕ ಕಡಿದುಕೊಂಡಿತ್ತು.
ವಾಯುನೆಲೆಯೊಂದಿಗೆ ಸಂಪರ್ಕ ಕಡಿದುಕೊಂಡು ಎರಡೂವರೆ ಗಂಟೆಯಾದರೂ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ, ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆಯನ್ನು ವಾಯುಪಡೆ ಆರಂಭಿಸಿತ್ತು. ಈ ವಿಮಾನದಲ್ಲಿ 8 ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರು ಸೇರಿ 13 ಮಂದಿ ಪ್ರಯಾಣಿಸುತ್ತಿದ್ದರು.