ಲೇಖಕ ಚೇತನ್ ಭಗತ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗಿಲ್ಲ `ಅಚ್ಚೇ ದಿನ್`
ನವದೆಹಲಿ: ಚೇತನ್ ಭಗತ್ ಯಾರಿಗೆ ಗೊತ್ತಿಲ್ಲ ಹೇಳಿ, ತಮ್ಮ ಇಂಗ್ಲೀಷ್ ಕಾದಂಬರಿಗಳಿಂದ ಹಿಡಿದು ಪತ್ರಿಕಾ ಬರಹಗಳ ಮೂಲಕ ಯುವ ಜನರಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಆಲ್ಲದೇ ಇವರ ಪುಸ್ತಕಗಳು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ, ಒಂದು ಕಾಲದಲ್ಲಿ ಮೋದಿ ಅಭಿಮಾನಿಯಾಗಿದ್ದ ಚೇತನ್ ಭಗತ್ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಪರ ಬ್ಯಾಟಿಂಗ್ ಬೀಸಿದ್ದರು.
ಈಗ 2019 ರ ಚುನಾವಣೆಗೆ ಕೇವಲ ಒಂದು ವರ್ಷವಷ್ಟೇ ಬಾಕಿ ಇದೆ ಆದರೆ ಈಗ ಚೇತನ ಭಗತ್ ಭಿನ್ನ ನಿಲುವು ತಾಳಿದ್ದಾರೆ. ಈ ಏಪ್ರಿಲ್ 1 ರಿಂದ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮೋದಿ ಸರ್ಕಾರದ ಆಡಳಿತದ ಬಗ್ಗೆ ಸಮೀಕ್ಷೆಯನ್ನು ಮಾಡಿದರು ಇದರಲ್ಲಿ ಸುಮಾರು 38 ಸಾವಿರ ಜನರು ಭಾಗಿಯಾಗಿದ್ದರು, ಅದರಲ್ಲಿ ಶೇಕಡಾ 58 ರಷ್ಟು ಜನರು ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್ ಭಗತ್ ಟ್ವಿಟ್ಟರ್ ನಂತಹ ಸೋಶಿಯಲ್ ಮಿಡಿಯಾದಲ್ಲಿ ಇತರರಿಗಿಂತ ಮೋದಿಯವರು ಮುಂದಿದಿದ್ದಾರೆ.ಆದರಿಂದ ಇಲ್ಲಿ ಯುವಕರು ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಅಚ್ಚರಿ ಎಂದು ತಿಳಿಸಿದ್ದಾರೆ.