ನವದೆಹಲಿ: ಪ್ರೇಮಿಗಳ ದಿನಾಚರಣೆ ಕೊಡುಗೆಯಾಗಿ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ Xiaomi ಬುಧವಾರ Xiaomi Redmi Note 5, Redmi Note 5 Pro and Mi TV 4 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

Xiaomi Redmi Note 5, Redmi Note 5 Pro and Mi TV 4 ಸ್ಮಾರ್ಟ್ ಫೋನ್ಗಳು ಫೆಬ್ರವರಿ 22 ರಂದು ಫ್ಲಿಪ್ ಕಾರ್ಟ್, Mi.com ಮತ್ತು Mi Homeನಲ್ಲಿ ಮಾತ್ರ ಮಾರಾಟವಾಗಲಿದೆ.


Redmi Note 5


ತನ್ನ ಇತರ ಸ್ಮಾರ್ಟ್ ಫೋನ್ಗಳಲ್ಲಿ Redmi Note 5, ಅತಿ ತೆಳುವಾದ ಫೋನ್ ಎಂದು ಹೇಳಲಾಗಿದೆ. ಲೇಕ್ ಬ್ಲೂ, ರೋಸ್ ಗೋಲ್ಡ್, ಬ್ಲಾಕ್, ಮತ್ತು ಗೋಲ್ಡ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ದೊರೆಯಲಿದೆ. 5.99 ಇಂಚಿನ ಡಿಸ್ ಪ್ಲೇ ಹೊಂದಿರುವ Xiaomi Redmi Note 5, 12MP ಹಿಂಬದಿಯ ಕ್ಯಾಮರಾ 1.25um ಪಿಕ್ಸೆಲ್ ಗಾತ್ರ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಮುಂಬದಿ ಮತ್ತು ಹಿಂಬದಿಯ ಕ್ಯಾಮೆರಾಗಳೆರಡೂ ಎಲ್ಇಡಿ ಫ್ಲ್ಯಾಷ್ ಸಪೋರ್ಟ್ ಮಾಡಲಿವೆ. Redmi Note 4 ನಂತರದಲ್ಲಿ ಬಿಡುಗಡೆಯಾಗಿರುವ Xiaomi Redmi Note 5, ಅದೇ ಸ್ನಾಪ್ಡ್ರಾಗನ್ 625 ಪ್ರೊಸೆಸರ್ ಒಳಗೊಂಡಿದೆ. 


3 ಜಿಬಿ ರಾಮ್ ಮತ್ತು 32 ಜಿಬಿ ಶೇಖರಣಾ ಸಾಮರ್ಥ್ಯ ಹೊಂದಿರುವ ರೆಡ್ಮಿ ನೋಟ್ 5 ಬೆಲೆ 9,999 ರೂ.ಗಳು. ಹಾಗೇ 4 ಜಿಬಿ ರಾಮ್ ಮತ್ತು 64 ಜಿಬಿ ಶೇಖರಣಾ ಆಯ್ಕೆಗೆ 11,999 ರೂ. ದರ ನಿಗದಿಪಡಿಸಲಾಗಿದೆ. 


Redmi Note 5 Pro


ಇದೇ ಮೊದಲ ಬಾರಿಗೆ ಫೇಸ್ ಅನ್ಲಾಕ್ ವೈಶಿಷ್ಟ್ಯದೊಂದಿಗೆ Xiaomi ಬಿಡುಗಡೆ ಮಾಡಿದ ಮೊದಲ ಫೋನ್ Redmi Note 5 Pro ಆಗಿದೆ. 6 ಜಿಬಿ ರಾಮ್ ಜೊತೆಗೆ ಸ್ನಾಪ್ಡ್ರಾಗನ್ 636 ಪ್ರೊಸೆಸರ್ ಅನ್ನು Redmi Note 5 Pro ಹೊಂದಿದೆ. ಇದು ಕಪ್ಪು, ಗೋಲ್ಡ್, ರೋಸ್ ಗೋಲ್ಡ್ ಮತ್ತು ಲೇಕ್ ಬ್ಲೂ ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಎಲ್ಇಡಿ ಫ್ಲ್ಯಾಶ್ನೊಂದಿಗೆ ಡಬಲ್ ಹಿಂಬದಿಯ ಕ್ಯಾಮೆರಾ ಸಾಧನವು 20 ಎಂಪಿ ಸೆಲ್ಫ್ ಕ್ಯಾಮೆರಾವನ್ನು ಹೊಂದಿದೆ.


4 ಜಿಬಿ RAM ಮತ್ತು 64 ಜಿಬಿ ಶೇಖರಣಾ ಆಯ್ಕೆಗಾಗಿ 13,999 ರೂ. ಮತ್ತು 6 ಜಿಬಿ RAM ಮತ್ತು 64 ಜಿಬಿ ROM ಆಯ್ಕೆಗೆ 16,999 ರೂ. ದರ ನಿಗದಿಪಡಿಸಲಾಗಿದೆ. 


Mi TV 4
ಅಷ್ಟೇ ಅಲ್ಲದೆ, Xiaomi Mi TV 4 ಅನ್ನು 39,999 ರೂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದು ಕೇವಲ 4.9 ಎಂಎಂ ತೆಳುವಾಗಿದ್ದು, ಇದು ವಿಶ್ವದಲ್ಲೇ ಅತಿ ಸ್ಲಿಮೆಸ್ಟ್ ಟಿವಿ ಎಂದು ಕಂಪನಿ ಹೇಳಿಕೊಂಡಿದೆ.  Mi TV 4 ಸ್ಯಾಮ್ಸಂಗ್ ಪ್ಯಾನಲ್ ಬಳಸಲಾಗಿದ್ದು, ಇದು 55 ಇಂಚಿನ ಡಿಸ್ಪ್ಲೇ, 4 ಕೆ 4K UHD ರೆಸಲ್ಯೂಶನ್ (3840x2160) ಹೊಂದಿದೆ. 


ಇನ್ನು, Mi TV 4, 2 ಜಿಬಿ RAM, 8 ಜಿಬಿ ಸ್ಟೋರೇಜ್, 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್, ಡಾಲಿ ಆಡಿಯೋ ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ ವೈಫೈ, ಬಿಟಿ 4.0, ಎತರ್ನೆಟ್ ಮೊದಲಾದವುಗಳಿವೆ. ಈ ಸ್ಮಾರ್ಟ್ ಟಿವಿ , ಉಚಿತ ಚಂದಾದಾರಿಕೆ,  Mi IR ಕೇಬಲ್ ಮತ್ತು ಮೊದಲ 3 ತಿಂಗಳುಗಳ ಕಾಲ ಆನ್-ಸೈಟ್ ಸ್ಥಾಪನೆಯೊಂದಿಗೆ ಸೀಮಿತ ಅವಧಿಯ ಕೊಡುಗೆಯಾಗಿದೆ.